ಬೆಂಗಳೂರು ಮಳೆ ಸಮಸ್ಯೆಗೆ ಉಪೇಂದ್ರ ಸೂಪರ್ 'ಐಡಿಯಾ'
Recommended Video

ಬೆಂಗಳೂರು, ಸೆಪ್ಟೆಂಬರ್ 4: ನಟ- ನಿರ್ದೇಶಕ ಉಪೇಂದ್ರ ಅವರ ಹೊಸ ರಾಜಕೀಯ ಪಕ್ಷ ನಿಧಾನಕ್ಕೆ ರೆಕ್ಕೆ ಬಿಚ್ಚಿಕೊಳ್ಳುತ್ತಿದೆ. ಸಿನಿಮಾಗಳಲ್ಲಿ ಟೀಸರ್, ಟ್ರೇಲರ್ ಅಂತ ಬಿಡುಗಡೆ ಮಾಡುವ ಹಾಗೆ ಇದೀಗ ಉಪೇಂದ್ರ ಮಳೆ ನೀರಿನಲ್ಲಿ ಮೈ ಮುಳುಗಿ ಹೋಗಿರುವ ಬೆಂಗಳೂರಿಗೆ ಪರಿಹಾರವೊಂದನ್ನು ಮುಂದಿಟ್ಟಿದ್ದಾರೆ.
ಐಡಿಯಾಗಳನ್ನು ತೆಗೆದುಕೊಳ್ಳುವುದೇ ಗ್ರೇಟೆಸ್ಟ್ ಐಡಿಯಾ ಎಂಬ ಉಪೇಂದ್ರ ಆಲೋಚನೆಗೆ ಸ್ಪಂದನೆ ಅಂತಲೇ ಇದನ್ನು ಭಾವಿಸಬೇಕು. ಕರ್ನಾಟಕದ ವ್ಯಕ್ತಿಯೊಬ್ಬರ ಬಳಿಯಿದ್ದ ಐಡಿಯಾವನ್ನು ಉಪೇಂದ್ರ ಎಲ್ಲರನ್ನೂ ತಲುಪುವಂತೆ ಮಾಡಿದ್ದಾರೆ. ಬೆಂಗಳೂರಿನ ಸಮಸ್ಯೆಗೆ ಅಮೆರಿಕದಲ್ಲಿ ವಾಸಿಸುವ ಕನ್ನಡಿಗ ಸೌರವ್ ಬಾಬು ಪರಿಹಾರ ಸೂಚಿಸಿದ್ದಾರೆ.
ಸೌರವ್ ರ ಆಲೋಚನೆಯಂತೆ ಮಾಡಿದರೆ ಬೆಂಗಳೂರಿನ ರಸ್ತೆಗಳ ಪಾಡು ಈಗಿನಂತಿರುವುದಿಲ್ಲ. ಜತೆಗೆ ಮಳೆ ನೀರಿನ ಸಮಸ್ಯೆಯೂ ಇರುವುದಿಲ್ಲ ಅನ್ನೋದು ಉಪೇಂದ್ರರಿಗೂ ಮೊದಲು ಸ್ಪಷ್ಟವಾಗಿದ್ದರಿಂದಲೇ ಸೆಪ್ಟೆಂಬರ್ ಮೂರರಂದು ಫೇಸ್ ಬುಕ್ ಲೈವ್ ಗೆ ಬಂದು ಈ ವಿಚಾರವನ್ನು ಮುಂದಿಟ್ಟಿದ್ದಾರೆ.
ರಸ್ತೆಗಳ ಮೇಲೆ ನೀರು ನಿಲ್ಲುವುದೇ ದೊಡ್ಡ ಸಮಸ್ಯೆ. ಹಾಗೆ ನೋಡಿದರೆ ಡಾಂಬರಿಗೂ ನೀರಿಗೂ ಅಂಥ ಚೆನ್ನಾಗಿ ಆಗಿಬರಲ್ಲ. ಆದ್ದರಿಂದ ಒಂದು ಹನಿ ನೀರು ರಸ್ತೆ ಮೇಲೆ ನಿಲ್ಲದಂತೆ ಒಳಚರಂಡಿ ತಲುಪಿದರೆ ಸಮಸ್ಯೆ ಫಿನಿಷ್. ಆದ್ದರಿಂದ ಎಲ್ಲ ರಸ್ತೆಗಳ ಪಕ್ಕ ಪೈಪ್ ಹಾಕಿ, ಅವುಗಳನ್ನು ಮುಖ್ಯ ಚರಂಡಿಗೆ ಜೋಡಣೆ ಮಾಡಿದರೆ ಸಮಸ್ಯೆಯೇ ಇರೋದಿಲ್ಲ ಅಂತಾರೆ ಸೌರವ್.

ಕಸ-ಕಡ್ಡಿಯೂ ನಿಲ್ಲಲ್ಲ
ನೀರು ಹೋಗುವುದಷ್ಟೇ ಅಲ್ಲ, ಕಸ-ಕಡ್ಡಿ ಅಂತ ಸೇರಿಕೊಂಡರೂ ಸ್ವಚ್ಛ ಮಾಡಿಕೊಳ್ಳುವುದು ಸಲೀಸು. ಹಾಗಂತ ಇದೇನೋ ಹೊಸದಾಗಿ ಅವತರಿಸಿದ ಆಲೋಚನೆ ಅಲ್ಲ. ಬಹುತೇಕ ನಗರಗಳಲ್ಲಿ ಹೀಗೇ ಇದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಇಲ್ಲ.

ಗುಂಡಿ ತೆಗೆಯೋಕೆ-ಚಪ್ಪಡಿ ಕೂರಿಸೋಕೆ ಖರ್ಚು
ಸದ್ಯಕ್ಕೆ ಗುಂಡಿ ತೆಗೆಯುವುದಕ್ಕೊಂದು ಕಾಂಟ್ರ್ಯಾಕ್ಟ್, ಚಪ್ಪಡಿ ಹಾಕುವುದಕ್ಕೆ, ಅದರ ಮೇಲೆ ಕಲ್ಲು ಮುಚ್ಚುವುದಕ್ಕೆ.. ಹೀಗೆ ಎಲ್ಲದಕ್ಕೂ ಹಣ... ಅಂಥ ಯಾವ ಖರ್ಚು ಈ ಹೊಸ ಆಲೋಚನೆಯಿಂದ ಆಗೋದಿಲ್ಲ. ಹಾಗಿದ್ದರೆ ಖರ್ಚು-ಸಮಯ ಎಷ್ಟಾಗುತ್ತದೆ ಎಂದು ತಿಳಿಯಲು ಮುಂದೆ ಓದಿ...

ಈಗಿನ ಬಜೆಟ್ ಗಿಂತ ಶೇಕಡಾ ಐವತ್ತರಷ್ಟು ಕಡಿಮೆ
ತುಂಬಾ ಖರ್ಚಾಗಬಹುದೇನೋ ಅಂದುಕೊಂಡರೆ ಈಗಿನ ಬಜೆಟ್ ಗಿಂತ ಐವತ್ತರಷ್ಟು ಕಡಿಮೆ ವೆಚ್ಚದಲ್ಲಿ ಹಾಗೂ ಮೂರು ತಿಂಗಳಲ್ಲಿ ಆಗುವ ಕೆಲಸವನ್ನು ಏಳೇ ದಿನದಲ್ಲಿ ಮಾಡಿ ಮುಗಿಸಬಹುದು ಅಂದಿದ್ದಾರೆ ಸೌರವ್.

ನೀರು ಶುದ್ಧೀಕರಿಸಿ ಪೂರೈಕೆ
ಇನ್ನು ಎಲ್ಲ ಬಡಾವಣೆಯ ಉದ್ಯಾನದ ಪಕ್ಕ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಿದರೆ ಮಳೆ ನೀರನ್ನೇ ಶುದ್ಧೀಕರಿಸಿ ಆಯಾ ಬಡಾವಣೆ ಜನರಿಗೆ ಪೂರೈಸುವ ಯೋಚನೆ ಕೂಡ ಅವರು ಮುಂದಿಟ್ಟಿದ್ದಾರೆ.

ಯಾವ ಪ್ರಯೋಜನವೂ ಆಗಿಲ್ಲ
ಇಂಥ ಆಲೋಚನೆಯೊಂದರ ವಿವರ, ಯೋಜನೆ ಬಗ್ಗೆ ಸಂಪೂರ್ಣ ವರದಿಯನ್ನು ಸೌರವ್ ಅವರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.

ಫೇಸ್ ಬುಕ್ ಲೈವ್ ನಲ್ಲಿ ಉಪೇಂದ್ರ
ನಾಲ್ಕು ವರ್ಷಗಳ ಕಾಲ ಈ ಯೋಜನೆಗಾಗಿ ಶ್ರಮ ಹಾಕಿದ್ದಾರೆ ಸೌರವ್. ಒಟ್ಟಾರೆಯಾಗಿ ಉಪೇಂದ್ರ ಅವರು ನಮ್ಮ ಮುಂದೆ ಕರೆತಂದಿರುವ ಸೌರವ್ ಆಲೋಚನೆ ಬಗ್ಗೆ ತಿಳಿಯಲು ವಿಡಿಯೋ ಇಲ್ಲಿದೆ, ನೋಡಿ.











Click it and Unblock the Notifications