ಬೆಂಗಳೂರಲ್ಲಿ ಆಸಿಡ್ ದಾಳಿ; 106 ದಿನದ ಬಳಿಕ ಯುವತಿ ಡಿಸ್ಚಾರ್ಚ್
ಬೆಂಗಳೂರು, ಆಗಸ್ಟ್ 12; ಏಪ್ರಿಲ್ 28 ರಂದು ಎಂದಿನಂತೆ ಮುತ್ತೂಟ್ ಫಿನ್ ಫೈನಾನ್ಸ್‌ಗೆ ಸಂತ್ರಸ್ಥೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಹಿಂಬಾಲಿಸಿಕೊಂಡು ಬಂದ ಕಿರಾತಕ ನಾಗೇಶ್ ಏಕಾಏಕಿ ಆಸಿಡ್ ಎರಚಿ ಎಸ್ಕೇಪ್ ಆಗಿಬಿಟ್ಟಿದ್ದ. ಆಸಿಡ್ ದಾಳಿಯಿಂದ ತೀವ್ರ ತೊಂದರೆಯನ್ನು ಅನುಭವಿಸಿದ ಸಂತ್ರಸ್ಥೆ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಗೆದ್ದು ಮನೆಯನ್ನು ತಲುಪಿದ್ದಾಳೆ.
ತಾನು ಪ್ರೀತಿಸುತ್ತಿದ್ದೇನೆ ನೀನು ನನ್ನನ್ನು ಪ್ರೀತಿಸ ಬೇಕು ಎಂದು ಪ್ರೀತ್ಸೆ ಪ್ರೀತ್ಸೆ ಎಂದು ಪ್ರಾಣ ತಿನ್ನುತ್ತಿದ್ದ ನಾಗೇಶ್ ಸಂತ್ರಸ್ಥ ಯುವತಿ ಮೇಲೆ ಆಸಿಡ್ ದಾಳಿ ಮಾಡಿದ್ದ. ಬಳಿಕ ತಮಿಳುನಾಡಿನ ಸೇಲಂಗೆ ಎಸ್ಕೇಪ್ ಆಗಿದ್ದ. ಸ್ವಾಮಿಜೀ ವೇಷವನ್ನು ತೊಟ್ಟು ಅಡಗಿದ್ದವನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ಕರೆತದಿದ್ದರು. ಆರೋಪಿಯ ವಿರುದ್ದ ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಕೆ ಮಾಡಲಾಗಿದೆ.

106 ದಿನ ಬಳಿಕ ಆಸ್ಪತ್ರೆಯಿಂದ ಮನೆಗೆ ಬಂದ ಯುವತಿ
ಏಪ್ರಿಲ್ 28 ನೇ ತಾರೀಖು ಯುವತಿಗೆ ಕರಾಳ ದಿನ. ಚೆನ್ನಾಗಿ ಓದಿ, ಜೀವನ ರೂಪಿಕೊಳ್ಳಲು ಕಷ್ಟ ಪಡುತಿದ್ದ ಯುವತಿ ಕಂಡಂತ ಕನಸುಗಳು ಅಪಾರ. ಆದರೆ ಆ ಒಬ್ಬ ಕಿರಾತಕನಿಂದ 106 ದಿನಗಳ ಕಾಲ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸಿ ಕೊನೆಗೂ ತನ್ನ ಮನೆಗೆ ವಾಪಸ್ಸಾಗಿದ್ದಾಳೆ.
ಮೊದಲಿಗೆ "ತನಗೆ ಧೈರ್ಯ ತುಂಬಿ ಚಿಕಿತ್ಸೆ ಕೊಟ್ಟ ವೈದ್ಯರಿಗೆ ಹಾಗೂ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾಳೆ. ಇನ್ನು ತನ್ನ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಆರೋಪಿ ನಾಗೇಶನಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ಮುಂದೆಯೇ ಆರೋಪಿಗೂ ಆ್ಯಸಿಡ್ ಹಾಕಬೇಕು, ನಂತರ ನೇಣಿಗೆ ಹಾಕಬೇಕು. ಅವನೂ ನನ್ನಂತೆ ನರಳುವುದನ್ನು ನೋಡಬೇಕು. ಅದಕ್ಕಾಗಿಯೇ ನಾನು ಇಷ್ಟು ಬೇಗ ಗುಣಮುಖಳಾಗಿ ಮನೆಗೆ ಮರಳಿದ್ದೇನೆ" ಎಂದು ಸಂತ್ರಸ್ಥ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

3 ತಿಂಗಳ ನಂತರ ಮತ್ತೆ ಕೆಲವು ಶಸ್ತ್ರ ಚಿಕಿತ್ಸೆ
ಆಗಸ್ಟ್ 11 ರ ರಾತ್ರಿ ವೈದ್ಯರು ಯುವತಿಯನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಮನೆಗೆ ಮರಳಿದ ಯುವತಿ ಕುಟುಂಬದವರನ್ನು ನೋಡಿ ಖುಷಿಯಲ್ಲಿದ್ದಾಳೆ. ಇನ್ನು ಯುವತಿಗೆ 28 ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇನ್ನು 3 ತಿಂಗಳ ನಂತರ ಮತ್ತೆ ಕೆಲವು ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ.
ಕಣ್ಣಿಗೂ ಸ್ವಲ್ಪ ಗಾಯವಾಗಿದ್ದು, ದೃಷ್ಟಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲವಂತೆ. ಇನ್ನು ಕಳೆದ ಮೂರು ತಿಂಗಳಿನಿಂದ ಯುವತಿಯ ಆರೈಕೆಯಲ್ಲೇ ಸಮಯ ದೂಡುತ್ತಿರುವ ಪೋಷಕರಿಗೆ ಈಗ ಮಗಳ ಭವಿಷ್ಯದ್ದೇ ಚಿಂತೆಯಾಗಿದೆ. ನನಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರಬಾರದು ಅಂತ ನೋವಿನಲ್ಲೇ ಮಾತನಾಡಿದ್ದಾಳೆ . ಸದ್ಯ ಯುವತಿ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ.

ಸಂಬಂಧಿಕರ ಮದುವೆಗೆ ಹೋಗಲಾಗಲಿಲ್ಲ
ಆಸಿಡ್ ದಾಳಿಯಿಂದ ಕೇವಲ ನನಗೆ ಮಾತ್ರವಲ್ಲ ತನ್ನ ಕುಟುಂಬದವರೂ ನೋವನ್ನು ಅನುಭವಿಸುತ್ತಿದ್ದಾರೆ. ನನ್ನ ಸಂಬಂಧಿಯೊಬ್ಬರ ಮದುವೆಗೆ ಹೋಗಲು ಸಿದ್ದತೆ ಮಾಡಿಕೊಂಡಿದ್ದೆವು. ಹೊಸ ಬಟ್ಟೆಯನ್ನು ಖರೀದಿಸಿ ಅದಕ್ಕೆ ಮ್ಯಾಚಿಂಗ್ ಬೇಕಾದದನ್ನು ಸಹ ತೆಗೆದುಕೊಂಡಿದ್ದೆ. ಆದರೆ ಆಸಿಡ್ ದಾಳಿಯಿಂದ ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ ಎಂದು ತನ್ನ ನೋವನ್ನು ಯುವತಿ ತೋಡಿಕೊಂಡಿದ್ದಾಳೆ.

ಪ್ರೀತಿಸುತ್ತೇನೆ ಎಂದಾಗ ಅವರ ದೊಡ್ಡಮ್ಮನಿಗೂ ಹೇಳಿದ್ದೆ
ಆರೋಪಿ ನಾಗೇಶ್ ಬಗ್ಗೆ ಸಾಕಷ್ಟು ಆಕ್ರೋಶಗೊಂಡಿರುವ ಸಂತ್ರಸ್ತೆ ಆರೋಪಿಗೆ ನೇಣು ಹಾಕಹಬೇಕೆಂದು ಪದೇ ಪದೇ ಹೇಳಿದ್ದಾಳೆ. ಇದರ ಜೊತೆಗೆ ಆತನನ್ನು ನಾನು ಅಣ್ಣಾ ಎಂದು ಕರೆಯುತ್ತಿದ್ದೆ. ಪ್ರೀತಿಸಲು ಪೀಡಿಸಿದಾಗ ಅವರ ದೊಡ್ಡಮ್ಮನಿಗೂ ಈ ವಿಚಾರವನ್ನು ತಿಳಿಸಿದ್ದೆ ಎಂದು ಸಂತ್ರಸ್ತ ಯುವತಿ ಹೇಳಿದ್ದಾಳೆ.
ಇನ್ನು ಸರ್ಕಾರ ಸಂತ್ರಸ್ತ ಯುವತಿಗೆ ನೆರವಾಗಬೇಕಿದೆ. ಇದರ ಜೊತೆಗೆ ಆಸಿಡ್ ಹಾಕುವವರ ವಿರುದ್ದ ಕ್ರಮಕ್ಕೆ ಹೊಸ ಕಾಯ್ದೆತರಬೇಕಿದೆ, ಇಲ್ಲವಾದರೆ ಹೆಣ್ಣುಮಕ್ಕಳನ್ನು ಇಂಥ ಕಿರಾತಕರಿಂದ ಕಾಪಾಡೋದು ಸುಲಭದ ಮಾತಲ್ಲ.
-
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಪಾರ್ಕಿಂಗ್ ಮತ್ತು ವರಾಂಡಾ ಯಾವ ದಿಕ್ಕಿನಲ್ಲಿ ಇರಬೇಕು? -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್










Click it and Unblock the Notifications