ಬೆಂಗಳೂರು, ಕನ್ನಡಿಗರ ಬಗ್ಗೆ ಮಾತಾಡಿ ಕೆಲಸ ಕಳ್ಕೊಂಡ ನಾರ್ತ್ ಇಂಡಿಯನ್ ಮಹಿಳೆ
ರೀಲ್ಸ್‌ನಲ್ಲಿ ನಮ್ಮ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಹಾಸ್ಯ ಮಾಡಿದ್ದ ಉತ್ತರ ಭಾರತದ ಮಹಿಳೆಗೆ ತಕ್ಕ ಶಾಸ್ತಿಯಾಗಿದೆ. ಇಲ್ಲೇ ಇದ್ದು ಈ ನೆಲದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಕ್ಕೆ ಈಗ ಆಕೆಯ ಉದ್ಯೋಗಕ್ಕೆ ಕುತ್ತು ಬಂದಿದೆ. ಇತ್ತೀಚೆಗೆ ರೀಲ್ಸ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸುಗಂಧ್ ಶರ್ಮಾ ಎಂಬ ಮಹಿಳೆಯನ್ನು ಸದ್ಯ ಉದ್ಯೋಗದಿಂದ ಕಿತ್ತು ಹಾಕಲಾಗಿದೆ.
ಉತ್ತರ ಭಾರತದ ಸುಗಂಧ್ ಶರ್ಮಾ ಎನ್ನುವ ಮಹಿಳೆ ಮಾಡಿದ್ದ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ರೀಲ್ಸ್‌ನಲ್ಲಿ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ಮಹಿಳೆ, ʼನಾವು ಉತ್ತರ ಭಾರತೀಯರೇ ಇಲ್ಲ ಅಂದ್ರೆ.. ಇಡೀ ಬೆಂಗಳೂರು ಖಾಲಿ ಖಾಲಿ ಹೊಡೆಯುತ್ತೆ.. ಇಲ್ಲಿರುವ ಪಿ.ಜಿಗಳೆಲ್ಲ ಭಣಗುಡುತ್ತವೆ. ಇನ್ನು ಕೋರಮಂಗಲದ ಪಬ್‌ಗಳೆಲ್ಲವೂ ಬಿಕೋ ಎನ್ನುತ್ತವೆ. ಹಾಗಾಗಿ, ನಮ್ಮ ಬಗ್ಗೆ ಮಾತನಾಡುವಾಗ ಹುಷಾರ್! ಎಂದು ರೀಲ್ಸ್‌ನಲ್ಲಿ ಮಹಿಳೆ ಕೊಬ್ಬಿನಿಂದ ಮಾತನಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಯುವತಿಯ ವಿಡಿಯೋಗೆ ಸ್ಯಾಂಡಲ್‌ವುಡ್‌ನ ಕೆಲವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಗ್‌ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಕೂಡ ಪ್ಲೀಸ್ ಇಲ್ಲಿಂದ ಹೊರಡಿ ಎಂದು ಈ ರೀಲ್ಸ್‌ಗೆ ಕಾಮೆಂಟ್ ಮಾಡಿದ್ದರು. ನಟಿ ಚೈತ್ರಾ ಆಚಾರ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದು, ನೀವು ಹೇಳಿದಂತೆ ನಾವು ನಿಮ್ಮಂತವರು ಇಲ್ಲದ ಖಾಲಿ ಬೆಂಗಳೂರನ್ನು ನೋಡಲು ಇಚ್ಛಿಸುತ್ತೇವೆ. ನಾವು ಹಾಗೆಯೇ ಜೀವನ ನಡೆಸಲು ಇಷ್ಟ ಪಡುತ್ತೇವೆ. ಬೇರೆಯವರ ಬಗ್ಗೆ ನಾನು ಮಾತನಾಡುತ್ತಿಲ್ಲ, ಮೊದಲು ನೀವು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಸಿಡದಿದ್ದರು.
ಕನ್ನಡತಿ, ಟಾಲಿವುಡ್ ನಟಿ ವರ್ಷ ಬೊಲ್ಲಮ್ಮ ಕೂಡ, ಆದಷ್ಟು ಬೇಗನೇ ಅಲ್ಲಿಂದ ಹೊರಡಿ, ನೀವು ಹೇಳಿದ್ದು ಆದ್ರೆ ತುಂಬಾ ಚೆನ್ನಾಗಿರುತ್ತೆ! ಎಂದು ಕಾಮೆಂಟ್‌ನಲ್ಲಿ ಆಕೆಯ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಕಿರುತೆರೆ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ನಾರಾಯಣಗೌಡ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದರು. ಇಲ್ಲಿಗೆ ಬಂದ ಮೇಲೆ ಸುಮ್ಮನಿರಬೇಕು..ಆಗದಿದ್ರೆ ಗಂಟು ಮೂಟೆ ಕಟ್ಟಿಕೊಂಡು ನಿಮ್ಮೂರಿಗೆ ಹೊರಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡಿದ್ದ ಮಹಿಳೆ ಯೂಟರ್ನ್ ಹೊಡೆದು, ಬೆಂಗಳೂರು ಅಂದ್ರೆ ನನಗೆ ತುಂಬಾ ಇಷ್ಟ ಎಂದು ಮತ್ತೊಂದು ರೀಲ್ಸ್ ಮಾಡಿ ಶಾಕ್ ನೀಡಿದ್ದರು.

ರೀಲ್ಸ್ ಮಾಡಿ ಅದರಲ್ಲಿ ʼಐ ಲವ್ ಬೆಂಗಳೂರುʼ ಎನ್ನುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು. ಇನ್ನೊಂದು ರೀಲ್ಸ್‌ನಲ್ಲಿ ಆಕೆ, ನಾನು ಕಾಮಿಡಿಗಾಗಿ ಮಾಡಿದ ರೀಲ್ಸ್ ನೋಡಿ ಹಲವರು ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. "ನಾನು ಬೆಂಗಳೂರನ್ನೇ ಪ್ರೀತಿಸುತ್ತೇನೆ" ಎಂದು ಕನ್ನಡದಲ್ಲೇ ಮಾತನಾಡಿ, ನಾನೊಬ್ಬ ಟ್ರಾವೆಲರ್, ಎಲ್ಲ ಊರಿನ ಸಂಸ್ಕೃತಿ ನನಗೆ ಇಷ್ಟ. ಎಲ್ಲ ಊರನ್ನೂ ನಾನು ಗೌರವಿಸುತ್ತೇನೆ. ನಾವು ಒಡೆದು ಆಳುವುದು ಬೇಡ. ನಾವೆಲ್ಲ ಒಂದು, ಇದು ಇಂಡಿಯಾ, ನಾನು ಭಾರತೀಯಳು ಎಂದೆಲ್ಲ ಭಾಷಣ ಬಿಗಿದಿದ್ದರು.
ಆದರೂ ಕನ್ನಡಿಗರ ಕೋಪ ತಣ್ಣಗಾಗಲಿಲ್ಲ. ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಮಹಿಳೆ ಬಗ್ಗೆ ಆಕ್ರೋಶಗೊಂಡು ಅವರ ಕೆಲಸದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಅದರಂತೆ ಆ ಮಹಿಳೆ ಫ್ರೀಡಂ ಆಪ್‌ನಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಮೇರೆಗೆ ಸೀದಾ ಅಲ್ಲಿಗೆ ತೆರಳಿ, ಸುಗಂಧ ಶರ್ಮ ಬೆಂಗಳೂರಿನ ವಿರುದ್ದ ಮಾತನಾಡಿರೋ ವಿಷಯವಾಗಿ ಸಂಸ್ಥೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತನಾಡಿದ್ದರು. ಈಕೆಯ ಕನ್ನಡವಿರೋಧಿ ನೀತಿ ಕಂಡು ಈಕೆಯನ್ನು ಕೆಲಸದಿಂದ ತೆಗೆದಿದ್ದು, ಆಕೆಯ ಮೇಲೆ ಕ್ರಮಕ್ಕೆ ಕೋರಮಂಗಲ ಠಾಣೆಯಲ್ಲಿ ದೂರು ಕೊಟ್ಟಿರುವುದಾಗಿ ರೂಪೇಶ್ ರಾಜಣ್ಣ ಹೇಳಿದ್ದಾರೆ.
💪🏻💪🏻💪🏻
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) September 23, 2024
ಕಡೆಗೂ ಕನ್ನಡಿಗರ ಕ್ಷಮೆ ಕೇಳಿಸಿದ್ದೇವೆ.
ಯಾರೇ ಆಗಲಿ ಕನ್ನಡ,ಕನ್ನಡಿಗರ ತಂಟೆಗೆ ಬಂದ್ರೆ ಇಷ್ಟೇ..
ನಮ್ಮ ವಿರುದ್ಧ ಗೆಲ್ಲೋದು ಅಷ್ಟು ಸುಲಭವಲ್ಲ
ಕನ್ನಡಿಗರಿಗೆ ಜಯವಾಗಲಿ... 💛❤️💪🏻
ಇಷ್ಟಕ್ಕೆ ಮುಗಿದಿಲ್ಲ ಪೊಲೀಸ್ ಠಾಣೆಗೆ ಬಂದು ಲಿಖಿತ ಹೇಳಿಕೆ ಕೊಡುವವರೆಗೂ ನಮ್ಮ ಹೋರಾಟ ಇರುತ್ತದೆ...
ಜೈ ಕರ್ನಾಟಕ 💛❤️ pic.twitter.com/ZjuvmZ5Tgw
ಕೆಲಸ ಹೋದ ಬಳಿಕ ಮತ್ತೊಂದು ವಿಡಿಯೋ ಮಾಡಿರುವ ಮಹಿಳೆ ಕನ್ನಡಿಗರನ್ನು ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ನಾನು ಬೆಂಗಳೂರಿನ ಬಗ್ಗೆ ವಿಡಿಯೋ ಮಾಡಿದ್ದೆ. ಅದರಿಂದ ನಿಮಗೆ ನೋವಾಗಿದೆ, ದಯವಿಟ್ಟು ನನ್ನನ್ನು ಕ್ಷಮಿಸಿ, ನಾನು ಭಾರತದ ಎಲ್ಲಾ ಭಾಷೆ, ಸಂಸ್ಕೃತಿಯನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ದಯವಿಟ್ಟು ಕ್ಷಮಿಸಿ..ಎಂದಿದ್ದಾರೆ.
ಇದಕ್ಕೆ ಒಪ್ಪದ ರೂಪೇಶ್ ರಾಜಣ್ಣ, ಪೊಲೀಸ್ ಠಾಣೆಗೆ ಬಂದು ಲಿಖಿತ ಹೇಳಿಕೆ ಕೊಡುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ವಾರ್ನ್ ಕೂಡ ಮಾಡಿದ್ದಾರೆ. ವಿಡಿಯೋ ಉಲ್ಲೇಖಿಸಿ, ಕಡೆಗೂ ಕನ್ನಡಿಗರ ಕ್ಷಮೆ ಕೇಳಿಸಿದ್ದೇವೆ. ಯಾರೇ ಆಗಲಿ ಕನ್ನಡ, ಕನ್ನಡಿಗರ ತಂಟೆಗೆ ಬಂದ್ರೆ ಇಷ್ಟೇ..ನಮ್ಮ ವಿರುದ್ಧ ಗೆಲ್ಲೋದು ಅಷ್ಟು ಸುಲಭವಲ್ಲ. ಕನ್ನಡಿಗರಿಗೆ ಜಯವಾಗಲಿ ಎಂದಿದ್ದಾರೆ.
-
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications