Get Updates
Get notified of breaking news, exclusive insights, and must-see stories!

ಸೋಮವಾರದ ವರೆಗೂ ಜೈಲಿನಲ್ಲೇ ಇರಬೇಕು ದುನಿಯಾ ವಿಜಯ್‌

ಬೆಂಗಳೂರು, ಸೆಪ್ಟೆಂಬರ್ 29: ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಸೋಮವಾರಕ್ಕೆ ನ್ಯಾಯಾಲಯವು ಕಾಯ್ದಿರಿಸಿದೆ.

ಜಿಮ್ ಟ್ರೈನರ್ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ದುನಿಯಾ ವಿಜಯ್ ಅವರನ್ನು ಸೆಪ್ಟೆಂಬರ್ 23 ರಂದು ಬಂಧಿಸಲಾಗಿದೆ. ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಅವರು ಜಾಮೀನಿಗಾಗಿ ಮೊದಲು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು ಆದರೆ ಅಲ್ಲಿ ಅವರ ಅರ್ಜಿ ತಿರಸ್ಕೃತವಾಯಿತು. ಆ ನಂತರ ಅವರು ಸೆಷನ್ಸ್‌ ಕೋರ್ಟ್‌ ಮೊರೆ ಹೋಗಿದ್ದರು.

Actor Duniya VIjay bail application postponed to October 1st

ದುನಿಯಾ ವಿಜಯ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್‌ ನ್ಯಾಯಾಲಯವು ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದೆ. ಹಾಗಾಗಿ ದುನಿಯಾ ವಿಜಯ್ ಅವರಿಗೆ ಇನ್ನೂ ಎರಡು ದಿನಗಳ ಕಾಲ ಜೈಲೇ ಗತಿ ಆಗಲಿದೆ.

ದುನಿಯಾ ವಿಜಯ್ ಹಾಗೂ ಅವರ ನಾಲ್ಕು ಜನ ಸಂಗಡಿಗರು ಜಿಮ್ ಟ್ರೈನರ್ ಆಗಿರುವ ಮಾರುತಿ ಗೌಡ ಅವರನ್ನು ಸೆಪ್ಟೆಂಬರ್ 22ರಂದು ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+