ಎಸಿಪಿ ವೆಂಕಟೇಶ್ ಪ್ರಸನ್ನ ಅವರಿಂದ ಜನಾರ್ದನ ರೆಡ್ಡಿ ವಿಚಾರಣೆ ಆರಂಭ
ಬೆಂಗಳೂರು, ನವೆಂಬರ್ 10: ಆಂಬಿಡೆಂಟ್ ಚಿಟ್ ಫಂಡ್ ಹಗರಣದಲ್ಲಿ ನಾಲ್ಕು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಇದೀಗ ವಿಚಾರಣೆಗೆಂದು ಸಿಸಿಬಿ ಕಚೇರಿಗೆ ಆಗಮಿಸಿದ್ದು, ಎಸಿಪಿ ವೆಂಕಟೇಶ್ ಪ್ರಸನ್ನ ವಿಚಾರಣೆ ಆರಮಭಿಸಿದ್ದಾರೆ.
ಮೊದಲು ಜನಾರ್ದನ ರೆಡ್ಡಿ ಇವರೇ ಎನ್ನುವುದಕ್ಕೆ ಐಡಿ ಕಾರ್ಡ್, ಫೋಟೊ ಹಾಗೂ ಸಹಿಯನ್ನು ಪಡೆದಿದ್ದು, ಇದೀಗ ಅವರ ಹೇಳಿಕೆಯ ವಿಡಿಯೋ ಹಾಗೂ ಬರವಣಿಗೆಯಲ್ಲಿ ದಾಖಲು ಮಾಡುತ್ತಿದ್ದಾರೆ. ಹೇಳಿಕೆಯನ್ನು ದಾಖಲಿಸಲು ಸಿಸಿಬಿಯಿಂದ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಯಾವ ಪ್ರಶ್ನೆಗಳನ್ನು ಕೇಳಬೇಕು ಎಂದು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ.

ಪೊಲೀಸರು ನನಗೆ ನೋಟಿಸ್ ಕೊಟ್ಟಿರಲಿಲ್ಲ, ಶನಿವಾರ ನಮ್ಮ ವಕೀಲರ ಮೂಲಕ ನೋಟಿಸ್ ಕೊಟ್ಟು ಭಾನುವಾರ ಹಾಜರಾಗಲು ಸೂಚಿಸಿದ್ದರು. ಆದರೆ ಶನಿವಾರವೇ ಬಂದಿದ್ದೇವೆ, ನನಗೆ ಬಂಧನದ ಭಯ ಇಲ್ಲ, ಬೇಕಾದರೆ ಬಂಧಿಸಲಿ, ನೋಟಿಸ್ ಕೊಡದೆ ತಾನಾಗಿಯೇ ಯಾಕೆ ಪೊಲೀಸರ ಬಳಿ ಬರಲಿ, ನಾನು ತಲೆಮರೆಸಿಕೊಂಡು ಇರಲಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ರೆಡ್ಡಿ ಜತೆಗೆ ಅವರ ಆಪ್ತನೆನಿಸಿಕೊಂಡಿರುವ ಅಲಿಖಾನ್ ಕೂಡ ಹಾಜರಾಗಿದ್ದಾರೆ.
ಇದೀಗ ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ, ರೆಡ್ಡಿ ಇನ್ನೇನು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕಾದು ನೋಡಬೇಕಿದೆ.
ಸಿಸಿಬಿ ಕಚೇರಿ ಬಳಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ, ಅಲಿಖಾನ್ ಮತ್ತು ವಕೀಲರು ಕೊಠಡಿ ಹೊರಗಡೆ ಕುಳಿತಿದ್ದಾರೆ.












Click it and Unblock the Notifications