ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಎಸಿಬಿ ದಾಳಿ, ಸುಧಾ ಮನೆಯಲ್ಲಿ ನಕಲಿ ದಾಖಲೆಗಳು ಜಪ್ತಿ

|
Google Oneindia Kannada News

ಬೆಂಗಳೂರು, ನವೆಂಬರ್ 24 : ಕೆಎಎಸ್ ಅಧಿಕಾರಿ ಡಾ. ಸುಧಾ ಕೇವಲ ಲಂಚ ಪಡೆದು ಅಕ್ರಮ ಆಸ್ತಿ ಗಳಿಸಿಲ್ಲ ! ಬದಲಿಗೆ ಬೆಂಗಳೂರಿನಲ್ಲಿರುವ ಸರ್ಕಾರಿ ಜಮೀನಿಗೆ ಖಾಸಗಿ ವ್ಯಕ್ತಿಗಳನ್ನು ಹುಟ್ಟುಹಾಕಿ ಸರ್ಕಾರದ ಕೋಟ್ಯಂತರ ರೂಪಾಯಿ ಪರಿಹಾರ ಕೊಟ್ಟು ಲೂಟಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಕೇವಲ ಸುಧಾ ಮಾತ್ರವಲ್ಲ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ರಿಯಲ್‌ ಎಸ್ಟೇಟ್ ಏಜೆಂಟರು ಭಾಗಿಯಾಗಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿದರೆ, ಈ ಭೂಮಿಗೆ ಬಿಡಿಎ ಸ್ವಾಧೀನ ಹೆಸರಿನಲ್ಲಿ ಕೋಟಿ ಕೋಟಿ ಪರಿಹಾರ ನೀಡುವ ನೆಪದಲ್ಲಿ ಕೆಎಎಸ್ ಅಧಿಕಾರಿ ನೂರಾರು ಕೋಟಿ ಲೂಟಿ ಮಾಡಿರುವುದು ಎಸಿಬಿ ತನಿಖೆಯಲ್ಲಿ ಬಯಲಾಗಿದೆ.

ಡಾ. ಸುಧಾ ಅವರ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಮೊದಲ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳಿಗೆ 200 ದಾಖಲೆಗಳು ಮತ್ತು 50 ಕೋಟಿ ರೂ. ಗೂ ಅಧಿಕ ಆಸ್ತಿ ಬಯಲಿಗೆ ಎಳೆದಿದ್ದರು. ಇದಾದ ಬಳಿಕ ಸುಧಾ ಬೇನಾಮಿ ಏಜೆಂಟ್‌, ರಿಯಲ್‌ ಎಸ್ಟೇಟ್ ಉದ್ಯಮಿ ರೇಣುಕಾ ಮನೆ ಮೇಲೆ ದಾಳಿ ನಡೆದಿತ್ತು. ದಾಳಿ ವೇಳೆ ಪತ್ತೆಯಾದ ಸುಧಾ ಅವರ ಚಿನ್ನದ ಸಂಪತ್ತು ಜನರನ್ನು ಬೆಚ್ಚಿ ಬೀಳಿಸಿತ್ತು. ಸುಧಾ ಅವರ ಅಕ್ರಮ ಆಸ್ತಿಯ ಜಾಡು ಹಿಡಿದು ತನಿಖೆ ನಡೆಸಿದಾಗ ಸರ್ಕಾರಿ ಭೂಮಿಗೆ ಬಬಿಡಿಎ ಪರಿಹಾರ ಕೊಟ್ಟು ನೂರಾರು ಕೋಟಿ ಲೂಟಿ ಮಾಡಿರುವ ದೊಡ್ಡ ಹಗರಣ ಬೆಳಕಿಗೆ ಬಂದಿದೆ.

ಸುಧಾ ಕೇವಲ ಲಂಚ ಪಡೆದು ಅಕ್ರಮ ಆಸ್ತಿ ಗಳಿಸಿಲ್ಲ. ಸರ್ಕಾರಿ ಭೂಮಿಗೆ ಕಂದಾಯ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದೇ ಭೂಮಿಯನ್ನು ಬಿಡಿಎ ಸ್ವಾಧೀನ ಪಡಿಸಿಕೊಂಡು ಕೋಟಿ ಕೋಟಿ ಪರಿಹಾರ ನೀಡಿದೆ. ಇದರಲ್ಲಿ ಸಾಕಷ್ಟು ರಿಯಲ್‌ ಎಸ್ಟೇಟ್ ಏಜೆಂಟರು ಶಾಮೀಲಾಗಿದ್ದರು. ಕೂಲಿ ಮಾಡುತ್ತಿದ್ದವರು ಬೆಂಜ್ ಕಾರಲ್ಲಿ ಓಡಾಡುತ್ತಿದ್ದಾರೆ. ಸಾಕಷ್ಟು ಏಜೆಂಟರನ್ನು ಈ ಅಕ್ರಮದಲ್ಲಿ ಲಾಭ ಪಡೆದುಕೊಂಡಿದ್ದಾರೆ. ಸರ್ಕಾರಿ ಭೂಮಿಗೆ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಖಾತೆ, ಪಹಣಿ ಮಾಡಿಸಿ ಆ ಜಮೀನನ್ನುಬಿಡಿಎ ಸ್ವಾಧೀನ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಗೆ ಪರಿಹಾರ ನೀಡಿದೆ. ಇದರ ಸಿಂಹಪಾಲು ಹಣವನ್ನು ಸುಧಾಗೆ ಹೋಗಿದ್ದು, ರೇಣುಕಾ ಅವರ ಮನೆಗೆ ಸೇರಿಸುತ್ತಿದ್ದರು. ಇದರಲ್ಲಿ ಕೇವಲ ಸುಧಾ ಮಾತ್ರವಲ್ಲ, ಬಿಡಿಎ ಮೇಲಾಧಿಕಾರಿಗಳು ಕೂಡ ಶಾಮೀಲಾಗಿರುವುದು ಕಂಡು ಬಂದಿದೆ. ಮುಂದಿನ ದಿನದಗಳಲ್ಲಿ ಕಂದಾಯ ಮತ್ತು ಬಿಡಿಎ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸಿಬಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ACB Raids On KAS Officer Sudha Real Agent S Houses

ಭೂ ಅಕ್ರಮದ ಭಾಗವಾಗಿ ದಾಳಿ: ಸರ್ಕಾರಿ ಭೂಮಿಗೆ ಕೊಟ್ಟಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಬೆಂಗಳೂರಿನ ಭೀಮನಕುಪ್ಪೆ, ರಾಮಸಂದ್ರ, ಬೆಂಗಳೂರಿನ ಕೆ.ಕೆ. ಲೇಔಟ್ , ಎನ್‌ಜಿಎಫ್ ಲೇಔಟ್ ಸೇರಿದಂತೆ ಆರು ಏಜೆಂಟರ ಮನೆಗಳ ಮೇಲೆ ದಾಳಿ ನಡೆದಿದೆ. ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿರುವ ಸಂಬಂಧ ಮಹತ್ವದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಬಿಡಿಎ ನಿಂದ ಸರ್ಕಾರಿ ಭೂಮಿಗೆ ಪರಿಹಾರ ಪಡೆದಿರುವ ಬಗ್ಗೆ ಕೆಲವು ದಾಖಲೆಗಳು ಲಭ್ಯವಾಗಿದ್ದು, ರಿಯಲ್‌ ಎಸ್ಟೇಟ್ ಏಜೆಂಟ್ ಪ್ರಭು ಅವರ ಮನೆ ಸೇರಿದಂತೆ ಸಾಕಷ್ಟು ಕಡೆ ಶೋಧ ಕಾರ್ಯ ಮುಂದುವರೆದಿದೆ. ನೂರಾರು ಕೋಟಿ ಸರ್ಕಾರದ ಹಣವನ್ನು ಸರ್ಕಾರಿ ಭೂಮಿಗೆ ಪರಿಹಾರ ಕೊಡುವ ರೂಪದಲ್ಲಿ ಲೂಟಿ ಮಾಡಿರುವ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳ ಕಲೆ ಹಾಕುವಲ್ಲಿ ಎಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ.

Recommended Video

Mohammed Siraj ಅವರ ತಂದೆಗೆ ಈ ಸರಣಿ ಅರ್ಪಣೆಯಂತೆ | Oneindia Kannada

ಶೀಘ್ರದಲ್ಲಿ ಇಡಿಗೆ ಮಾಹಿತಿ: ಕೆಎಎಸ್ ಅಧಿಕಾರಿ ಡಾ. ಸುಧಾ, ತನ್ನ ಪರಮಾಪ್ತೆ ಸ್ನೇಹಿತೆ ರೇಣುಕಾ ಹೆಸರಿನಲ್ಲಿ ಬೇನಾಮಿ ವಹಿವಾಟು ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಸುಧಾ ಅವರ ಅಕ್ರಮ ಆಸ್ತಿ, ಬೇನಾಮಿ ವಹಿವಾಟಿನ ಬಗ್ಗೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಸಲ್ಲಿಸಲು ಎಸಿಬಿ ಅಧಿಕಾರಿಗಳು ತೀರ್ಮಾನಿಸಿದ್ದರು. ಭೂ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತಷ್ಟು ದಾಖಲೆಗಳ ಕಲೆ ಹಾಕುವ ಕಾರ್ಯದಲ್ಲಿ ಎಸಿಬಿ ನಿರತವಾಗಿದೆ. ಸುಧಾ ಅವರ ಅಕ್ರಮ ಆಸ್ತಿ ಹಾಗೂ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಎಸಿಬಿ ದಾಳಿಗಳು ಪೂರ್ಣಗೊಂಡ ಬಳಿಕ ಸಮಗ್ರ ಮಾಹಿತಿ ಕ್ರೊಢೀಕರಣ ಮಾಡಿ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲು ಎಸಿಬಿ ಉನ್ನತ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

English summary
ACB raided the houses of Dr B. Sudha's closest real estate agents houses and seized documents. The crores of rupees has been released by the BDA for government land by creating a forged document. The ACB today raided six real estate agents in Bengaluru and seized documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X