ಮಧ್ಯರಾತ್ರಿ ಕರೆ ಮಾಡಿ 'ಏಯ್​ ನಿನ್​ ತಲೆ ತೆಗಿತೀನಿ ಅಂತಾರೆ' : ನಟ ಪ್ರಥಮ್

ದರ್ಶನ್​ ಅಭಿಮಾನಿಗಳಿಂದ ಬರುವ ಬೆದರಿಕೆ ಕರೆ ವಿರುದ್ಧ ನಟ ಪ್ರಥಮ್ ದೂರು ದಾಖಲಿಸಿದ್ದಾರೆ. ಬಳಿಕ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಪ್ರಥಮ್, ಮಧ್ಯ ರಾತ್ರಿ ಕರೆ ಮಾಡಿ ಕೊಲೆ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು.

ಏಯ್​ ನಿನ್​ ತಲೆ ತೆಗೆಯುತ್ತೇನೆ ಎಂದು ಮಧ್ಯರಾತ್ರಿ ಎರಡೂವರೆ ರಾತ್ರಿಗೆ ಫೋನ್​ ಮಾಡುತ್ತಾರೆ. ಆಫೀಸ್‌ಗೆ ಕರೆ ಮಾಡಿ ಪ್ರಥಮ್‌ಗೆ ಫೋನ್‌ ಕೊಡಿ, ಮಲಗಿದ್ರು ಪರವಾಗಿಲ್ಲ. ಎದ್ದೇಳಿಸಿ ಅವರಿಗೆ ಫೋನ್​ ಕೊಡಿ ಅನ್ನುತ್ತಾರೆ. ಆಫೀಸು ನಂಬರ್​ ಎಂದರೆ ಅವೆಲ್ಲ ಗೊತ್ತಿಲ್ಲ ಪ್ರಥಮ್​ ಫೋನ್​ ಕೊಡಿ ಎಂದು ಎರಡೂವರೆ ರಾತ್ರಿಯಲ್ಲಿ ಪೆದ್ದನ ಹಾಗೆ ಫೋನ್​ ಮಾಡುತ್ತಾನೆ ಎಂದರು.

Actor Olle Hudga Pratham Reaction On Darshan Thoogudeepa Fans Threat Call

ನಾನು ಹೇಳಿಕೆ ಕೊಟ್ಟಿರುವ ವಿಡಿಯೋವನ್ನು ಜನರು ಸರಿಯಾಗಿ ನೋಡಿಲ್ಲ. ಮೊದಲು ಫುಲ್‌ ವಿಡಿಯೋ ನೋಡಿ. ಮೊದಲು ಅಭಿಮಾನಿಗಳಿಗೆ ಏನು ಹೇಳುತ್ತೀರಾ ಅಂದರು. ಕಾನೂನು ಕಾನೂನು ರೀತಿಯಲ್ಲಿ ಕೆಲಸ ಮಾಡುತ್ತದೆ. ಪೊಲೀಸರು ಪೊಲೀಸ್​ ರೀತಿಯಲ್ಲಿ ಕೆಲಸ ಮಾಡ್ತಾರೆ. ಲಾಯರ್​ ಕೋರ್ಟಲ್ಲಿ ಅವರು ಕೆಲಸ ಮಾಡ್ತಾರೆ. ಮಾಧ್ಯಮ ಮೈಕ್​ ಹಿಡಿದುಕೊಂಡು ಕೆಲಸ ಮಾಡ್ತಾರೆ. ಕಾದು ಸುದ್ದಿ ಕೊಡುತ್ತಾರೆ. ನೀವು ಆರಾಮವಾಗಿ ಇದ್ದುಕೊಂಡು ಅಪ್ಪ-ಅಮ್ಮನ ನೋಡಿಕೊಂಡು ಚೆನ್ನಾಗಿ ಕೆಲಸ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದೆ.

ಬಳಿಕ ಅಂದಾಭಿಮಾನಿಗಳಿಗೆ ಏನು ಹೇಳುತ್ತೀರಾ ಕೇಳಿದರು, ಅದಕ್ಕೆ ಹಾಳಾದವು ಕೆಲಸವಿಲ್ಲದೇ ಅಲ್ಲಿ ಕುಳಿತುಕೊಂಡು ರೋಡ್​ ಬ್ಲಾಕ್​ ಮಾಡಿದ್ದಾರೆ. ನಾಲ್ಕು ತದ್ಕಿ ಕಳ್ಸಿ ಎಂದು ಹೇಳಿದೆ. ಇದು ಅಂದಾಭಿಮಾನಿಗಳಿಗೆ ಮಾತ್ರ ಹೇಳಿದ್ದು, ಇವರುಗಳಿಗೆ ಯಾಕೆ ಕೋಪ ಬರುತ್ತಿದೆ ಗೊತ್ತಾಗುತ್ತಿಲ್ಲ ಎಂದು ನಟ ಪ್ರಥಮ್‌ ಪ್ರಶ್ನಿಸಿದ್ದಾರೆ.

ಮಾತು ಮುಂದುವರಿಸಿದ ಅವರು, ನಾನು ಪ್ರಾಮಾಣಿಕವಾಗಿ ಒಂದು ಮಾತು ಹೇಳುತ್ತೇನೆ ಯಾವ ಕಲಾವಿದರನ್ನು ನಿಮ್ಮ ತಲೆಯ ಮೇಲೆ ಕೂರಿಸಿಕೊಳ್ಳಬೇಡಿ. ತಲೆಯಲ್ಲಿ ನೂರಾರು ಆಲೋಚನೆಗಳಿರುತ್ತದೆ. ಕೆಲಸ, ಸಂಸಾರ, ಇಎಂಐ ಇವುಗಳಿಗೆ ತಲೆಯಲ್ಲಿ ಜಾಗವಿಲ್ಲ. ಅಂತದರಲ್ಲಿ ತಲೆಯಲ್ಲಿ ಜಾಗ ಮಾಡಿಕೊಂಡು ಕಲಾವಿದರನ್ನು ಕೂರಿಸಿಕೊಂಡರೇ ನೀವೇ ಮುಳುಗಿ ಹೋಗುತ್ತೀರಾ. ಕಲಾವಿದರಿಗೋಸ್ಕರ ನಿಮ್ಮ ಬದುಕು ಹಾಳು ಮಾಡಿಕೊಳ್ಳಬೇಡಿ ಎಂದು ಪ್ರಥಮ್‌ ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+