• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ಡೌನ್ ಪಾಸ್ ದುರ್ಬಳಕೆ ಮಾಡಿದ್ರೆ ಗೂಂಡಾ ಕಾಯ್ದೆ ಬಳಸಿ:ಎಎಪಿ

|

ಬೆಂಗಳೂರು, ಏಪ್ರಿಲ್ 5: ಜಗತ್ತನ್ನೇ ಆತಂಕದ ವಾತಾವರಣಕ್ಕೆ ದೂಡಿರುವ ಕೋರೋನಾ ಮಹಾಮಾರಿಯ ದುರಂತದಿಂದ ಹೊರಬರಲು ಎಲ್ಲ ಸರ್ಕಾರಗಳು ಲಾಕ್ ಡೌನ್ ಘೋಷಿಸಿರುವ ಈ ಸಮಯದಲ್ಲಿ ತುರ್ತು ಕಾರ್ಯ ನಿರ್ವಹಣೆಗೆ ಸರ್ಕಾರವು ಅಗತ್ಯ ಪಾಸ್ ಗಳನ್ನು ವಿಸ್ತರಿಸಿರುವುದು ಸ್ವಾಗತಾರ್ಹ. ಆದರೆ ಪಾಸ್ ಗಳನ್ನು ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಇದಕ್ಕೆ ಕಡಿವಾಣ ಅಗತ್ಯ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಸಿನಿಮಾ ನಟಿಯೊಬ್ಬರು ಪಾಸ್ ದುರ್ಬಳಕೆ ಮಾಡಿಕೊಂಡು ರಸ್ತೆ ಅಪಘಾತಕ್ಕೆ ಸಿಲುಕಿದ್ದು ಕಣ್ಮುಂದಿದೆ. ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ, ವಾಹನ ಚಾಲನೆ ಮಾಡಿ, ಅಪಘಾತಕ್ಕೀಡಾಗಿರುವ ಶರ್ಮಿಳಾ ಮಾಂಡ್ರೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಘಟನೆ ನಡೆದಿದೆ.

ಆಕ್ಸಿಡೆಂಟ್: ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

ಐಷಾರಾಮಿ ಜೀವನಶೈಲಿಯನ್ನು ಇಂತಹ ಲಾಕ್ ಡೌನ್ ಸಂದರ್ಭಗಳಲ್ಲಿ ಮುಂದುವರಿಸಿಕೊಂಡು ಹೋಗಲು ಸಮಾಜದ ಕೆಲ ದುಷ್ಟ ವ್ಯಕ್ತಿಗಳು ಹವಣಿಸುತ್ತಿರುವುದು ದುರದೃಷ್ಟವೇ ಸರಿ. ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಸರ್ಕಾರವು ತೀವ್ರವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಮಾಂಡ್ರೆ ಅಪಘಾತ ಪ್ರಕರಣ ಉದಾಹರಣೆ

ಮಾಂಡ್ರೆ ಅಪಘಾತ ಪ್ರಕರಣ ಉದಾಹರಣೆ

ಈ ಪಾಸ್ ನೀಡಿಕೆಯ ಸಂದರ್ಭದಲ್ಲಿ ಅನೇಕ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಿಫಾರಸ್ಸು ಹಾಗೂ ಒತ್ತಡವನ್ನು ಏರಿ ತಮ್ಮ ಕಡೆಯವರಿಗೆ ಪಾಸ್ ಗಳನ್ನು ವಿತರಿಸಿರುವ ದುಷ್ಪರಿಣಾಮವೇ ನಿನ್ನೆ ನಡೆದಿರುವ ಶರ್ಮಿಳಾ ಮಾಂಡ್ರೆ ಅವರ ಆಕ್ಸಿಡೆಂಟ್ ಪ್ರಕರಣ. ಇಂತಹ ಮಂದಿಗೆಲ್ಲಾ ಕರ್ನಾಟಕ ರಾಜ್ಯ ಪೊಲೀಸರ ಕ್ಲಿಯರ್ ಪಾಸ್ ಹೇಗೆ ದೊರಕಿತೆಂದು ತನಿಖೆಗೆ ಒಳಪಡಬೇಕಿದೆ.

ಅನಗತ್ಯ ಓಡಾಟ ತಪ್ಪಿಸಿರುವ ಪೊಲೀಸರು

ಅನಗತ್ಯ ಓಡಾಟ ತಪ್ಪಿಸಿರುವ ಪೊಲೀಸರು

ಈಗಾಗಲೇ ಅನಗತ್ಯವಾಗಿ ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿದ್ದ 10 ಸಾವಿರಕ್ಕೂ ಹೆಚ್ಚಿನ ವಾಹನಗಳನ್ನು ವಶಕ್ಕೆ ಪಡೆದಿರುವ ರೀತಿಯಲ್ಲಿಯೇ ಪಾಸ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧವೂ ಸಹ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

ಕೊರೊನಾ: ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ?

ಪಾಸ್ ದುರ್ಬಳಕೆ ತಡೆಗಟ್ಟಿ

ಪಾಸ್ ದುರ್ಬಳಕೆ ತಡೆಗಟ್ಟಿ

ಪಾಸ್ ವಿತರಣೆಯ ಸಂದರ್ಭದಲ್ಲಿ ಪ್ರಭಾವಿಗಳ ಒತ್ತಡವೇ ಈ ಎಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿನ ಪೊಲೀಸರು ಎಲ್ಲ ಕಡೆ ಅತ್ಯಂತ ಕಟ್ಟುನಿಟ್ಟಾಗಿ ಇಂತಹ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಾಸ್ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಇವರುಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಬಳಸಿ ಉಗ್ರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿಯು ಆಗ್ರಹಿಸುತ್ತದೆ .

ಯಾರಿಗೆ ಪಾಸ್ ಅಗತ್ಯವಿದೆ?

ಯಾರಿಗೆ ಪಾಸ್ ಅಗತ್ಯವಿದೆ?

ಅಗತ್ಯ ವಸ್ತು ಪೂರೈಸುವವರು, ತುರ್ತು ಸೇವೆಯಲ್ಲಿ ತೊಡಗಿದವರಿಗೆ ಸಂಸ್ಥೆಯ ಐಡಿ ಕಾರ್ಡ್ ತೋರಿಸಿದರೆ ಸಾಕು, ಉಳಿದಂತೆ ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸಬಹುದಾಗಿದೆ ಎಂದು ಪೊಲೀಸರು ಸೂಚಿಸಿದ್ದಾರೆ. ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ.

English summary
Use Goonda act against those who break Lock Down and mis use e Pass given by government- Aam Aadmi Party has urged Karnataka police to take necessary action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more