Bengaluru acid attack: ಆಸಿಡ್ ದಾಳಿ ಆರೋಪಿ ಎಲ್ಲಿದ್ದಾನೆ..? ತಲೆಮರೆಸಿಕೊಳ್ಳಲು ಹಣಕಾಸನ್ನು ಹೊಂದಿಸಿದ್ದು ಹೇಗೆ..?
ಬೆಂಗಳೂರು, ಮೇ 2: ನಗರದ ಸುಂಕದ ಕಟ್ಟೆಯಲ್ಲಿ ಯುವತಿಯ ಮೇಲೆ ನಡೆದ ಆಸಿಡ್ ದಾಳಿಯಾಗಿ ಆರು ದಿನಗಳು ಕಳೆದಿವೆ. ಆದರೆ ಯುವತಿಯನ್ನು ನರಳುವಂತೆ ಮಾಡದ ಕಿರಾತಕ ಮಾತ್ರ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಾ ಓಡಾಡುತ್ತಿದ್ದಾನೆ. ಆರೋಪಿ ಬಂಧನಕ್ಕೆ 10 ತಂಡಗಳನ್ನು ರಚಿಸಿ ಪಶ್ಚಿಮ ವಿಭಾಗದ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದರು ಸಹ ನಾಗೇಶ್ ಪತ್ತೆಯಾಗಿಲ್ಲ.
ತಮಿಳುನಾಡಿನಲ್ಲಿ ಆರೋಪಿ ನಾಗೇಶ್‌ಗಾಗಿ ತೀವ್ರ ಶೋಧ:
ಏಪ್ರಿಲ್ 27 ರಂದು ಯುವತಿ ಮುತ್ತೂಟ್ ಫಿನ್ ಕಾರ್ಪ್ ಗೆ ಕೆಲಸಕ್ಕೆ ಹೋಗುವ ವೇಳೆ ಕಂಪನಿಯ ಮೆಟ್ಟಿಲುಗಳ ಮೇಲೆಯೇ ನಾಗೇಶ್ ಆಸಿಡ್ ದಾಳಿಯನ್ನು ಮಾಡಿದ್ದ. ಆ ಬಳಿಕ ನಾಗೇಶ್ ತಲೆಮರೆಸಿಕೊಂಡಿದ್ದಾನೆ. ತಮಿಳುನಾಡಿಗೆ ಆಗಿಂದಾಗ್ಗೆ ಹೋಗಿ ಬರುತ್ತಿದ್ದ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ತನಿಖೆಯ ವೇಳೆಯಲ್ಲಿಯು ನಾಗೇಶ್ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಟೆಕ್ನಿಕಲ್ ಸಾಕ್ಷ್ಯಾಧಾರಗಳು ಲಭಿಸಿದ್ದವು. ಹೀಗಾಗಿ ತಮಿಳುನಾಡಿನಲ್ಲೇ ಆರೋಪಿ ಅಡಗಿರಬಹುದು ಎಂಬ ಅನುಮಾನದಲ್ಲಿ ನಾಗೇಶ್ ಗಾಗಿ ತೀವ್ರ ಹುಡುಕಾಟವನ್ನು ಪೊಲೀಸರು ಮುಂದುವರೆಸಿದ್ದಾರೆ.
ಆಂಜನೇಯ ತಿಲಕಧಾರಿ ನಾಗೇಶ್..!
ಯುವತಿಯ ಮೇಲೆ ಆಸಿಡ್ ದಾಳಿ ಮಾಡಿದ ನಾಗೇಶ್ ಆಂಜನೇಯನ ಭಕ್ತನಾಗಿದ್ದನಂತೆ. ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಆಂಜನೇಯನ ಕುಂಕುಮವನ್ನು ಇಟ್ಟುಕೊಂಡು ಬರ್ತಿದ್ದನಂತೆ, ತಮಿಳುನಾಡಿನ ಆಂಜನೇಯ ದೇಗುಲಗಳಿಗೂ ಹೋಗಿ ಬರುತ್ತಿದ್ದನಂತೆ ನಾಗೇಶ್. ನಾಗೇಶ್ ಬಂಧನಕ್ಕಾಗಿ ತೆರಳಿರುವ ಪೊಲೀಸ್ ತಂಡ ಈ ವಿಚಾರವನ್ನು ಗಮನಿಸಿಕೊಂಡು ತನಿಖೆಯನ್ನು ಮಾಡ್ತಿದ್ದಾರೆ.

ನಾಗೇಶ್ ಎಟಿಎಂ ಬಳಸಿಲ್ಲ, ಫೋನ್ ಪೇ ಗೂಗಲ್ ಪೇ ಬಳಸಿಲ್ಲ
ನಾಗೇಶ್ ತಲೆಮರೆಸಿಕೊಂಡ ಬಳಿಕ ಆತ ಎಲ್ಲಿದ್ದಾನೆ. ಎಟಿಎಂ ಕಾರ್ಡ್ ಅನ್ನು ಬಳಿ ನಗದನ್ನು ಏನಾದ್ರು ವಿಥ್ ಡ್ರಾ ಮಾಡಿದ್ದಾನೆಯೇ ಎಂದು ಪೊಲೀಸರು ಪರಿಶೀಲನೆಯನ್ನು ಮಾಡಿದ್ದಾರೆ. ಜೊತೆಗೆ ಫೋನ್ ಪೇ ಮತ್ತು ಗೂಗಲ್ ಪೇ ಬಳಸಿದ್ದಾನೆಯೇ ಎಂಬುದನ್ನು ಸಹ ಪೊಲೀಸರು ಪರಿಶೀಲಿಸಿದ್ದಾನೆ. ಆದರೆ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿಯು ಸಿಕ್ಕಿಲ್ಲ.
ಹಣಕ್ಕಾಗಿ ಪೂರ್ವ ನಿಯೋಜಿತ ಪ್ಲಾನ್ ಮಾಡಿದ್ದ ನಾಗೇಶ್..!
ಯುವತಿಯ ಮೇಲೆ ಆಸಿಡ್ ದಾಳಿಯನ್ನು ಮಾಡುವ ಮುನ್ನವೇ ದಾಳಿಕೋರ ನಾಗೇಶ್ ಹಲವು ಪ್ಲಾನ್ ಮಾಡಿಕೊಂಡಿರೋದು ಪೊಲೀಸರಿಗೆ ತನಿಖೆಯ ವೇಳೆ ತಿಳಿದು ಬಂದಿದೆ. ಸುಮಾರು ಹತ್ತು ದಿನಗಳ ಪ್ಲಾನ್ ಅನ್ನು ಮಾಡಿಕೊಂಡಿರುವ ಅನುಮಾನವಿದೆ. ಸಂತ್ರಸ್ತ ಯುವತಿಯ ಮನೆಯವರು ತನ್ನೊಂದಿಗೆ ಮದುವೆ ಮಾಡಿಕೊಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಆಸಿಡ್ ದಾಳಿಯ ಸಂಚನ್ನು ರೂಪಿಸಿದ್ದಾಾನೆ. ತನ್ನ ಗಾರ್ಮೆಂಟ್ಸ್ ಅನ್ನು ಖಾಲಿ ಮಾಡುವ ಸಲುವಾಗಿ ಸ್ಟಾಕ್ ಅನ್ನು ಸಂಪೂರ್ಣವಾಗಿ ಮಾರಿದ್ದಾನೆ. ವರ್ತಕರೊಬ್ಬರಿಗೆ ಒಂದು ಲಕ್ಷಕ್ಕೆ ಸ್ಟಾಕ್ ಅನ್ನು ಮಾರಿ ನಗದು ಹಣವನ್ನು ಪಡೆದಿದ್ದಾನೆ. ಇದೇ ದುಡ್ಡಲ್ಲಿ ಊರೂರು ಸುತ್ತುತ್ತಿರುವ ಬಗ್ಗೆೆ ಪೊಲೀಸರಿಗೆ ಅನುಮಾನವಿದೆ. ಇದರಿಂದಲೇ ಆತ ಎಟಿಎಂ ಹಾಗೂ ಆನ್ ಲೈನ್ ಹಣಕಾಸಿನ ವ್ಯವಹಾರ ನಡೆಸುತ್ತಿಲ್ಲ ಎಂದು ತಿಳಿದು ಬಂದಿದೆ.

ನಾಗೇಶ್ ನ ಫೋನ್ ಹೊಸಕೋಟೆಯಲ್ಲಿ ಪತ್ತೆ
ನಾಗೇಶ್ ಬೆಂಗಳೂರು ಬಿಡುವ ಮುನ್ನ ಹೊಸಕೋಟೆ ಟೋಲ್ ಬಳಿ ಮೊಬೈಲ್ ಬಿಸಾಕಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿ ಬಿಸಾಕಿದ್ದ ಈ ವೇಳೆ ದಾರಿಹೋಕರೊಬ್ಬರಿಗೆ ಮೊಬೈಲ್ ಸಿಕ್ಕಿದ್ದು, ಆನ್ ಮಾಡಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನ ಪತ್ತೆಮಾಡಿ ವಿಚಾರಿಸಿದಾಗ ಮೊಬೈಲ್ ಬಿಸಾಕಿ ಹೋಗಿರುವ ಬೆಳಕಿಗೆ ಬಂದಿದೆ.
ಎರಡು ದಿನದ ಹಿಂದೆಯೇ ಆರೋಪಿ ಮತ್ತೆ ಮಾಡುವುದಾಗಿ ಹೇಳಿದ್ದ ಕಮೀಷನರ್.
ಎರಡು ದಿನದ ಹಿಂದೆಯೇ ಮಾತನಾಡಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸಂಜೆಯೊಳಗೆ ಆರೋಪಿ ನಾಗೇಶ್ ನನ್ನು ಬಂಧಿಸುವುದಾಗಿ ಹೇಳಿದ್ದರು. ಆದರೆ ಪೊಲೀಸರಿಗೆ ಈವರೆಗೂ ನಾಗೇಶ್ ಪತ್ತೆಯಾಗಿಲ್ಲ. ನಾಗೇಶ್ ಪ್ರೊಫೆಷನಲ್ ಅಫೆಂಡರ್ ಆಗದಿದ್ದರು ಆತನನ್ನು ಬಂಧಿಸೋಕೆ ಬೆಂಗಳೂರು ಪೊಲೀಸರಿಗೆ ಇಷ್ಟೋದು ಸಮಯ ಬೇಕಿತ್ತಾ. ಶೀಘ್ರವೇ ಆತನ ಹೆಡೆಮುರಿಯನ್ನು ಬೆಂಗಳೂರು ಪೊಲೀಸರು ಕಟ್ಟಬೇಕಿದೆ.

ಯುವತಿಯ ಮೇಲೆ ಆಸಿಡ್ ದಾಳಿಯನ್ನು ಮಾಡುವ ಮುನ್ನವೇ ದಾಳಿಕೋರ ನಾಗೇಶ್ ಹಲವು ಪ್ಲಾನ್ ಮಾಡಿಕೊಂಡಿರೋದು ಪೊಲೀಸರಿಗೆ ತನಿಖೆಯ ವೇಳೆ ತಿಳಿದು ಬಂದಿದೆ. ಸುಮಾರು ಹತ್ತು ದಿನಗಳ ಪ್ಲಾನ್ ಅನ್ನು ಮಾಡಿಕೊಂಡಿರುವ ಅನುಮಾನವಿದೆ. ಸಂತ್ರಸ್ತ ಯುವತಿಯ ಮನೆಯವರು ತನ್ನೊಂದಿಗೆ ಮದುವೆ ಮಾಡಿಕೊಡುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಆಸಿಡ್ ದಾಳಿಯ ಸಂಚನ್ನು ರೂಪಿಸಿದ್ದಾನೆ. ತನ್ನ ಗಾರ್ಮೆಂಟ್ಸ್ ಅನ್ನು ಖಾಲಿ ಮಾಡುವ ಸಲುವಾಗಿ ಸ್ಟಾಕ್ ಅನ್ನು ಸಂಪೂರ್ಣವಾಗಿ ಮಾರಿದ್ದಾನೆ. ವರ್ತಕರೊಬ್ಬರಿಗೆ ಒಂದು ಲಕ್ಷಕ್ಕೆ ಸ್ಟಾಕ್ ಅನ್ನು ಮಾರಿ ನಗದು ಹಣವನ್ನು ಪಡೆದಿದ್ದಾನೆ. ಇದೇ ದುಡ್ಡಲ್ಲಿ ಊರೂರು ಸುತ್ತುತ್ತಿರುವ ಬಗ್ಗೆೆ ಪೊಲೀಸರಿಗೆ ಅನುಮಾನವಿದೆ. ಇದರಿಂದಲೇ ಆತ ಎಟಿಎಂ ಹಾಗೂ ಆನ್ ಲೈನ್ ಹಣಕಾಸಿನ ವ್ಯವಹಾರ ನಡೆಸುತ್ತಿಲ್ಲ ಎಂದು ತಿಳಿದು ಬಂದಿದೆ.
ನಾಗೇಶ್ ಫೋನ್ ಹೊಸಕೋಟೆಯಲ್ಲಿ ಪತ್ತೆ
ನಾಗೇಶ್ ಬೆಂಗಳೂರು ಬಿಡುವ ಮುನ್ನ ಹೊಸಕೋಟೆ ಟೋಲ್ ಬಳಿ ಮೊಬೈಲ್ ಬಿಸಾಕಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿ ಬಿಸಾಕಿದ್ದ ಈ ವೇಳೆ ದಾರಿಹೋಕರೊಬ್ಬರಿಗೆ ಮೊಬೈಲ್ ಸಿಕ್ಕಿದ್ದು, ಆನ್ ಮಾಡಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನ ಪತ್ತೆಮಾಡಿ ವಿಚಾರಿಸಿದಾಗ ಮೊಬೈಲ್ ಬಿಸಾಕಿ ಹೋಗಿರುವ ಬೆಳಕಿಗೆ ಬಂದಿದೆ.
ಎರಡು ದಿನದ ಹಿಂದೆಯೇ ಆರೋಪಿ ಮತ್ತೆ ಮಾಡುವುದಾಗಿ ಹೇಳಿದ್ದ ಕಮೀಷನರ್.
Recommended Video
ಎರಡು ದಿನದ ಹಿಂದೆಯೇ ಮಾತನಾಡಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸಂಜೆಯೊಳಗೆ ಆರೋಪಿ ನಾಗೇಶ್ ನನ್ನು ಬಂಧಿಸುವುದಾಗಿ ಹೇಳಿದ್ದರು. ಆದರೆ ಪೊಲೀಸರಿಗೆ ಈವರೆಗೂ ನಾಗೇಶ್ ಪತ್ತೆಯಾಗಿಲ್ಲ. ನಾಗೇಶ್ ಪ್ರೊಫೆಷನಲ್ ಅಫೆಂಡರ್ ಆಗದಿದ್ದರು ಆತನನ್ನು ಬಂಧಿಸೋಕೆ ಬೆಂಗಳೂರು ಪೊಲೀಸರಿಗೆ ಇಷ್ಟೋದು ಸಮಯ ಬೇಕಿತ್ತಾ. ಶೀಘ್ರವೇ ಆತನ ಹೆಡೆಮುರಿಯನ್ನು ಬೆಂಗಳೂರು ಪೊಲೀಸರು ಕಟ್ಟಬೇಕಿದೆ.












Click it and Unblock the Notifications