Murder ಬೆಂಗಳೂರಲ್ಲಿ ಈ ಕಾರಣಕ್ಕೆ ಚಾಕು ಇರಿದು ಯುವಕ ಕೊಲೆ
murder case: ಬೆಂಗಳೂರಲ್ಲಿ ಸೋಮವಾರ ಯುವಕನೊಬ್ಬನನ್ನು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸಣ್ಣ ವಿಷಯಕ್ಕೆ ಮತ್ತೆ ಬೆಂಗಳೂರಿಲ್ಲಿ ನೆತ್ತರು ಹರಿದಿದೆ. ಬಲಶಂಕರಿಯಲ್ಲಿ ಸೋವಾರ ಯುವಕನೊಬ್ಬನನ್ನು ಕೊಲೆ ಮಾಡಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿಯ ಕಾವೇರಿ ನಗರದಲ್ಲಿ ಈ ಕೊಲೆ ನಡೆದಿದೆ. 21 ವರ್ಷದ ವಿಕ್ರಂ ಎನ್ನುವ ಯುವಕ ಮೃತ ದುರ್ದೈವಿ. ರೌಡಿಶೀಟರ್ ವಸಿಂ (28) ಎನ್ನುವವನು ವಿಕ್ರಂ ಎನ್ನುವ ಯುವಕನನ್ನು ಕೊಲೆ ಮಾಡಿದ್ದಾನೆ. ಕೆಲವು ವರ್ಷಗಳ ಹಿಂದೆ ವಿಕ್ರಂ ಹಾಗೂ ವಸಿಂ ನ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗಿದೆ. ಈ ವೇಳೆ ಆರೋಪಿಗೆ ವಿಕ್ರಂ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಈ ಹಳೇ ದ್ವೇಷಕ್ಕಾಗಿ ಇದೀಗ ಕೊಲೆ ನಡೆದಿದೆ. ಬನಶಂಕರಿಯ ಕಾವೇರಿ ನಗರದ 8ನೇ ಕ್ರಾಸ್‌ನಲ್ಲಿ ಸ್ನೇಹಿತನೊಂದಿಗೆ ವಿಕ್ರಂ ನಿಂತಿದ್ದ ಸಂದರ್ಭದಲ್ಲಿ ಚಾಕುವಿನಿಂದ ಎದೆಗೆ ಇರಿದು ಕೊಲೆ ಮಾಡಲಾಗಿದೆ. ವಿಕ್ರಂ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗುತ್ತಿದಾದರೂ, ಮಾರ್ಗ ಮಧ್ಯೆಯೇ ವಿಕ್ರಂ ಕೊನೆಯುಸಿರೇಳೆದಿದ್ದಾರೆ.
ಇನ್ನು ಕೊಲೆ ಮಾಡಿದ ಕೂಡಲೇ ವಸಿಂ ಎಸ್ಕೇಪ್ ಆಗಿದ್ದ. ಆತನನ್ನು ಸಂಜೆಯ ವೇಳೆಗೆ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊರ ರಾಜ್ಯದ ಪೊಲೀಸ್ ಅಧಿಕಾರಿ ಹೆಸರಲ್ಲಿ ವಂಚನೆ
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿವಿಧ ರೀತಿಯ ಸೈಬರ್ ಕ್ರೈಂ ಅಪರಾಧಗಳು ಹೆಚ್ಚಾಗುತ್ತಿವೆ. ಇದಕ್ಕೆ ಮತ್ತೊಂದು ಸಾಕ್ಷಿ ವಿಜಯಪುರದಲ್ಲಿ ನಡೆದಿರುವ ಘಟನೆ. ವಿಜಯಪುರದ ವ್ಯಕ್ತಿಯೊಬ್ಬರಿಗೆ ಮುಂಬೈನ ಕ್ರೈಂ ಬ್ರ್ಯಾಂಚ್‌ನಿಂದ ಕರೆ ಮಾಡುತ್ತಿರುವುದಾಗಿ ನಕಲಿ ಕರೆ ಬಂದಿದ್ದು, ಸ್ವಲ್ಪದರಲ್ಲೇ ಮೋಸಹೋಗುವುದರಿಂದ ಸಂತೋಷ ಚೌಧರಿ ಎನ್ನುವವರು ಪಾರಾಗಿದ್ದಾರೆ.
ಕರ್ನಾಟಕದ ವಿಜಯಪುರದ ನಿವಾಸಿ ಸಂತೋಷ ಚೌಧರಿ ಎನ್ನುವವರಿಗೆ ಸೈಬರ್ ಕಳ್ಳರು ತಾವು ಮುಂಬೈನ ಪೊಲೀಸ್ ಅಧಿಕಾರಿಗಳು ನಿಮ್ಮ ದೂರವಾಣಿ ಸಂಖ್ಯೆಯ ಮೇಲೆ ಹಲವು ದೂರುಗಳಿವೆ ಎಂದು ಬೆದರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಕ್ರೈಂ ಬ್ರ್ಯಾಂಚ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿರುವ ನಕಲಿ ಪೊಲೀಸ್ ಅಧಿಕಾರಿ ಸಂತೋಷ್ ಅವರಿಂದ ಓಟಿಪಿ ಪಡೆದು ಹಣ ಎಗರಿಸಲು ಮುಂದಾಗಿದ್ದಾನೆ. ಆದರೆ, ಸಂತೋಷ್ ಅವರಿಗೆ ಅನುಮಾನ ಬಂದಿದ್ದರಿಂದ ಮೋಸ ಮಾಡಲು ಸಾಧ್ಯವಾಗಿಲ್ಲ.
ಮಹಾರಾಷ್ಟ್ರದ ಪೊಲೀಸ್ ಸಮವಸ್ತ್ರದಲ್ಲೇ ವಿಡಿಯೋ ಕಾಲ್ ಮಾಡಿರುವ ವ್ಯಕ್ತಿ ತಾನು ಮುಂಬೈ ಪೊಲೀಸ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿಮ್ಮ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದಂತೆ 17ಕ್ಕೂ ಹೆಚ್ಚು ಪ್ರಕರಣಗಳಿವೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವುದು ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಸಂದೇಶಗಳನ್ನು ಈ ಸಂಖ್ಯೆಯಿಂದ ಹಂಚಿಕೊಳ್ಳಲಾಗಿದೆ ಎಂದು ನಕಲಿ ಪೊಲೀಸ್ ಹೇಳಿದ್ದಾನೆ. ಆದರೆ, ಈ ಬಗ್ಗೆ ಅನುಮಾನಗೊಂಡ ಸಂತೋಷ್ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.












Click it and Unblock the Notifications