ಬೆಂಗಳೂರಿನ ಪಬ್ ನಲ್ಲಿ ಅಗ್ನಿ ಅವಘಡ; ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವ್ಯಕ್ತಿ!
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರಿನಲ್ಲಿ ಮತ್ತೊಂದು ಅಗ್ನ ಅವಘಡ ಸಂಭವಿಸಿದ್ದು, ಕೋರಮಂಗಲ ಸಮೀಪರ ಪಬ್ ನಲ್ಲಿ ಸಿಲಿಂಡರ್ ಸ್ಟೋಟದಿಂದ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ.
ಇನ್ನೂ ನೋಡ ನೋಡುತ್ತಿದ್ದಂತೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ವ್ಯಕ್ತಿಯೊರ್ವ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ಸಿಲಿಂಡರ್ ಸ್ಫೋಟದಿಂದ ಕೋರಮಂಗಲದ ಮಡ್ ಪೈಪ್ ಹುಕ್ಕಾ ಪಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ನೋಡ ನೋಡುತ್ತಿದ್ದಂತೆ ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಗುತಿಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ಆರಿಸಲು ಹರಸಾಹಸಪಟ್ಟಿದ್ದಾರೆ.
Fire in Mudpipe Banglore Koramangala #Bangalore #FireAccident #explosion #Karnataka #Koramangala #Trending #Mudpipe #Bengaluru pic.twitter.com/NpsGuuX2CK
— Alric Antony (@AlricAntony4) October 18, 2023
ಘಟನೆಯಲ್ಲಿ ಇಬ್ಬರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದ್ದು, ಗಾಯಾಳುಗಳನ್ನು ಸದ್ಯ ಸಮೀಪದ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೋರಮಂಗಲದ ಮಡ್ ಪೈಪ್ ಕಟ್ಟಡದಲ್ಲಿ ಬೆಂಕಿಯಿಂದ ಧಗಧಗನೆ ಕಟ್ಟಡ ಹತ್ತಿ ಉರಿದಿದ್ದು, ಬಿಲ್ಡಿಂಗ್ ನ ಟಾಪ್ ಫ್ಲೋರ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕಟ್ಟಡದ ಮೇಲ್ಬಾಗದಲ್ಲಿ ಐದಾರು ಗ್ಯಾಸ್ ಗಳನ್ನ ಇಡಲಾಗಿತ್ತು ಎನ್ನಲಾಗಿದ್ದು, ಸಿಲಿಂಡರ್ ಬ್ಲ್ಯಾಸ್ಟ್ ದಿಂದ ಧಗಧಗನೆ ಕಟ್ಟಡ ಹೊತ್ತಿ ಉರಿದಿದೆ.












Click it and Unblock the Notifications