ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಾಜಿನಗರ, ರಿಂಗ್ ರೋಡ್ ಬೆಸೆಯುವ ರಸ್ತೆ ನಿರ್ಮಿಸಲು ನಿರ್ಧಾರ

|
Google Oneindia Kannada News

ಬೆಂಗಳೂರು, ಜುಲೈ 20: ನಗರದ ರಾಜಾಜಿ ನಗರದಿಂದ ರಿಂಗ್ ರೋಡ್ ಗೆ ಸಂಪರ್ಕಿಸಲು ಸುಲಭ ಸಾಧ್ಯವಾಗುವಂಥ ಶಾರ್ಟ್ ಕಟ್ ರಸ್ತೆಯೊಂದರ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ.

ಮೆದುಳಿನ ಆಪರೇಷನ್ ವೇಳೆ ಗಿಟಾರ್ ಬಾರಿಸುತ್ತಿದ್ದ ಬೆಂಗಳೂರು ಟೆಕ್ಕಿ!ಮೆದುಳಿನ ಆಪರೇಷನ್ ವೇಳೆ ಗಿಟಾರ್ ಬಾರಿಸುತ್ತಿದ್ದ ಬೆಂಗಳೂರು ಟೆಕ್ಕಿ!

ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಹೊಸ ಯೋಜನೆಯಿಂದಾಗಿ ರಾಜಾಜಿ ನಗರದಿಂದ ರಿಂಗ್ ರೋಗ್ ಗೆ ಸಾಗುವವರಿಗೆ ಸುಮಾರು 10 ಕಿ.ಮೀ.ಗಳಷ್ಟು ದೂರ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

A New road will be constructed between Rajajinagar to Ourter Ring Road of Bengaluru

ಈ ಉದ್ದೇಶಿತ ಹೊಸ ರಸ್ತೆಯು, ರಿಂಗ್ ರೋಡ್ ಹಾಗೂ ರಾಜಾಜಿ ನಗರವನ್ನು ಸಂಪರ್ಕಿಸುವ ಸುಮಾರು 3.5 ಕಿ.ಮೀ. ದೂರದ ಪೈಪ್ ಲೈನ್ ರಸ್ತೆಯಲ್ಲೇ ನಿರ್ಮಾಣವಾಗಲಿದೆ. ಅಂದರೆ, ಈಗಿರುವ ಪೈಪ್ ಲೈನ್ ರಸ್ತೆಯ ಅಗಲ ಹೆಚ್ಚಿಸಿ, ನವೀಕರಿಸಿ ದೊಡ್ಡ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು-ಮುಂಬೈ ವಿಮಾನದಲ್ಲಿ ಹಸ್ತಮೈಥುನ ಮಾಡಿದ ವ್ಯಕ್ತಿಯ ಬಂಧನ ಬೆಂಗಳೂರು-ಮುಂಬೈ ವಿಮಾನದಲ್ಲಿ ಹಸ್ತಮೈಥುನ ಮಾಡಿದ ವ್ಯಕ್ತಿಯ ಬಂಧನ

ಸದ್ಯಕ್ಕೆ , ರಾರಾಜಿ ನಗರದಿಂದ ರಿಂಗ್ ರೋಡ್ ಗೆ ಸಾಗುವ ವಾಹನ ಸವಾರರು ತುಮಕೂರು ರಸ್ತೆಯಿಂದ ಅಥವಾ ಮಾಗಡಿ ರಸ್ತೆಯಿಂದ ಸಾಗಿ ರಿಂಗ್ ರೋಡ್ ಸೇರಿಕೊಳ್ಳಬೇಕಿದೆ.

ರಾಜಾಜಿ ನಗರದ ಪೈಪ್ ಲೈನ್ ರಸ್ತೆಯ ಮೂಲಕ ಸಾಗಲು ಅವಕಾಶವಿದ್ದರೂ ಅಲ್ಲಿ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುವುದರಿಂದ ಆ ರಸ್ತೆಯನ್ನು ಉಪಯೋಗಿಸಲು ವಾಹನ ಸವಾರರು ಹಿಂದೇಟು ಹಾಕುತ್ತಾರೆ. ಈ ತೊಂದರೆಯನ್ನು ನಿವಾರಿಸಲು ಪೈಪ್ ಲೈನ್ ರಸ್ತೆಯ ಅಗಲೀಕರಣ ಹಾಗೂ ನವೀಕರಣದ ಯೋಜನೆಯನ್ನು ಸಿದ್ಧಪಡಿಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

English summary
The BBMP will soon take up construction of a road connecting Rajajinagar and Outer Ring Road (ORR) that will cut journey distance between the two points by 10 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X