• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀರಿನ ಮಹತ್ವ ಸಾರಲು ವಾಕಥಾನ್ ಏರ್ಪಡಿಸಿದ ಎಂಟರ ಬಾಲೆ

By Nayana Bj
|
Google Oneindia Kannada News

ಬೆಂಗಳೂರು, ಮಾರ್ಚ್ 21: ವಿಶ್ವ ಜಲದಿನದ ಅಂಗವಾಗಿ ನೇಚರ್ ಫಾರ್ ವಾಟರ್ ಘೋಷವಾಖ್ಯದೊಂದಿಗೆ ಮಾರ್ಚ್ 23ರಂದು ವಾಕಥಾನ್ ನಡೆಯಲಿದೆ.

ಈ ವಾಕಥಾನ್ ನ ವಿಶೇಷತೆಯೆಂದರೆ ಎಂಟು ವರ್ಷದ ಬಾಲಕಿ ಮಾನ್ಯ ಹರ್ಷಾ ಈ ವಾಕಥಾನ್ ಆಯೋಜನೆ ಮಾಡಿದ್ದಾಳೆ, ವಾಕಥಾನ್ ಪುಟ್ಟೇನಹಳ್ಳಿ ಕೆರೆಯಿಂದ ಜೆಪಿನಗರ 5ನೇ ಹಂತದವರೆಗೆ ನಡೆಸಲಾಗುತ್ತದೆ. ವಾಕಥನ್ ಮಧ್ಯದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಈ ವಾಕಥಾನ್ ಗೆ ಸಾಕಷ್ಟು ಮಕ್ಕಳು ಕೈಜೋಡಿಸಿದ್ದಾರೆ. ಜಗತ್ತು 21ನೇ ಶತಮಾನದಲ್ಲಿಯೂ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ನೀರು. ಮನುಷ್ಯ ಮತ್ತು ಸಕಲ ಜೀವರಾಶಿಗಳು ನೀರಿನ ಬಳಕೆಗಾಗಿ ಪರಿತಪಿಸದ ದಿನಗಳೇ ಇಲ್ಲ. ಈ ನಿಟ್ಟಿನಲ್ಲಿ ಮಾ21 ರಂದು ನೀರಿನ ಕುರಿತಾಗಿ ಜಾಗೃತಿ ಮೂಡಿಸಲೆಂದೇ ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಮತ್ತೊಂದು ವಿಶ್ವ ಜಲ ದಿನ ಬಂದು ಹೋಗಿದೆ.

ನೀರಿನ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡಡೆಯುತ್ತಿದೆ. ಇದೇ ರೀತಿ ಬೆಂಗಳೂರಿನಲ್ಲೂ ನೀರಿನ ಸಂರಕ್ಷಣೆ ಕುರಿತಾಗಿ ಮಾ.೨೩ರಂದು ಪುಟ್ಟೇನಹಳ್ಳಿ ಕೆರೆಯಿಂದ ಜೆಪಿನಗರ ಐದನೇ ಹಂತದವರೆಗೆ ವಾಕಥಾನ್ ನಡೆಯಲಿದೆ.

English summary
A Girl of 8years old girl Manya Harsha is going to host walkathon to create awareness about water conservation on the occasion of world water Day on March 23. at 6am in Puttenahalli lake premises in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X