Renukaswamy Murder Case: ಒಳ್ಳೆತನವೇ ಅವರನ್ನು ಕಾಪಾಡುತ್ತದೆ: ನಟ ದರ್ಶನ್ ಸಹೋದರಿ ಪತಿ
Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಈ ಕೊಲೆ ಪ್ರಕರಣದ ಆರೋಪಿ 2 ಆಗಿರುವ ನಟ ದರ್ಶನ್ ಅವರ ಮಾವ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಪೊಲೀಸರ ತನಿಖೆ ಎದುರಿಸುತ್ತಿದ್ದು, ದರ್ಶನ್ ಸಹೋದರಿ ದಿವ್ಯ ಅವರ ಪತಿ ಮಂಜುನಾಥ್ ಮೊದಲ ಬಾರಿ ಈ ಬಗ್ಗೆ ಪ್ರತಿಕ್ರಿಯೇ ನೀಡಿದ್ದಾರೆ.

"ಅವರನ್ನು ಪ್ರವೋಕ್ ಮಾಡಿ ಈ ಸ್ಥಿತಿಗೆ ತಂದಿದ್ದಾರೆ. ಅವರ ಗುಣ ಈ ರೀತಿಯಾಗಿಲ್ಲ. ಅವರು ಸಂತೋಷದಿದ್ದ ಎಲ್ಲಾರ ಬಳಿಯೂ ಚೆನ್ನಾಗಿ ಮಾತನಾಡಿಕೊಂಡಿದ್ದರು. ಅವರಿಗೆ ಕಿರಿ ಕಿರಿಯಾಗುವಂತೆ ಮಾಡಿದಾಗ ಈ ರೀತಿ ಆ್ಯಕ್ಷನ್ ತೆಗೆದುಕೊಳ್ಳುವ ಹಾಗೆ ಮಾಡಿ ತೊಂದರೆ ಕೊಡುತ್ತಿದ್ದಾರೆ. ಅವರ ಒಳ್ಳೆತನವೇ ಅವರನ್ನು ಕಾಪಾಡುತ್ತದೆ," ಎಂದು ಹೇಳಿದ್ದಾರೆ.
"ಅವರ ಬೇಸಿಕ್ ಗುಣ ಅದಲ್ಲ. ಸಂತೋಷದಿಂದ ಪ್ರಾಣಿ-ಪಕ್ಷಿಗಳ ಜೊತೆ ಅವರು ಕಾಲ ಕಳೆಯುತ್ತಿದ್ದರು. ಕೋರ್ಟ್ ಎಲ್ಲಾ ತೀರ್ಮಾನ ಮಾಡುತ್ತದೆ. ಅವರ ಜೀವನವನ್ನು ಅವರು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ನೋಡುವವರು ಬೇರೆಯ ರೀತಿ ತಿಳಿದುಕೊಂಡಿದ್ದಾರೆ. ಒಳ್ಳೆಯ ತೀರ್ಮಾನ ಬಂದು ಅದೆಲ್ಲ ಸರಿ ಹೋಗುತ್ತದೆ. ಅಲ್ಲಿಯವರೆಗೆ ಅಭಿಮಾನಿಗಳು ಶಾಂತಿ ಕಾಪಾಡಿಕೊಳ್ಳಬೇಕು. ದರ್ಶನ್ ಮತ್ತೆ ವಾಪಾಸ್ ಬರುತ್ತಾರೆ. ಅಲ್ಲಿಯವರೆಗೆ ಕಾಯಬೇಕು," ಎಂದು ಹೇಳಿದ್ದಾರೆ ಅಂತಾ ಮೂಲಗಳಿಂದ ತಿಳಿದುಬಂದಿದೆ.
ಚಿತ್ರರಂಗದಿಂದ ಬ್ಯಾನ್ ಮಾಡಿ: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ನೋಡಿದರೆ, ಹಿಂಸೆ ಕೊಟ್ಟಿರುವುದು ಅತ್ಯಂತ ಹೀನ ಕೃತ್ಯ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ನಟ ದರ್ಶನ್ ತೂಗುದೀಪ ಅವರಂಥವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದ್ದರೂ ತಪ್ಪು. ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಸೆಲೆಬ್ರೆಟಿಗಳು, ರಾಜಕಾರಣಿಗಳು ಎಂಬ ರಿಯಾಯಿತಿ ಯಾರಿಗೂ ಸಲ್ಲ. ಹತ್ಯೆಯಾಗಿರುವ ರೀತಿ ನೋಡಿದರೆ ಇದೊಂದು ಭೀಕರ ಹತ್ಯೆ ಎಂದು ಗೊತ್ತಾಗುತ್ತದೆ. ರೇಣುಕಾಸ್ವಾಮಿ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಆತ ತಪ್ಪು ಮಾಡಿದ್ದರೆ ಎರಡೇಟು ಕೊಡಬಹುದಿತ್ತು. ಎಚ್ಚರಿಕೆ ನೀಡಿ ಕಳುಹಿಸಬಹುದಿತ್ತು. ಆದರೆ, ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಕಾನೂನು ಯಾರೇ ಕೈಗೆತ್ತಿಕೊಂಡರೂ ಅಪರಾಧವೇ. ದಂಡಿಸಲು ಯಾರಿಗೂ ಅಧಿಕಾರ ಇಲ್ಲ. ನನಗೆ ಬೆದರಿಕೆ ಹಾಕಿದ್ದರು, ಬಾಯಿಗೆ ಬಂದಂತೆ ಬೈದಿದ್ದರು. ಕೋರ್ಟ್ ಇದೆ, ಕಾನೂನು ಇದೆ. ಕ್ರೂರಿಯಾಗಿ ನಡೆದುಕೊಂಡಿರುವ ರೀತಿ ನೋಡಿದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು.












Click it and Unblock the Notifications