ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಎಎಪಿ ಮನವಿ

ಬೆಂಗಳೂರು, ಮೇ 12: ಸುಪ್ರೀಂ ಕೋರ್ಟ್‌ ಆದೇಶದಂತೆ, ರಾಜ್ಯದಲ್ಲಿ ಬಾಕಿ ಉಳಿದಿರುವ ಎಲ್ಲ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರವೇ ಚುನಾವಣೆ ನಡೆಸಬೇಕೆಂದು ಕೋರಿ ಆಮ್‌ ಆದ್ಮಿ ಪಾರ್ಟಿಯು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತು.

ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹಾಗೂ ಐಎಎಸ್‌ ಅಧಿಕಾರಿ ಹೊನ್ನಾಂಬರವರಿಗೆ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂರವರು ಪಕ್ಷದ ಪರವಾಗಿ ಮನವಿ ಸಲ್ಲಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್‌ ವಿ ಸದಂ, "ಸ್ಥಳೀಯ ಸಂಸ್ಥೆಗಳಿಗೆ ಸರಿಯಾದ ಸಮಯಕ್ಕೆ ಚುನಾವಣೆ ನಡೆಸದ ಕಾರಣ ಸಮರ್ಪಕ ಆಳಿತದ ಇಲ್ಲವಾಗಿದೆ. ಇದರಿಂದ ಉತ್ತರದಾಯಿ ಜನಪ್ರತಿನಿಧಿಗಳಿಲ್ಲದೇ, ಸಾರ್ವಜನಿಕರ ಜೀವನ ಅಯೋಮಯವಾಗಿದೆ. ಹಲವೆಡೆ ಎರಡ್ಮೂರು ವರ್ಷಗಳಾದರೂ ಚುನಾವಣೆ ನಡೆದಿಲ್ಲವಾದ್ದರಿಂದ ಸಾರ್ವಜನಿಕರ ಹಕ್ಕನ್ನೇ ಮೊಟಕುಗೊಳಿಸಲಾಗಿದೆ. ಮೊದಲಿಗೆ ಕೋವಿಡ್‌ ನೆಪವೊಡ್ಡಿದ್ದ ಸರ್ಕಾರ ನಂತರ ಕಾನೂನಿನ ನೆಪವೊಡ್ಡಿತ್ತು. ಕೊನೆಯದಾಗಿ ಮಾನ್ಯ ಸರ್ವೊಚ್ಚ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿಟ್ಟು ಚುನಾವಣೆ ಪ್ರಕ್ರಿಯೆಯನ್ನು ಕ್ಲಿಷ್ಟಕರವಾಗಿಸಿತು" ಎಂದು ಹೇಳಿದರು.

AAP appeals to Election Commission to hold local elections soon

ಪ್ರಕರಣ ಸಂಖ್ಯೆ 278/2022ರ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು, ಆರು ತಿಂಗಳಿಗಿಂತ ಹೆಚ್ಚು ಕಾಲ ಚುನಾವಣೆ ನಡೆಸದೇ ಸ್ಥಳೀಯ ಪಾಲಿಕೆಗಳನ್ನು ನಡೆಸಬಾರದು ಎಂದು ಸ್ಪಷ್ಟವಾಗಿದೆ. ಈ ತೀರ್ಪು ಮಧ್ಯಪ್ರದೇಶ ಮಾತ್ರವಲ್ಲದೇ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು ಕೂಡ ಸುಪ್ರೀಕೋರ್ಟ್‌ ಹೇಳಿದೆ. ಈ ಪ್ರಕಾರ ರಾಜ್ಯದಲ್ಲಿ ಶೀಘ್ರವೇ ಚುನಾವಣೆಗೆ ಅಧಿಸೂಚನೆ ಹೊರಡಿಸಬೇಕು ಎಂದು ಪತ್ರದಲ್ಲಿ ಜಗದೀಶ್‌ ವಿ ಸದಂ ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಚನ್ನಪ್ಪ ಗೌಡ ನಲ್ಲೂರು, ಅಕ್ರಂಪಾಷಾ, ಗೋಪಿನಾಥ್, ಬಕರ್ ಅಬ್ಬಾಸ್ ಸೇರಿದಂತೆ ಹಲವರು ಇದ್ದರು

Recommended Video

      ಹಿರಿಯರಿಗೆ ರೆಸ್ಟ್,IPL ನಲ್ಲಿ ಶೈನ್ ಆದವ್ರಿಗೆ ಒಲಿಯಿತು ಅದೃಷ್ಟ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+