ದರ್ಶನ್‌ಗೆ ನಡುಕ: ರೇಣುಕಾಸ್ವಾಮಿ ಪರ ಪಿ.ಪ್ರಸನ್ನ್ ಕುಮಾರ್ ವಾದ; ಪಬ್ಲಿಕ್ ಪ್ರಾಸಿಕ್ಯೂಟರ್ ಹಿನ್ನೆಲೆ ಕೇಳಿ ಶಾಕ್
ಬೆಂಗಳೂರು, ಜೂನ್ 16: ರೇಣುಕಾಸ್ವಾಮಿ ಕಿಡ್ನಾಪ್ ಆಂಡ್ ಮರ್ಡರ್ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಗೆ ಸಂಬಂಧಿಸಿದಂತೆ ಹೊರ ಬರುತ್ತಿರುವ ಒಂದೊಂದೇ ಸಂಗತಿಗಳು ಅವರಿಗೆ ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ. ಈ ಮಧ್ಯೆ ಎರಡನೇ ಅವಧಿಗೆ ಪೊಲೀಸ್ ವಶದಲ್ಲಿರುವ ದರ್ಶನ್‌ಗೆ ಇದೀಗ ನಡುಕ ಶುರುವಾಗಿದೆ.
ದರ್ಶನ್ ಆಂಡ್ ಗ್ಯಾಂಗ್ ಕ್ರೂರವಾಗಿ ಕೊಲೆ ಮಾಡಿರುವ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಪರ ವಾದ ಮಾಡಲು ವಿಶೇಷ ಅಭಿಯೋಜಕರನ್ನಾಗಿ (SPP) ದಕ್ಷ ಹಿರಿಯ ವಕೀಲರೊಬ್ಬರನ್ನು ರಾಜ್ಯ ಸರ್ಕಾರವೇ ನೇಮಕ ಮಾಡಿದೆ. ಹೀಗಾಗಿ ದರ್ಶನ್‌ಗೆ ನಡುಕ ಶುರುವಾಗಿದೆ.

ಬೀಕರವಾಗಿ ದರ್ಶನ್ ಆಂಡ್ ಗ್ಯಾಂಗ್ ನಿಂದ ಕೊಲೆಯಾಗಿದ ರೇಣುಕಾಸ್ವಾಮಿಗೆ ನ್ಯಾಯ ಒದಗಿಸಲು ವಿಶೇಷ ಅಭಿಯೋಜಕರನ್ನಾಗಿ ಪಿ.ಪ್ರಸನ್ನ ಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ. ಅವರ ಹಿನ್ನೆಲೆ, ಅವರ ದಕ್ಷತೆ ಮತ್ತು ಪ್ರಾಣಿಕವಾಗಿ ಸತ್ಯದ ಪರ ವಾದಿಸುವ ಅವರ ಚಾಕಚಕ್ಯತೆ ಕಾರಣದಿಂದಲೇ ದರ್ಶನ್‌ಗೆ ಭಯ ಶುರುವಾಗಿದೆ.
ಕೊಲೆಗೆ ರಾಜ್ಯವಾಪಿ ಖಂಡನೆ
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಯಾವ ಮುಲಾಜಿಲ್ಲದೇ, ಒತ್ತಡವಿಲ್ಲದೇ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸದ್ಯ ದರ್ಶನ್ ಗ್ಯಾಂಗ್ ಮಾಡಿರುವ ಹೀನ ಕೃತ್ಯಕ್ಕೆ ರಾಜ್ಯವ್ಯಾಪಿ ಖಂಡನೆ ವ್ಯಕ್ತವಾಗುತ್ತಿದೆ. ಈ ಸಂಬಂಧ 18 ಆರೋಪಿಗಳನ್ನು ಬಂಧಿಸಲಾಗಿದೆ.
ಎಸ್‌ಪಿಪಿ ಹಿನ್ನೆಲೆ ಮಾಹಿತಿ ಇಲ್ಲಿದೆ
ಹತ್ಯೆಗೀಡಾದ ರೇಣುಕಾಸ್ವಾಮಿ ಪರ ನೇಮಕವಾದ ಈ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಸಾಮಾನ್ಯ ವಕೀಲರೇನೂ ಅಲ್ಲ. ಪ್ರಸ್ತುತವಾಗಿ ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದ್ದ ಕೆಲವು ಘಟನೆಗಳಲ್ಲಿ ವಿಶೇಷ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ರೇಣುಕಾಸ್ವಾಮಿ ಕೊಲೆ ಕೇಸಿಗೆ SPP ಆಗಿ ಸರ್ಕಾರ ನೇಮಕವಾಗಿದ್ದಾರೆ.

ಎಸ್‌ಪಿಪಿ ಪ್ರಸನ್ನ ಕುಮಾರ್ ಅವರ ಈ ಹಿನ್ನೆಲೆಯಿಂದಲೇ ಇದೀಗ ದರ್ಶನ್‌ಗೆ ನಡುಕ ಶುರುವಾಗಿದೆ. ಇತ್ತ ದರ್ಶನ್ ಪರ ಅನೇಕ ವಕೀಲರು ವಾದ ಮಾಡಲು ಮುಂದೆ ಬಂದಿದ್ದಾರೆ. ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಕೆಲವು ವಕೀಲರು ಬಂದು ಅವರ ಪರವಾಗಿ ವಾದ ಮಾಡಿ ಎರಡು ವಾರ (15 ದಿನ) ಪೊಲೀಸ್ ಕಸ್ಟಡಿಗೆ ನೀಡುವುದನ್ನು ಅವರೆಲ್ಲ ತಡೆದಿದ್ದರು. ಇದರೊಂದಿಗೆ ಪ್ರತಿ ದಿನ ವಕೀಲರ ಭೇಟಿ ಮಾಡುವಂತೆ ವ್ಯವಸ್ಥೆ ಸಹ ಕಲ್ಪಿಸಿಕೊಳ್ಳಲಾಗಿತ್ತು.
ಮೃತ ಕುಟುಂಬಕ್ಕೆ ನ್ಯಾಯ ಕೊಡಿಸಲು ನೇಮಕ
ಇತ್ತ ಕೊಲೆಯಾದ ರೇಣುಕಾಸ್ವಾಮಿ ಅವರ ಪರ ಯಾರೊಬ್ಬರು ವಾದ ಮಾಡಲು ಮುಂದೆ ಬರದಿದ್ದಾರೆ. ರಾಜ್ಯ ಸರ್ಕಾರವೇ ಮೃತರ ಕುಟುಂಬಕ್ಕೆ ನ್ಯಾಯಕೊಡಿಸಲು ಮುಂದಾಗಿದೆ. ಅದಕ್ಕಾಗಿ ಈ ಕೊಲೆ ಪ್ರಕರಣ ಬಗ್ಗೆ ವಾದ ಮಾಡಲು ಪ್ರಸನ್ನ ಕುಮಾರ್ ಅವರನ್ನು ಎಸ್‌ಪಿಪಿ ಆಗಿ ನೇಮಕ ಮಾಡಲಾಗಿದೆ.
ಸದ್ಯ ದರ್ಶನ್ ಹಾಗೂ ಸಹಚರರನ್ನು ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮತ್ತಷ್ಟು ವಿಚಾರಣೆ ಬಾಕಿ ಇದೆ ಎನ್ನಲಾಗಿದೆ. ಇನ್ನೊಂದಿಷ್ಟು ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.
ಇಡಿ, ಎಸ್‌ಐಟಿ ಇನ್ನಿತರ ಸರ್ಕಾರಿ ವ್ಯಾಪ್ತಿಯ ತನಿಖಾಧಿಕಾರಿಗಳು ಕೈಗೊಳ್ಳುವ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ವಾದ ಮಾಡಿದ, ತರ್ಕಬದ್ಧವಾಗಿ ವಾದ ಮಂಡಿಸಿದ ಅನುಭವ ಅವರಿಗಿದೆ. ಸತ್ಯದ ಪರವಾಗಿ ಪ್ರಮಾಣಿಕವಾಗಿ ಅತ್ಯಂತ ಕಾಳಜಿಯಿಂದ ಈ ಎಸ್‌ಪಿಪಿ ಅವರು ವಾದ ಮಂಡಿಸುತ್ತಿದ್ದಾರೆ. ಇದೀಗ ಪೊಲೀಸರಿಗೆ ಮತ್ತೆ ಐದು ದಿನ ದರ್ಶನ್ ಗ್ಯಾಂಗ್ ವಶಕ್ಕೆ ನೀಡುವಂತೆ ಆದೇಶ ಹೊರ ಬೀಳುವಲ್ಲಿ ಅವರ ಜಾಣತನದ ವಾದದ ಪಾತ್ರವು ಇದೇ ಎನ್ನಲಾಗುತ್ತಿದೆ.












Click it and Unblock the Notifications