ಗೋವಾ ವಿಮಾನ ನಿಲ್ದಾಣದಲ್ಲಿ ರನ್‌ವೇಗೆ ನುಗ್ಗಿದ ಬೀದಿ ನಾಯಿ, ಬೆಂಗಳೂರಿಗೇ ಹಿಂತಿರುಗಿದ ವಿಸ್ತಾರಾ ವಿಮಾನ
ಪಣಜಿ, ನವೆಂಬರ್ 14: ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ರನ್‌ವೇಯಲ್ಲಿ ಬೀದಿನಾಯಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಸ್ತಾರಾ ವಿಮಾನವು ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯದೆ ಬೆಂಗಳೂರಿಗೆ ಮರಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ದಾಬೋಲಿಮ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬೀದಿ ನಾಯಿ ಕಾಣಿಸಿಕೊಂಡಿದ್ದರಿಂದ ಪೈಲಟ್‌ಗೆ "ಸ್ವಲ್ಪ ತಡೆಯಿರಿ" ಎಂದು ಹೇಳಲಾಯಿತು. ಬಳಿಕ ಬೆಂಗಳೂರಿಗೆ ಮರಳಲು ಅವರು ಆದೇಶ ನೀಡಿದರು ಎಂದು ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್‌ವಿಟಿ ಧನಂಜಯ ರಾವ್ ಪಿಟಿಐಗೆ ತಿಳಿಸಿದರು.

ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ನೌಕಾಪಡೆಯ INS ಹನ್ಸಾ ನೆಲೆಯ ಭಾಗವಾಗಿದೆ. ವಿಸ್ತಾರಾ ವಿಮಾನ ಯುಕೆ 881 ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಮಧ್ಯಾಹ್ನ 12.55 ಕ್ಕೆ ಹೊರಟು ಮಧ್ಯಾಹ್ನ 3.05 ಕ್ಕೆ ಹಿಂತಿರುಗಿತು. ಮತ್ತೆ ಬೆಂಗಳೂರಿನಿಂದ ಸಂಜೆ 4.55ಕ್ಕೆ ಹೊರಟ ವಿಮಾನ 6.15ಕ್ಕೆ ಗೋವಾ ತಲುಪಿತು ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ವಿಸ್ತಾರಾ ಎಕ್ಸ್ ಪೋಸ್ಟ್‌ನಲ್ಲಿ, "ಗೋವಾವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ಬಂಧದ ಕಾರಣದಿಂದ ಬೆಂಗಳೂರಿನಿಂದ ಗೋವಾಕ್ಕೆ ಯುಕೆ 881 ವಿಮಾನವನ್ನು ಬೆಂಗಳೂರಿಗೆ ತಿರುಗಿಸಲಾಗಿದೆ. 15.05 ಗಂಟೆಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ" ಎಂದು ಹೇಳಿತು. ಎರಡು ಗಂಟೆಗಳ ನಂತರ ಮತ್ತೊಂದು ಪೋಸ್ಟ್‌ನಲ್ಲಿ, "ಬೆಂಗಳೂರು ಕಡೆಗೆ ತಿರುಗಿಸಲಾದ ಯುಕೆ 881 ವಿಮಾನವು ಬೆಂಗಳೂರಿನಿಂದ 16.55 ಗಂಟೆಗೆ ಹೊರಟಿದೆ ಮತ್ತು 18.15 ಗಂಟೆಗೆ ಗೋವಾ ತಲುಪುವ ನಿರೀಕ್ಷೆಯಿದೆ" ಎಂದು ಅದು ಹೇಳಿತು.
ಒಮ್ಮೊಮ್ಮೆ ಬೀದಿ ನಾಯಿ ರನ್‌ವೇಗೆ ಪ್ರವೇಶಿಸಿದ ನಿದರ್ಶನಗಳಿವೆ. ಆದರೆ ಆ ಪ್ರದೇಶವನ್ನು ಮೈದಾನದ ಸಿಬ್ಬಂದಿ ತಕ್ಷಣವೇ ತೆರವುಗೊಳಿಸುತ್ತಾರೆ. ಕಳೆದ ಒಂದೂವರೆ ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಇದು ಮೊದಲ ಘಟನೆಯಾಗಿದೆ ಎಂದು ಎಸ್‌ವಿಟಿ ಧನಂಜಯ ರಾವ್ ಅವರು ಹೇಳಿದರು.
ಟಾಟಾ ಎಸ್‌ಐಎ ಏರ್‌ಲೈನ್ಸ್ ಲಿಮಿಟೆಡ್ ವಿಸ್ತಾರಾ ಎಂದು ಕಾರ್ಯನಿರ್ವಹಿಸುತ್ತಿದೆ. ಇದು ಗುರುಗ್ರಾಮ್‌ನಲ್ಲಿ ನೆಲೆಗೊಂಡಿರುವ ಭಾರತೀಯ ಪೂರ್ಣ-ಸೇವಾ ವಿಮಾನಯಾನ ಸಂಸ್ಥೆಯಾಗಿದ್ದು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಕೇಂದ್ರವನ್ನು ಹೊಂದಿದೆ. ಟಾಟಾ ಸನ್ಸ್ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ ಜಂಟಿ ಉದ್ಯಮವಾದ ವಾಹಕವು 9 ಜನವರಿ 2015 ರಂದು ದೆಹಲಿ ಮತ್ತು ಮುಂಬೈ ನಡುವಿನ ತನ್ನ ಉದ್ಘಾಟನಾ ವಿಮಾನದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.












Click it and Unblock the Notifications