Breaking: ನಟ ಪುನೀತ್​ ರಾಜ್​ಕುಮಾರ್‌ಗೆ ಲಘು ಹೃದಯಾಘಾತ; ಆರೋಗ್ಯ ಸ್ಥಿತಿಯ ಅಪ್ಡೇಟ್

ಬೆಂಗಳೂರು, ಅಕ್ಟೋಬರ್ 29: ಕನ್ನಡ ಚಲನಚಿತ್ರ ನಟ ಪುನೀತ್​ ರಾಜ್​ಕುಮಾರ್‌ಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Recommended Video

      ಕರಾಳ ಶುಕ್ರವಾರ:ಪುನೀತ್ ರಾಜ್ ಕುಮಾರ್ ವಿಧಿವಶ | Oneindia Kannada

      ಪುನೀತ್​ ರಾಜ್​ಕುಮಾರ್‌ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ. ಇಸಿಜಿ ಬಳಿಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ವಿಕ್ರಂ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಆಗಮಿಸಿದ್ದಾರೆ.

      Actor Puneeth Rajkumar Admitted To Vikram Hospital In Bengaluru Due To Heart Attack

      ಗುರುವಾರ ರಾತ್ರಿಯೇ ಪುನೀತ್ ರಾಜ್‌ಕುಮಾರ್‌ಗೆ ಅನಾರೋಗ್ಯ ಕಾಡಿತ್ತು. ಇಂದು ಬೆಳಿಗ್ಗೆಯೂ ಸ್ವಲ್ಪ ಏರುಪೇರು ಆಗಿದ್ದರಿಂದ ವಿಕ್ರಂ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಪ್ರಾಥಮಿಕ ಪರೀಕ್ಷೆಗಳ ಪ್ರಕಾರ ಅವರ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

      ಪುನೀತ್ ರಾಜ್‌ಕುಮಾರ್ ವ್ಯಾಯಾಮ ಮಾಡುವ ಸಂದರ್ಭ ಲಘು ಹೃದಯಾಘಾತ ಆಗಿರುವ ಸಂಭವ ಇದ್ದು, ಆದರೆ ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ಆಸ್ಪತ್ರೆ ಮೂಲಗಳು ಹೇಳಿವೆ. ವಿಕ್ರಂ ಆಸ್ಪತ್ರೆಗೆ ಕುಟುಂಬ ಸದಸ್ಯರು ದೌಡಾಯಿಸುತ್ತಿದ್ದಾರೆ. ಸದ್ಯದ ವರದಿಯ ಪ್ರಕಾರ ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

      ಲಘು ಹೃದಯಾಘಾತ ಸುದ್ದಿ ಪುನೀತ್​ ರಾಜ್​ಕುಮಾರ್‌ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ಪುನೀತ್​ ಆರೋಗ್ಯದ ಬಗ್ಗೆ ಹಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಹೆಚ್ಚುವರಿ ನಗರ ಪೊಲೀಸ್ ಆಯುಕ್ತ ಮುರುಗನ್ ನೇತೃತ್ವದಲ್ಲಿ ಆಸ್ಪತ್ರೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

      ನಟ ಪುನೀತ್ ರಾಜ್‌ಕುಮಾರ್‌ ಆರೋಗ್ಯ ಸ್ಥಿತಿ ವಿಚಾರಿಸಲು ಚಿತ್ರರಂಗದ ಹಲವು ನಟರು ಆಸ್ಪತ್ರೆಗೆ ಆಗಮಿಸುತ್ತಿದ್ದು, ಸದ್ಯದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಕ್ರಂ ಆಸ್ಪತ್ರೆಗೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

      ನಟ ವಿ. ರವಿಚಂದ್ರನ್ ಕೂಡಾ ಆಸ್ಪತ್ರೆಗೆ ಆಗಮಿಸಿದ್ದು, ಚಲನಚಿತ್ರ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ರಾಕ್‌ಲೈನ್ ವೆಂಕಟೇಶ್, ಜಯಣ್ಣ ಕಣ್ಣೀರಿಡುತ್ತಲೇ ಆಸ್ಪತ್ರೆಗೆ ಆಗಮಿಸಿದ್ದಾರೆ.

      ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಟ ಪುನೀತ್ ರಾಜ್‌ಕುಮಾರ್‌ ಆರೋಗ್ಯ ಸ್ಥಿತಿ ವಿಚಾರಿಸಲು ವಿಕ್ರಂ ಆಸ್ಪತ್ರೆಗೆ ಆಗಮಿಸಿದ್ದಾರೆ. ಇದೇ ವೇಳೆ ಸಹೋದರ ಶಿವರಾಜಕುಮಾರ್, ನಿರ್ದೇಶಕ ಗುರುದತ್ ಆಗಮಿಸಿದ್ದಾರೆ. ಇನ್ನೂ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿಲ್ಲ.

      ಪೊಲೀಸರ ಭದ್ರತೆ: ಪುನೀತ್ ರಾಜ್ ಕುಮಾರ್ ಅಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ವಿಕ್ರಮ್ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಭಿಮಾನಿಗಳು ಸೇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಎದುರು ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಪುನೀತ್ ರಾಜ್ ಕುಮಾರ್ ಗೆ ಇದೇ ಮೊದಲ ಭಾರಿಗೆ ಅರೋಗ್ಯದಲ್ಲಿ ಏರು ಪೇರು ಕಾಣಿಸಿಕೊಂಡಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯರು ಶೀಘ್ರದಲ್ಲಿಯೇ ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ.

      ಸಿಎಂ ಭೇಟಿ: ಪುನೀತ್ ರಾಜ್ ಕುಮಾರ್ ಅನಾರೋಗ್ಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ಮಾಡಿದ್ದಾರೆ. ಪುನೀತ್ ಆರೋಗ್ಯ ವಿಚಾರಿಸಲು ತೆರಳಿದ್ದಾರೆ.

      ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಕ್ರಂ ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದು, ಪುನೀತ್ ರಾಜ್‌ಕುಮಾರ್‌ ಆರೋಗ್ಯ ಸ್ಥಿತಿ ತೀವ್ರ ಕ್ರಿಟಿಕಲ್ ಆಗಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆ ಕಡೆಗೆ ಚಿತ್ರರಂಗದ ನಟ- ನಟಿಯರು ದೌಡಾಯಿಸುತ್ತಿದ್ದಾರೆ.

      ಕೆಲ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಲಿದ್ದು, ಈ ವೇಳೆ ಪುನೀತ್ ರಾಜಕುಮಾರ್ ಸಹೋದರ ಶಿವರಾಜಕುಮಾರ್ ಹಾಜರಲಿದ್ದಾರೆ.

      ಕಂಠೀರವ ಸ್ಟೇಡಿಯಮ್‌ಗೆ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದು, ಕ್ರೀಡಾಂಗಣ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.

      ಪುನೀತ್ ರಾಜ್‌ಕುಮಾರ್‌ ನಿವಾಸಕ್ಕೆ ನಟ ಯಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಆಗಮಿಸಿದ್ದಾರೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+