Get Updates
Get notified of breaking news, exclusive insights, and must-see stories!

ಭ್ರಷ್ಟಾಚಾರಕ್ಕಾಗಿಯೇ ಸರ್ಕಾರ ಈ ಸುರಂಗ ರಸ್ತೆ ಯೋಜನೆ ರೂಪಿಸಿದೆ: ಅರೋಪ

ಬೆಂಗಳೂರು, ಜನವರಿ 31: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸುರಂಗ ರಸ್ತೆ ಯೋಜನೆ ರೂಪಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಇದು ಭ್ರಷ್ಟಾಚಾರ ಮಾಡಲು ಕೈಗೊಂಡ ಯೋಜನೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 60 ಕಿಲೋ ಮೀಟರ್ ಸುರಂಗ ರಸ್ತೆ ನಿರ್ಮಾಣ ಮಾಡುವ ಕಾಂಗ್ರೆಸ್ ಸರ್ಕಾರದ ಯೋಜನೆಗೆ ಆಮ್ ಆದ್ಮಿ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಸುರಂಗ ರಸ್ತೆ ಯೋಜನೆ ಬದಲು ಉಪನಗರ ರೈಲು ಮತ್ತು ಮೆಟ್ರೋ ಮಾರ್ಗಗಳ ವಿಸ್ತರಣೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದ್ದಾರೆ.

AAP Alleged Karnataka Govt of Planning a Tunnel Road Project to Cause Massive Corruption

ಈ ಕುರಿತು ಎಎಪಿಯು ಈದು ಸುರಂಗ ರಸ್ತೆಯಾ? ಇಲ್ಲ ಉಪನಗರ ರೈಲಾ? ಎಂಬ ವಿಷಯದ ಮೇಲೆ ಫೆಬ್ರುವರಿ 3ರಂದು ಶಾಸಕರ ಭವನದಲ್ಲಿ ವಿಚಾರ ಗೋಷ್ಠಿ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.

ಯೋಜನೆಯಲ್ಲಿ ಡಿಸಿಎಂ ಪಾಲೆಷ್ಟಿದೆ?:ಎಎಪಿ

ಯೋಜನೆ ಪೈಕಿ 1 ಕಿ.ಮೀ. ಸುರಂಗ ರಸ್ತೆಗೆ 500 ಕೋಟಿ ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. 60 ಕಿ.ಮೀ . ಸುರಂಗ ರಸ್ತೆ ನಿರ್ಮಾಣಕ್ಕೆ ₹30,000 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾಲು ಎಷ್ಟಿದೆ? ಇದು ದೊಡ್ಡ ಮಟ್ಟದ ಭ್ರಷ್ಟಾಚಾರ ಮಾಡಲು ಮಾಡುತ್ತಿರುವ ಯೋಜನೆ ಎಂದು ಅವರು ಸರ್ಕಾರದ ವಿರುದ್ಧ ಆರೋಪಿಸಿದರು.

ಸುರಂಗ ರಸ್ತೆ ನಿರ್ಮಾಣದಿಂದ ಎಷ್ಟು ಟ್ರಾಫಿಕ್ ಕಡಿಮೆಯಾಗಲಿದೆ ಎನ್ನುವ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಿಲ್ಲ. ಯಾವ ದೇಶಕ್ಕೆ ಹೋಗಿ ಇದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಗೊತ್ತಿಲ್ಲ. ಇದು ಡಿಕೆ ಶಿವಕುಮಾರ್ ಅವರ ಯೋಜನೆ, ಅವರಿಗೆ ಎಷ್ಟು ಪರ್ಸೆಂಟ್ ಕಮಿಷನ್ ಹೋಗುತ್ತೆ ಎನ್ನುವುದು ಪ್ರಶ್ನೆಯಾಗಿದೆ.

ಸುರಂಗ ರಸ್ತೆಗಳಿಂದ ಟ್ರಾಫಿಕ್ ಕಡಿಮೆ ಆಗಲ್ಲ

ಸುರಂಗ ರಸ್ತೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವುದಿಲ್ಲ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಲಾಗಿದೆ. ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಈ ರೀತಿ ಇರುವಾಗ ಸುರಂಗ ರಸ್ತೆ ನಿರ್ಮಾಣ ಮಾಡಿದರೆ, ಸುರಕ್ಷತೆ ಯಾವ ಮಟ್ಟದಲ್ಲಿರುತ್ತದೆ ಎನ್ನುವ ಆತಂಕ ಕಾಡುತ್ತದೆ ಎಂದರು.

AAP Alleged Karnataka Govt of Planning a Tunnel Road Project to Cause Massive Corruption

2018ರ ಮೊದಲು ಎಲಿವೇಟೆಡ್ ಕಾರಿಡಾರ್ ಮಾಡುತ್ತೇವೆ ಎಂದು ಸ್ಟೀಲ್ ಬ್ರಿಡ್ಜ್ ಮಾಡಲು ಹೋಗಿ ಜನಾಕ್ರೋಶಕ್ಕೆ ಗುರಿಯಾಗಿದ್ದರು. ಈಗ ಮತ್ತೆ ಅದೇ ಭಂಡಗೆಟ್ಟ ಸರ್ಕಾರ ಬಂದಿದ್ದು, ಸುರಂಗ ರಸ್ತೆ ಮಾಡೇ ಮಾಡ್ತೀವಿ ಎನ್ನುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಉಪನಗರ ರೈಲು ಯೋಜನೆ ಸಮರ್ಪಕವಾಗಿ ಪೂರ್ತಿ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ. ಮೆಟ್ರೋ ಮಾರ್ಗಗಳನ್ನು ವಿಸ್ತರಣೆ ಮಾಡಿದರೆ ಸಾಕು. ಉಪನಗರ ರೈಲನ್ನು ನಗರದ ಅಕ್ಕಪಕ್ಕದ ನಗರಗಳಿಗೆ ವಿಸ್ತರಣೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ ಆದರೆ ಕಾಂಗ್ರೆಸ್ ಸರ್ಕಾರ ಇದೆಲ್ಲಾ ಬಿಟ್ಟು ಸುರಂಗ ರಸ್ತೆ ನಿರ್ಮಾಣ ಮಾಡುತ್ತಿರುವುದು ಭ್ರಷ್ಟಾಚಾರ ಮಾಡಲು ಎಂದು ದೂರಿದರು.

ಸುರಂಗ ರಸ್ತೆ ಬಗ್ಗೆ ಎಎಪಿ ವಿಚಾರಗೋಷ್ಠಿ

ಆಮ್ ಆದ್ಮಿ ಪಕ್ಷ ಸುರಂಗ ರಸ್ತೆ ಯೋಜನೆಯನ್ನು ವಿರೋಧಿಸುತ್ತಿದೆ. ಇದೇ ಫೆಬ್ರವರಿ 3 ರ ಶನಿವಾರ ನಗರದ ಶಾಸಕರ ಭವನದಲ್ಲಿ ಸುರಂಗ ರಸ್ತೆಯಾ? ಅಥವಾ ಉಪನಗರ ರೈಲಾ?' ಎನ್ನುವ ವಿಚಾರದ ಬಗ್ಗೆ ವಿಚಾರಗೋಷ್ಠಿ ಹಮ್ಮಿಕೊಂಡಿದ್ದೇವೆ. ನಗರ ತಜ್ಞರು, ಸಾಮಾಜಿಕ ತಜ್ಞರು ಪಾಲ್ಗೊಂಡು ಈ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದಾರೆ. ಬಳಿಕ ಚರ್ಚೆಯ ನಿರ್ಣಯಗಳನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಹೇಳಿದರು.

ಯೋಜನೆ ಕುರಿತು ಶ್ವೇತಪತ್ರ ಹೊರಡಿಸಲು ಒತ್ತಾಯ

ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯನವರು ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರು ಜನತೆಗೆ ಏನು ಬೇಕು ಎನ್ನುವುದು ಗೊತ್ತಿದೆ. ನೀವು ಹೇಳಿದ್ದಕ್ಕೆಲ್ಲಾ ಜನ ತಲೆ ಆಡಿಸುವುದಿಲ್ಲ. ಬ್ರಾಂಡ್ ಬೆಂಗಳೂರಿನಲ್ಲಿ ಮೋಸ ಮಾಡಿದಂತೆ ಸುರಂಗ ರಸ್ತೆ ವಿಚಾರದಲ್ಲಿ ಮೋಸ ಮಾಡಲು ಆಗಲ್ಲ, ಸುರಂಗ ರಸ್ತೆ ಬಗ್ಗೆ ಏನೆಲ್ಲಾ ಅನುಕೂಲ ಇದೆ ಎಂದು ಶ್ವೇತಪತ್ರ ಹೊರಡಿಸಿ ಎಂದು ಅವರು ಒತ್ತಾಯಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+