ನಟಿ ಹೇಮಾಶ್ರೀ ಕೊಲೆ ಕೇಸ್: ಆರೋಪಿ ಸುರೇಂದ್ರಗೆ ಜಾಮೀನು

ಬೆಂಗಳೂರು, ಆಗಸ್ಟ್ 26: ನಟಿ ಹೇಮಶ್ರೀ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ಆಕೆ ಪತಿ ಸುರೇಂದ್ರ ಬಾಬುಗೆ ಶುರುವಾಗಿದ್ದ ಕಟಂಕ ಈಗ ದೂರಾಗಿದೆ. ಸುರೇಂದ್ರ ಬಾಬುಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರಲು ಕಾದಿದ್ದಾರೆ.

ಕಳೆದ ವರ್ಷ ನವೆಂಬರ್ ನಲ್ಲಿ ಹೇಮಶ್ರೀ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಂದ್ರ ಪರ ಸಾಕ್ಷಿ ಹೇಳಿದವರ ಬಣ್ಣ ಬಯಲಾಗಿದ್ದು, ಎಲ್ಲರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲಾಗಿತ್ತು ಎಂಬ ಸತ್ಯ ಹೊರಬಿದ್ದಿದೆ. ಹೀಗಾಗಿ ಈ ಪ್ರಕರಣದ ಮರು ತನಿಖೆಗೆ ಆಗ್ರಹಿಸಲಾಗಿತ್ತು.[ಸಾಕ್ಷಿಗಳಿಗೆ ಲಂಚದ ಆಮಿಷ]

Actress Hemashree murder Case : Surendra Babu gets Bail

ಸುರೇಂದ್ರ ಸಾಕ್ಷಿಗಳಿಗೆ ಲಂಚದ ಆಮಿಷ ಒಡ್ಡಿದ್ದ ಎಂಬ ಆರೋಪ ಕೇಳಿ ಬಂದಿದೆ. ಆಂಧ್ರಪ್ರದೇಶದ ಮೂಲದ ಮಹೇಶ್, ಮೂವರು ಕಾರ್ಮಿಕರು ಹಾಗೂ ಕೃಷ್ಣ ಎಂಬುವವರೊಂದಿಗೆ ಸುರೇಂದ್ರ ಬಾಬು ಸಹೋದರರಾದ ಮಣಿಪಾಲ್, ಜಯಪಾಲ್ ಹಾಗೂ ಮಧ್ಯವರ್ತಿಯೊಬ್ಬ ಡೀಲ್ ಕುದುರಿಸುವ ದೃಶ್ಯಗಳು ಲಭ್ಯವಾಗಿತ್ತು. ಅದರೆ, ವಿಚಾರಣೆ ವೇಳೆ ಸಾಕ್ಷಿಗಳೆಲ್ಲ ಉಲ್ಟಾ ಹೇಳಿಕೆ ನೀಡಿದ್ದರಿಂದ ಸರಿಯಾದ ಸಾಕ್ಷಿ ಸಿಗದ ಕಾರಣ ಸುರೇಂದ್ರ ಮತ್ತೊಮ್ಮೆ ಬಚಾವಾಗಿದ್ದಾರೆ.

ಹೇಮಶ್ರೀ ಪತಿಯಾಗಿರುವ ಸುರೇಂದ್ರ ಬಾಬು, 2012ರ ಅಕ್ಟೋಬರ್ 8ರಂದು ಹೇಮಶ್ರೀಯನ್ನು ಕಾರಿನಲ್ಲಿ ಹೈದರಾಬಾದ್‌ಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಬಲವಂತವಾಗಿ ತೋಟದ ಮನೆಯಲ್ಲಿ ಆಕೆ ಮೇಲೆ ಕ್ಲೋರೋ ಫಾರಂ ಪ್ರಯೋಗಿಸಿ ಆತ್ಯಾಚಾರವೆಸಗಲು ಪ್ರಯತ್ನಿಸಿದ್ದ. ಕ್ಲೋರೋಫಾರಂ ಪ್ರಮಾಣ ಹೆಚ್ಚಾದ ಕಾರಣ ಹೇಮಶ್ರೀ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು.

ಹೇಮಶ್ರೀಗೆ ಕ್ಲೋರೋಫಾರಂ ನೀಡಿದ್ದು ತಾನೇ ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಸುರೇಂದ್ರ ಬಾಬು ಅವರನ್ನು ಬಂಧಿಸಿದ್ದರು. ಸದ್ಯ ಸುರೇಂದ್ರ ಬಾಬು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+