ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಶೀಘ್ರದಲ್ಲೇ ಆಧಾರ್ ಸೇವಾ ಕೇಂದ್ರ ಸ್ಥಾಪನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ರೈಲು ನಿಲ್ದಾಣದಲ್ಲಿ ಆಧಾರ್ ಕೇಂದ್ರವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ತಿಳಿಸಿದ್ದಾರೆ. ಇದು ನೈಋತ್ಯ ರೈಲ್ವೆ ವಲಯದಲ್ಲಿ ಸೌಲಭ್ಯವನ್ನು ಹೊಂದಿರುವ ಮೊದಲ ನಿಲ್ದಾಣವಾಗಲಿದೆ.

ಭಾರತೀಯ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ. ಚಿತ್ರಗಳನ್ನು ತೆಗೆಯಲು, ಬಯೋಮೆಟ್ರಿಕ್‌ಗಳನ್ನು ಸೆರೆಹಿಡಿಯಲು ಮತ್ತು ಇತರ ಸಾಧನಗಳನ್ನು ಭಾರತೀಯ ಗುರುತಿನ ಪ್ರಾಧಿಕಾರ ಒದಗಿಸಿದೆ.

ವೋಟರ್ ಐಡಿ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿವೋಟರ್ ಐಡಿ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ಆಧಾರ್ ಕಾರ್ಡ್‌ಗಳ ವಿತರಣೆ ಮತ್ತು ಪ್ರಸ್ತುತ ಇರುವ ಆಧಾರ್ ಕಾರ್ಡ್‌ಗೆ ಮಾಡಬೇಕಾದ ಬದಲಾವಣೆ ಮಾಡಲು ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿನ ಆಧಾರ್ ಸೇವಾ ಕೇಂದ್ರಕ್ಕೆ ಸಿಗುವ ಪ್ರತಿಕ್ರಿಯೆಯನ್ನು ಆಧರಿಸಿ, ಈ ಸೌಲಭ್ಯವನ್ನು ವಿಭಾಗದ ಇತರ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್‌ ಸಿಂಗ್ ಹೇಳಿದರು.

Aadhar Center Will Opening Soon At Bengaluru KSR Railway Station

ರೈಲ್ವೆ ಮಂಡಳಿ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಶ್ಯಾಮ್ ಸಿಂಗ್ ಹೇಳಿದರು. "ರೈಲ್ವೆ ಇಲಾಖೆ, ತನ್ನ ಸಾರ್ವಜನಿಕ ಸಂಪರ್ಕವನ್ನು ಹೆಚ್ಚಿಸಲು ಮತ್ತು ತನ್ನ ಪ್ರಯಾಣಿಕರೊಂದಿಗೆ ಹೆಚ್ಚು ಬಾಂಧವ್ಯ ಬೆಸೆಯಲು ಬಯಸುತ್ತದೆ. ಆ ದಿಕ್ಕಿನಲ್ಲಿ ಇದು ಒಂದು ಹೆಜ್ಜೆಯಾಗಿದೆ" ಎಂದು ಅವರು ಹೇಳಿದರು. ಕರ್ನಾಟಕದ 10 ರೈಲು ನಿಲ್ದಾಣಗಳಿಗೆ ಕಿಟ್‌ಗಳನ್ನು ನೀಡಲು ಸಿದ್ಧ ಎಂದು ಯುಐಡಿಎಐ ಮೂಲಗಳು ತಿಳಿಸಿವೆ.

ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಮನೆ-ಮನೆಗೆ ಪೋಸ್ಟ್‌ಮ್ಯಾನ್‌ಗಳುಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಮನೆ-ಮನೆಗೆ ಪೋಸ್ಟ್‌ಮ್ಯಾನ್‌ಗಳು

ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ

ಕೇಂದ್ರದ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯಡಿಯಲ್ಲಿ, ವಿಭಾಗದ ಚಿಕ್ಕ ನಿಲ್ದಾಣಗಳಲ್ಲಿ ಅನೇಕ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಶ್ಯಾಮ್ ಸಿಂಗ್ ಹೇಳಿದರು. ಬುಡಕಟ್ಟು ಜನಾಂಗದವರಿಂದ ಪಡೆದ ರಾಗಿ ಮತ್ತು ಜೇನುತುಪ್ಪದ ಉತ್ಪನ್ನಗಳನ್ನು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

Aadhar Center Will Opening Soon At Bengaluru KSR Railway Station

ಕೆಆರ್ ಪುರಂ ನಿಲ್ದಾಣದಲ್ಲಿ ಕೃಷ್ಣರಾಜಪುರ, ಯಲಹಂಕ ಮತ್ತು ದೊಡ್ಡಬಳ್ಳಾಪುರದಲ್ಲಿ ತಯಾರಾಗುವ ರೇಷ್ಮೆ ಮತ್ತು ಕಾಟನ್ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ. ಹಿಂದೂಪುರ ನಿಲ್ದಾಣದಲ್ಲಿ ಮುದ್ದಿರೆಡ್ಡಿಪಾಳ್ಯ ಸೀರೆಗಳನ್ನು ಮಾರಾಟ ಮಾಡಲು ಇತ್ತೀಚೆಗೆ ಮಳಿಗೆಗಳನ್ನು ತೆರೆಯಲಾಗಿದೆ.

Recommended Video

ಆತ್ಮ ನಿರ್ಭರ ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಅನಾವರಣ | Oneindia Kannada

English summary
Aadhaar centre is set to be launched at KSR Bengaluru railway station. This is first station in the South Western Railway Zone to have the Aadhaar centre facility. The issue of new Aadhaar cards as well as changes to be made to existing card will be done here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X