ಎಣ್ಣೆ ಮತ್ತಲ್ಲಿದ್ದವನ ಮುಂದೆ 'ಕನ್ನಡ ಬರಲ್ಲ' ಎಂದ ಕ್ಯಾಶಿಯರ್‌, ಆ ಮೇಲಾಗಿದ್ದು ಅವಾಂತರ!

ಕನ್ನಡ ಭಾಷಾ ವಿಚಾರವಾಗಿ ಹಲವು ಹೋರಾಟಗಾರರು ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ. ಕನ್ನಡ ವಿಚಾರವಾಗಿಯೇ ಬೆಂಗಳೂರಿನಲ್ಲಿ ಇತ್ತೀಚೆಗೆ ಹಲವು ಜಗಳಗಳು ಕೂಡ ನಡೆಯುತ್ತಿರುವುದು ಸುದ್ದಿಯಾಗುತ್ತಲೇ ಇವೆ. ಆದರೆ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕನ್ನಡ ಪ್ರೇಮ ಮೆರೆಯುವ ಭರದಲ್ಲಿ ಹಲ್ಲೆ ಮಾಡುವ ಮಟ್ಟಕ್ಕೆ ತಲುಪಿದ್ದಾನೆ.

ಬೆಂಗಳೂರಿನ ವಿಜಯನಗರ ಬಳಿಯ ಹಂಪಿನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವ್ಯಕ್ತಿಯೊಬ್ಬ ಮೊದಲಿಗೆ ಅಂಗಡಿಗೆ ಬಂದಿದ್ದು ಮದ್ಯದ ಅಮಲಿನಲ್ಲೇ ಇದ್ದ. ಬಳಿಕ ಹಣ ಪಾವತಿ ವಿಚಾರವಾಗಿ ಅಂಗಡಿಯ ಕ್ಯಾಶಿಯರ್‌ ಜೊತೆಗೆ ಕಿರಿಕ್‌ ಕೂಡ ಮಾಡಿಕೊಂಡಿದ್ದಾನೆ. ಈ ವೇಳೆ ಆತನನ್ನು ಮದ್ಯ ಸೇವಿಸಿದ್ದ ವ್ಯಕ್ತಿಯು ಅವಾಚ್ಯವಾಗಿ ನಿಂದಿಸಿದ್ದ ಎನ್ನಲಾಗಿದೆ.

A Man Who Assaulted A Shopkeeper In Bengaluru For Not Knowing Kannada

ಅಂಗಡಿಯ ಕ್ಯಾಶಿಯರ್‌ನನ್ನ ಕನ್ನಡದಲ್ಲಿ ಮಾತನಾಡೋ ಎಂದು ಎಣ್ಣೆ ಏಟಲ್ಲಿ ದಬಾಯಿಸಿದ್ದಾನೆ. ಈ ವೇಳೆ ಏಕಾಏಕಿ ಬಾರ್‌ ಒಳಗೆ ಪ್ರವೇಶಿಸಿ, ಕ್ಯಾಶಿಯರ್‌ ಮೇಲೆ ಹಲ್ಲೆ ಕೂಡ ನಡೆಸಿದ್ದಾನೆ. ಈ ವಿಡಿಯೋ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆತ ಅಲ್ಲಿಗೆ ಬರುವ ಮುನ್ನವೇ ಎಣ್ಣೆ ಮತ್ತಿನಲ್ಲಿ ಬಂದಿದ್ದ ಎನ್ನಲಾಗಿದೆ. ಬಳಿಕ ಈ ಅಂಗಡಿಯಲ್ಲಿ ಕೆಲ ವಸ್ತುಗಳನ್ನು ಖರೀದಿಸಿದ್ದ. ಬಳಿಕ ಬಿಲ್‌ ಇಷ್ಟಾಗಿದೆ, ಹಣ ಪಾವತಿಸಿ ಎಂದು ಕ್ಯಾಶಿಯರ್‌ ಕೇಳಿದಾಗ ಈ ರೀತಿ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

A Man Who Assaulted A Shopkeeper In Bengaluru For Not Knowing Kannada

ನವೆಂಬರ್‌ 20ರಿಂದ ಎಲ್ಲ ಬಾರ್‌ ಬಂದ್‌ ಸಾಧ್ಯತೆ!

ರಾಜ್ಯದಲ್ಲಿರೋ ಮದ್ಯದಂಗಡಿ ಮಾಲೀಕರು ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಅಬಕಾರಿ ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಇದಕ್ಕೆ ಕಾರಣವಾಗಿರುವ ಅಬಕಾರಿ ಸಚಿವರನ್ನು ಮೊದಲು ಬದಲಾಯಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯದಿದ್ದರೆ, ನವೆಂಬರ್‌ 20ರಿಂದ ಎಲ್ಲ ಮದ್ಯದಂಗಡಿಗಳನ್ನು ಬಂದ್‌ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಲಂಚಾವತಾರ ಮಿತಿಮೀರುತ್ತಿದೆ ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಗುರುಸ್ವಾಮಿ ಆರೋಪಿಸಿದ್ದಾರೆ. ಅಬಕಾರಿ ಅಧಿಕಾರಿಗಳು ಭಾರಿ ಕಿರುಕುಳ ನೀಡುತ್ತಿದ್ದು, ಅಧಿಕಾರಿಗಳ ವರ್ಗಾವಣೆಗೆ ಕೋಟ್ಯಂತರ ಹಣ ವಸೂಲಿ ನಡೆಯುತ್ತಿದೆ ಎಂದು ಸಚಿವರ ಮೇಲೆ ಗಂಭೀರ ಆರೋಪ ಮಾಡಲಾಗಿದೆ.

ಅಸಮರ್ಥ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರನ್ನು ಆ ಸ್ಥಾನದಿಂದ ಬದಲಾವಣೆ ಮಾಡುವಂತೆ ಆಗ್ರಹಿಸಿ, ಮದ್ಯದಂಗಡಿ ಮಾಲೀಕರು ಪ್ರತಿಭಟನೆ ನಡೆಸಿ ಭ್ರಷ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ಬಿಜೆಪಿ ಕೂಡ ವಾಗ್ದಾಳಿ ನಡೆಸಿದೆ.

ಅಬಕಾರಿ ಸಚಿವರ ಮೇಲೆಯೇ ಮದ್ಯದಂಗಡಿ ಮಾಲೀಕರು ಗಂಭೀರ ಆರೋಪ ಮಾಡಿದ್ದು, ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವಂತೆ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್‌ ಆಗುವ ಸಾಧ್ಯತೆ ಇದೆ. ಇದರಿಂದ ಎಣ್ಣೆ ಪ್ರಿಯರು ಪರದಾಡುವುದು ಗ್ಯಾರಂಟಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+