ಟಿಕ್ ಟಾಕ್ ವಿಜಯಲಕ್ಷ್ಮಿ ಮಾತನಾಡಿಸಿದ ಪೊಲೀಸರು!

ಬೆಂಗಳೂರು, ಡಿಸೆಂಬರ್ 10: ಇತ್ತೀಚಿಗೆ ಟಿಕ್ ಟಾಕ್ ಬಹಳಷ್ಟು ಸದ್ದು ಮಾಡುತ್ತಿದೆ. ಅದರೊಟ್ಟಿಗೆ ಹಲವು ಅಮಾಯಕರಿಗೆ ಪಜೀತಿಯನ್ನೂ ತಂದೊಡ್ಡುತ್ತಿದೆ. ಟಿಕ್ ಟಾಕ್ ಸುಂದರಿ ನಂಬಿ ವ್ಯಕ್ತಿಯೊಬ್ಬ ಲಕ್ಷಾಂತರ ರುಪಾಯಿ ಕಳೆದುಕೊಂಡು ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿರುವುದನ್ನು ಖಾಸಗಿ ಸುದ್ದಿ ಚಾನೆಲ್ ಒಂದು ಬಹಿರಂಗಗೊಳಿಸಿದೆ.

ಟಿಕ್ ಟಾಕ್ ಮೂಲಕ, ಟಿಕ್ ಟಾಕ್ ನಲ್ಲಿ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಎಂಬಾಕೆಯನ್ನು ಪರಿಚಯ ಮಾಡಿಕೊಂಡಿದ್ದ ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಕುಮಾರ ಎಂಬಾತ ಲಕ್ಷಾಂತರ ರುಪಾಯಿ ಕಳೆದುಕೊಂಡಿದ್ದಾನೆ. ವಿಜಯಲಕ್ಷ್ಮಿ ಟಿಕ್ ಟಾಕ್ ಗೆ ಮಾರು ಹೋದ ಶಿವಕುಮಾರ ಅವಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಇದನ್ನೇ ದುರುಪಯೋಗ ಪಡಿಸಿಕೊಂಡ ವಿಜಯಲಕ್ಷ್ಮಿ ಶಿವಕುಮಾರನನ್ನು ಮದುವೆಯಾಗುವುದಾಗಿ ನಂಬಿಸಿ ಅವನಿಂದ 2 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

A Bengalore Young Man Cheated By Tik Tok Girl

ಅಲ್ಲದೇ ವಿಜಯಲಕ್ಷ್ಮಿಗೆ ಹಣ ವಾಪಸ್ಸು ಕೇಳಿದಾಗ ಬೆದರಿಕೆ ಹಾಕಿದ್ದಾಳೆ ಎಂದು ಸಹ ಶಿವಕುಮಾರ ದೂರು ದಾಖಲಿದ್ದಾನೆ. ಡಿ.ಜೆ.ಹಳ್ಳಿ ಪೊಲೀಸರು ವಿಜಯಲಕ್ಷ್ಮಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಟಿಕ್ ಟಾಕ್ ನಲ್ಲಿ ಬೆಡಗಿಯರ ವೈಯಾರಕ್ಕೆ ಮಾರು ಹೋಗುವ ಮುನ್ನ ಹತ್ತು ಸಾರಿ ಯೋಚಿಸಬೇಕು ಎಂಬುದು ಸಾಬೀತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+