• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ ನೀಡಿ ಎಎಪಿ ಒತ್ತಾಯ

|

ಬೆಂಗಳೂರು, ಏಪ್ರಿಲ್ 08: ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಊಟ ರದ್ದುಗೊಳಿಸಿದ ಸರಕಾರದ ತಪ್ಪು ನಿರ್ಧಾರವು ರಾಜ್ಯದ ಬಡ ಜನತೆಯ ಹೊಟ್ಟೆಯ ಮೇಲೆ ಬರೆ ಎಳೆದಂತೆ ಎಂದು ಆಮ್ ಆದ್ಮಿ ಪಾರ್ಟಿ ಕಳವಳ ವ್ಯಕ್ತಪಡಿಸಿದೆ.

ಕೊರೊನಾ ಮಹಾ ಭೀತಿಯ ಈ ಸಂದರ್ಭದಲ್ಲಿ ಸರ್ಕಾರವು ಲಾಕ್ ಡೌನ್ ವಿಧಿಸಿರುವುದು ಸರಿಯಷ್ಟೆ. ಈ ಸಮಯದಲ್ಲಿ ಕೇವಲ ಹದಿನಾಲ್ಕು ದಿನಗಳ ಕಾಲ ರಾಜ್ಯ ಸರ್ಕಾರಕ್ಕೆ ಬಡವರಿಗೆ ಹಾಗೂ ಹಸಿದವರಿಗೆ ಉಚಿತ ಊಟದ ಕಾರ್ಯಕ್ರಮವನ್ನು ಏಕಾಏಕಿ ರದ್ದುಪಡಿಸಿರುವುದು ಅತ್ಯಂತ ಶೋಚನೀಯ ಸಂಗತಿ ಎಂದಿದೆ.

ಸಿಎಂ ಯಡಿಯೂರಪ್ಪ ಹೇಳಿಕೆ ಬಗ್ಗೆ ರಿಯಾಲಿಟಿ ಚೆಕ್ ಮಾಡಿದ ಸಿದ್ದರಾಮಯ್ಯ!

ಇಂತಹ ಮಹಾ ಭೀತಿಯ ಸಂದರ್ಭದಲ್ಲಿ ರಾಜ್ಯದ ಬಡ ಜನತೆಯು ಯಾವುದೇ ಕಾರಣಕ್ಕೂ ಹಸಿವಿನಿಂದ ಇರಬಾರದು ಎಂಬ ಉತ್ಕಟ ಅಭಿಲಾಷೆ ಸರ್ಕಾರಕ್ಕೆ ಇದ್ದಂತಿಲ್ಲ. ಆದುದರಿಂದಲೇ ಇಂತಹ ಉಚಿತ ಊಟದ ಕಾರ್ಯಕ್ರಮವನ್ನು ಏಕಾಏಕಿ ರದ್ದುಗೊಳಿಸಿರುವುದು ಇದನ್ನು ಸ್ಪಷ್ಟಪಡಿಸುತ್ತದೆ. ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಅತ್ಯಾಧುನಿಕವಾಗಿ ಸಿದ್ಧಗೊಳಿಸಿದ್ದ ಈ ವ್ಯವಸ್ಥೆಯನ್ನು ಇಂತಹ ಮಹಾ ಭೀತಿಯ ಸಂದರ್ಭಗಳಲ್ಲಿ ಉಪಯೋಗಿಸಿದರೆ ಸಾರ್ಥಕ ಅನ್ನಿಸುತ್ತಿತ್ತು.ಆದರೆ ರಾಜ್ಯ ಸರ್ಕಾರಕ್ಕೆ ಈ ಸಾರ್ಥಕತೆಗೆ ಭಾಜನರಾಗಲು ಎಳ್ಳಷ್ಟೂ ಆಸಕ್ತಿಯಿಲ್ಲ. ಈ ಸರ್ಕಾರದ ಕೆಲವೊಂದು ಮಂತ್ರಿಗಳು ಹಿಂದಿನಿಂದಲೂ ಸಹ ಈ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುವ ಹುನ್ನಾರದಲ್ಲಿ ತೊಡಗಿಕೊಂಡಿರುವುದು ನಮಗೆಲ್ಲ ತಿಳಿದೇ ಇದೆ ಎಂದು ಆರೋಪ ಮಾಡಿದೆ.

ಉಚಿತ ಊಟ ರದ್ದು

ಉಚಿತ ಊಟ ರದ್ದು

ಸರ್ಕಾರದ ಈ ಕೆಟ್ಟ ನಿರ್ಧಾರದಿಂದಾಗಿ ಇಂದು ರಾಜ್ಯದ ಬಡ ಜನತೆಯ- ಹಸಿದವರ ಹಿಡಿಶಾಪ ಸರ್ಕಾರದ ಮೇಲೆ ಪ್ರತಿ ದಿವಸವೂ ಸಹ ಬೀಳುತ್ತಿದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ನಡೆಸಿದ ರಿಯಾಲಿಟಿ ಚೆಕ್ ನಿಂದಾಗಿ ಈ ಅಂಶಗಳು ಕಂಡು ಬರುತ್ತದೆ. ಉಚಿತ ಊಟದ ಘೋಷಣೆಯನ್ನು ಮಾಡಿದ್ದಾಗ ಪ್ರತಿಯೊಂದು ಕ್ಯಾಂಟೀನ್ ಗಳಲ್ಲಿ ಏಳು ನೂರಕ್ಕೂ ಹೆಚ್ಚು ಜನ ಸರತಿ ಸಾಲಿನಲ್ಲಿ ಬಂದು ಊಟವನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈ ಉಚಿತ ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ ಇತ್ತ ಕಡೆ ಯಾರೂ ಸಹ ಸುಳಿಯುತ್ತಿಲ್ಲ. ಕೇವಲ ಐವತ್ತು ರಿಂದ ನೂರು ಪಟ್ಟಣಗಳು ಮಾತ್ರ ಖಾಲಿಯಾಗುತ್ತಿದೆ ಎಂಬುದು ಅಲ್ಲಿನ ಸ್ಥಳೀಯರು ಅವಲತ್ತುಕೊಳ್ಳುತ್ತಾರೆ . ಸರ್ಕಾರವನ್ನು ನಡೆಸುತ್ತಿರುವವರಿಗೆ ಐದು ಹಾಗೂ ಹತ್ತು ರೂಪಾಯಿಗಳು ಅತ್ಯಲ್ಪ ಮತ್ತು ಕೇವಲವಾಗಿರಬಹುದು. ಎಂದಿದೆ.

ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರವು ಸಿಗದಂತಾಗಿದೆ

ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರವು ಸಿಗದಂತಾಗಿದೆ

ಆದರೆ ಬಡ ಜನತೆಯು ಕೆಲಸವೇ ಇಲ್ಲದೆ, ಹಣವಿಲ್ಲದೆ ಪರದಾಡುತ್ತಿರುವ ಈ ಸಂದರ್ಭದಲ್ಲಿ ಅವರುಗಳಿಗೆ 5 ರೂ ಹಾಗೂ 10 ರೂ ಗಳಿಗೂ ಪರದಾಡುವ ಪರಿಸ್ಥಿತಿ ಇದೆ. ಬಡ ಜನತೆಯ ಈ ಪರಿಸ್ಥಿತಿಯ ಅರಿವಿಲ್ಲದ ಸರ್ಕಾರವು ಇಂದು ಇಂತಹ ದುಸ್ಥಿತಿಗೆ ಕಾರಣವಾಗಿದೆ. ಪ್ರತಿ ದಿವಸ ಪೂರೈಕೆಯಾಗುವ ಆಹಾರ ಪೊಟ್ಟಣಗಳು ಸಹ ಸ್ಥಳೀಯ ಪಾಲಿಕೆ ಸದಸ್ಯರ ಬೆಂಬಲಿಗರು ತೆಗೆದುಕೊಂಡು ಹೋಗಿ ಅವರುಗಳಿಗೆ ಬೇಕಾದವರಿಗೆ ಹಂಚುವ ದುರವಸ್ಥೆಗೆ ತಲುಪಿದೆ .ಕಾಸು ಕೊಟ್ಟು ತಿನ್ನೋಣ ಎಂದು ಹಸಿದವರು ಬಂದರೂ ಸಹ ಇಂದಿರಾ ಕ್ಯಾಂಟೀನ್ ಗಳಲ್ಲಿ ಇಂದು ಆಹಾರವು ಸಿಗದಂತಾಗಿದೆ. ಎಂದು ಎಎಪಿ ತಿಳಿಸಿದೆ.

ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ

ಬಡಜನತೆಯ ಶಾಪ

ಬಡಜನತೆಯ ಶಾಪ

ಲಕ್ಷಾಂತರ ಬಡಜನತೆಗೆ ಹದಿನಾಲ್ಕು ದಿವಸಗಳ ಕಾಲ ಹೊಟ್ಟೆ ತುಂಬಾ ಉಚಿತವಾಗಿ ಊಟ ಉಣಬಡಿಸುವ ಇಂತಹ ಮಹತ್ವದ ಕಾರ್ಯಕ್ರಮವನ್ನು ರದ್ದುಗೊಳಿಸಿದ ಸರ್ಕಾರವು ಇಂದು ಬಡಜನತೆಯ ಶಾಪಕ್ಕೆ ಗುರಿಯಾಗುತ್ತಿದೆ. ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಮಂತ್ರಿಗಳು ವಾಸ್ತವ ಪರಿಸ್ಥಿತಿಯನ್ನು ಅರಿಯದೇ ಊಟ ದುರುಪಯೋಗವಾಗುತ್ತಿದೆ ಎಂಬ ನೆಪವೊಡ್ಡಿ ಏಕಾಏಕಿ ಉಚಿತ ಊಟವನ್ನು ರದ್ದುಗೊಳಿಸಿದರು. ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಚಿತ ಊಟದ ವ್ಯವಸ್ಥೆ ನೀಡಬೇಕು

ಉಚಿತ ಊಟದ ವ್ಯವಸ್ಥೆ ನೀಡಬೇಕು

ಹೀಗೆ ಮಾಡಿ ಯಾವ ಘನಂದಾರಿ ಸಾಧನೆಯನ್ನು ಮಾಡಿದರೂ ಆ ದೇವರೇ ಬಲ್ಲ. ತಲೆಕೆಟ್ಟ ಇಂತಹ ಮಂತ್ರಿಯೊಬ್ಬನ ಮಾತನ್ನು ಕೇಳಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ನಿರ್ಧಾರಕ್ಕೆ ಬಂದಿರಬಹುದು. ಆದರೆ ಕಾಲ ಇನ್ನೂ ಮಿಂಚಿಲ್ಲ ಈ ಕೂಡಲೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ತಮ್ಮ ಈ ಕಠಿಣ ನಿರ್ಧಾರವನ್ನು ರದ್ದುಗೊಳಿಸಿ ಇಂದಿರಾ ಕ್ಯಾಂಟೀನ್ ಗಳಲ್ಲಿ ಲಕ್ಷಾಂತರ ಮಂದಿಗೆ ಉಚಿತ ಊಟದ ವ್ಯವಸ್ಥೆಯನ್ನು ಈ ಕೂಡಲೇ ಜಾರಿಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷವು ಬಡಜನತೆಯ ಹಾಗೂ ಹಸಿದವರ ಪರವಾಗಿ ಒಕ್ಕೊರಲಿನಿಂದ ಆಗ್ರಹಿಸುತ್ತಿದೆ.

English summary
Give free food in Indira Canteen Aam Aadmi Party requested to Karnataka state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X