ಜಾಮೀನು ಸಿಗಲೆಂದು ಗಣೇಶನ ಮೊರೆ ಹೋದ ನಲಪಾಡ್
ಬೆಂಗಳೂರು, ಫೆಬ್ರವರಿ 26: ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಹಾಗೂ ಅವರ ಸಹಚರರ ನ್ಯಾಯಾಲಯದಿಂದ ಜಾಮೀನು ಸಿಗಲೆಂದು ಗಣೇಶನ ಮೊರೆ ಹೋಗಿದ್ದಾರೆ.
ಹೌದು, ಪ್ರಸ್ತುತ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿಗಳಾಗಿರುವ ಮೊಹಮ್ಮದ್ ನಲಪಾಡ್ ಮತ್ತು ಆತನ ಸಹಚರರು ಜೈಲು ಆವರಣದಲ್ಲಿ ಇರುವ ಗಣೇಶ ವಿಗ್ರಹಕ್ಕೆ ಇಂದು ಬೆಳಿಗ್ಗೆ ಪೂಜೆ ಮಾಡಿದ್ದಾರೆ.'
ಪ್ರಮುಖ ಆರೋಪಿ ಮೊಹಮ್ಮದ್ ನಲಪಾಡ್, ಬಾಲಕೃಷ್ಣ, ಮಂಜುನಾಥ್, ಅಭಿಷೇಕ್ ಮತ್ತು ಅರುಣ್ ಬಾಬು ಅವರುಗಳು ಗಣೇಶನ ವಿಗ್ರಹಕ್ಕೆ ಕಾಯಿ ಒಡೆದು, ಕಡ್ಡಿ ಹೊತ್ತಿಸಿ ಜಾಮೀನು ಸಿಗಲೆಂದು ಬೇಡಿಕೊಂಡಿದ್ದಾರೆ ಎನ್ನಲಾಗಿದೆ.

ಜೈಲು ಸಿಬ್ಬಂದಿಯೇ ಅವರಿಗೆ ಪೂಜಾ ವಸ್ತುಗಳನ್ನು ತಂದು ಕೊಟ್ಟಿದ್ದಾರೆ ಎನ್ನಲಾಗಿದ್ದು, ಬೆಳಿಗ್ಗೆ 9.30 ಕ್ಕೆ ಆರೋಪಿಗಳು ಪೂಜೆ ಮಾಡಿದ್ದಾರೆ.
ಗಣೇಶನಿಗೆ ಮಾತ್ರವಲ್ಲದೆ ಜೈಲು ಆವರಣದಲ್ಲಿರುವ ಇತರ ದೇವರಗಳ ಚಿತ್ರಗಳಿಗೂ ಊದುಬತ್ತಿ ಬೆಳಗಿ ಕೈಮುಗಿದು ಜಾಮೀನಿಗಾಗಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.











Click it and Unblock the Notifications