Actor Darshan Prisoner No: ಕೈದಿ ನಂಬರ್ D 6106 ಕಟಿಂಗ್ ವಿಡಿಯೋ ಭಾರೀ ವೈರಲ್- ನೆಟ್ಟಿಗಳು ಹೇಳೋದೇನು?
ಬೆಂಗಳೂರು, ಜುಲೈ, 10: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಶೇರಿದ್ದು, ಇನ್ನು ದರ್ಶನ್‌ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ ಅನ್ನು ಹಾಕಿಸಿಕೊಂಡು ಕೆಲವರು ಅಂಧಾಭಿಮಾನ ಮೆರೆಯುತ್ತಿದ್ದಾರೆ.
ಮತ್ತೊಂದೆಡೆ ಅಂತಹವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಈ ನಡುವೆಯೇ ಕಟಿಂಗ್ ಶಾಪ್‌ವೊಂದಲ್ಲಿ (AIR Salon) ಯುವಕನೊಬ್ಬ ತಲೆಯಲ್ಲಿ ಈ ನಂಬರ್ ಬರೆಸಿಕೊಂಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಈ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಪತ್ನಿ ವಿಯಲಕ್ಷ್ಮಿ & ಕುಟುಂಬಸ್ಥರು ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇದರ ನಡುವೆಯೇ ಕೆಲವರು ದರ್ಶನ್‌ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ 6106 ಅಚ್ಚೆ ಹಾಕಿಸಿಕೊಳ್ಳುವುದು, ಮಕ್ಕಳ ಬಟ್ಟೆಗಳ ಮೇಲೆ ಬರೆಸುವುದು, ವಾಹನಗಳ ಮೇಲೆ ಹಾಕಿಸುವ ಮೂಲಕ ಅಂಧಾಭಿಮಾನವನ್ನು ಮೆರೆಯುತ್ತಿದ್ದಾರೆ.
ಅಷ್ಟೇ ಅಲ್ಲದೆ ಕಟಿಂಗ್ ಶಾಪ್‌ಗಳಲ್ಲೂ ಸಹ ದರ್ಶನ್‌ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ 6106 ಶೈಲಿಯಲ್ಲಿ ಕಟಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಇದೀಗ ಕಟಿಂಗ್ ಶಾಪ್‌ವೊಂದರಲ್ಲಿ ಯುವಕನೊಬ್ಬ D 6106 ಎಂದು ಕೆತ್ತಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಂದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ನೆಟ್ಟಿಗರು ಇದಕ್ಕೆ "ಅಭಿಮಾನ ಇರಬೇಕು.. ಅಂಧಾಮಾನ ಇರಬಾರ್ದು, ಹೀಗೆ ಕೈದಿ ನಂಬರ್ ಬರೆಸಿಕೊಂಡು ಇವರೆಲ್ಲ ತಮ್ಮ ಕುಟುಂಬಕ್ಕೆ, ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೆ?," ಎಂದು ಪ್ರಶ್ನಿಸುತ್ತಿದ್ದಾರೆ.
ಶೆಡ್‌ಗೆ ಬರ್ತೀಯಾ?: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಪಾಲಾದಾಗಿನಿಂದ ಬಾ.. ಶೆಡ್‌ಗೆ ಹೋಗುವ.. ಕೊಂಟೆಬಿಲ್ಲೆ ಆಡುವ ಬಾ ಎನ್ನುವ ರೀಲ್ಸ್ ವಿಡಿಯೋಗಳು ಸಾಮಾಜಿಕ ಜಲಾತಾಣಗಳಲ್ಲಿ ಫುಲ್ ಟ್ರೆಂಡ್ ಆಗಿಬಿಟ್ಟಿವೆ. ಇದೋಗ ಅದೇ ಶೈಲಿಯಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.
ಚಿಕ್ಕವರಿಂದ ಹಿಡಿದು ಹಿರಿಯರು ಕೂಡ ವಿವಿಧ ಆಯಾಮಗಳಲ್ಲಿ ಈ ರೀಲ್ಸ್ ಮಾಡುತ್ತಿದ್ದಾರೆ. ಅದು ಪವಿತ್ರಾ ಗೌಡ ತಮ್ಮ ಮಾಧ್ಯಮದವರಿಗೆ ಕೆಣಕಿದಾಗಿನಿಂದ ಈ ರೀಲ್ಸ್‌ಗಳು ಹುಟ್ಟಿಕೊಂಡವು. ಸುಮ್ಮನೆ ಇರಲಾರ್ದೆ ಇರುವೆ ಬಿಟ್ಟುಕೊಂಡ ಅನ್ನುವ ಪರಿಸ್ಥಿತಿ ಇದೀಗ ಪವಿತ್ರಾ ಗೌಡ ತಮ್ಮನದ್ದಾಗಿದೆ.
ಮಾಧ್ಯಮದವರಿಗೆ ನಮ್ಗೇನು ಮಾಡೋದಿಕ್ಕೆ ಏನು ಕೆಲ್ಸ ಇಲ್ವಾ ಎಂದು ಪವಿತ್ರಾ ಗೌಡ ತಮ್ಮ ಪರಪ್ಪನ ಅಗ್ರಹಾರದ ಜೈಲಿನ ಮುಂದೆ ಪ್ರಶ್ನಿಸಿದ್ದ. ಇದಕ್ಕೆ ನಿರೂಪಕರೊಬ್ಬರು ಬಾ.. ನಮ್ಗೆ ಕೆಲ್ಸ ಇಲ್ಲ.. ಶೇಡ್‌ಗೆ ಹೋಗಿ ಕುಂಟೆಬಿಲ್ಲ ಆಡುವ ಬಾ.. ಎಂದು ಗೇಲಿ ಮಾಡುವ ಮೂಲಕ ಪವಿತ್ರಾ ಗೌಡ ತಮ್ಮಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ.
ಆಗಿನಿಂದ ಈ ರೀಲ್ಸ್ ಭಾರೀ ಸದ್ದು ಮಾಡುತ್ತಲೇ ಇದೆ. ಇದೀಗ ಮತ್ತೆ "ಅಣ್ಣಾ.. ಬಸ್ ಎಲ್ಲಿಗೆ ಹೋಗುತ್ತೆ ಅಂತಾ ಯುವಕನೊಬ್ಬ ಕೇಳಿದ್ದಕ್ಕೆ, ಬಸ್ಸಿನಲ್ಲಿ ಕುಳಿತಿದ್ದ ಯುವಕ ಶೆಡ್‌ಗೆ ಹೋಗುತ್ತೆ ಬರ್ತೀಯಾ?," ಎಂದು ಪ್ರಶ್ನಿಸಿದ್ದ, ಈ ವಿಡಿಯೋ ಸಹ ಇದೀಗ ಭಾರೀ ವೈರಲ್ ಆಗುತ್ತಿದೆ. ಇನ್ನೂ ಈ ಶೆಡ್ ವಿಚಾರ ಬಂದಿದ್ದೇ ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಯಿಂದ.












Click it and Unblock the Notifications