• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನೈತಿಕ ಸಂಬಂಧ ಹೊಂದಲು ಬಯಸುವವರಲ್ಲೇ ಬೆಂಗಳೂರಿಗರೇ ಟಾಪ್!

|
   ಅವರ ದುಡ್ಡಲ್ಲಿ ಫ್ರೀ ಊಟ ಮಾಡೊ ನಮ್ಮದು ಒಂದು ಜನ್ಮಾನ..? | SWIGGY | ZOMATO | UBEREATS | DUNZO | DELIVERY BOY

   ಬೆಂಗಳೂರು, ಜನವರಿ.28: ಪ್ರೀತಿ, ಪ್ರೇಮ, ಪ್ರಣಯ ಅಲ್ಲ. ಅನೈತಿಕ ಸಂಬಂಧ ಬೆಳೆಸಲು ಇತ್ತೀಚಿಗೆ ತಂತ್ರಜ್ಞಾನ ಹೆಚ್ಚು ಹೆಚ್ಚು ಉಪಯೋಗವಾಗುತ್ತಿದೆ ಎಂದ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತಾ ಆಘಾತಕಾರಿ ವರದಿಯೊಂದು ಇದೀಗ ಬಹಿರಂಗವಾಗಿದೆ.

   ಮದುವೆಯ ನಂತರವೂ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಲು ಬಯಸುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಪತಿ ಪತ್ನಿಯರ ನಡುವಿನ ಬಾಂಧವ್ಯ ಹದಗೆಡುತ್ತಿದ್ದು, ಹೊರಗಿನ ಸಂಪರ್ಕ ಬೆಳೆಸಲು ವಿಶೇಷ ಆಪ್ ಗಳ ಮೊರೆ ಹೋಗುತ್ತಿದ್ದಾರೆ.

   60ರ ವೃದ್ಧೆ ಜೊತೆ 22ರ ಯುವಕನ ಲವ್ವಿ-ಡವ್ವಿ, ಕೇಸ್ ಹಾಕಿದ ಮಕ್ಕಳು!

   ಭಾರತದಲ್ಲಿ 8 ಲಕ್ಷ ಮಂದಿ ವಿವಾಹಿತರೇ ಡೇಟಿಂಗ್ ಆಪ್ ಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ಡೇಟಿಂಗ್ ಆಪ್ ಗಳಲ್ಲಿ ಹೆಸರು ನೋಂದಾಯಿಸಿಕೊಂಡವರ ಪೈಕಿ ಬೆಂಗಳೂರಿಗರೇ ಅತಿಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

   ಜನವರಿ ತಿಂಗಳಿನಲ್ಲಿ ಗಣನೀಯ ನೋಂದಣಿ

   ಜನವರಿ ತಿಂಗಳಿನಲ್ಲಿ ಗಣನೀಯ ನೋಂದಣಿ

   ಕಳೆದ 2020ರ ಜನವರಿ ತಿಂಗಳು ಹೊಸ ವರ್ಷಾಚರಣೆ ಮೂಡ್ ನಲ್ಲಿದ್ದ ಬಹುತೇಕ ವಿವಾಹಿತರು ಆನ್ ಲೈನ್ ಡೇಟಿಂಗ್ ಆಪ್ ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಆಪ್ ಗೆ ನೋಂದಣಿ ಮಾಡಿಕೊಂಡವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಜನವರಿ ಮೊದಲ ವಾರದಲ್ಲೇ ಅತಿಹೆಚ್ಚು ಚಂದಾದಾರರು ಈ ಆಪ್ ನಲ್ಲಿ ನೇಮ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ.

   ಈ ನಗರದ ಪುರುಷರೇ ಡೇಟಿಂಗ್ ಆಪ್ ಬಳಸುವುದು

   ಈ ನಗರದ ಪುರುಷರೇ ಡೇಟಿಂಗ್ ಆಪ್ ಬಳಸುವುದು

   ಆನ್ ಲೈನ್ ಡೇಟಿಂಗ್ ಆಪ್ ಬಳಸುವವರಲ್ಲಿ ಬೆಂಗಳೂರಿನ ಪುರುಷರೇ ಅತಿಹೆಚ್ಚು ಎಂದು ತಿಳಿದು ಬಂದಿದೆ. ಇನ್ನು, ಮುಂಬೈ, ಕೋಲ್ಕತ್ತಾ, ನವದೆಹಲಿ, ಪುಣೆ, ಹೈದ್ರಾಬಾದ್, ಚೆನ್ನೈ, ಗುರಗಾವ್, ಅಹ್ಮದಾಬಾದ್, ಜೈಪುರ್, ಚಂಡೀಘರ್, ಲಕ್ನೋ, ಕೊಚ್ಚಿ, ನೋಯ್ಡಾ, ವಿಶಾಖಪಟ್ಟಣಂ, ನಾಗ್ಪುರ್, ಸೂರತ್, ಇಂದೋರ್ ಮತ್ತು ಭುವನೇಶ್ವರ್ ದ ಪುರುಷರು ಡೇಟಿಂಗ್ ಆಪ್ ನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ತಿಳಿದು ಬಂದಿದೆ.

   ಮಹಿಳೆಯರೂ ಕೂಡಾ ಡೇಟಿಂಗ್ ಆಪ್ ಬಳಸುವುದರಲ್ಲಿ ಎತ್ತಿದ ಕೈ

   ಮಹಿಳೆಯರೂ ಕೂಡಾ ಡೇಟಿಂಗ್ ಆಪ್ ಬಳಸುವುದರಲ್ಲಿ ಎತ್ತಿದ ಕೈ

   ಬೆಂಗಳೂರಿನಲ್ಲಿ ಪುರುಷರಷ್ಟೇ ಅಲ್ಲ, ಮಹಿಳೆಯರೂ ಕೂಡಾ ಡೇಟಿಂಗ್ ಆಪ್ ನ್ನು ಅತಿಹೆಚ್ಚಾಗಿ ಬಳಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರನ್ನು ಹೊರತುಪಡಿಸಿದಂತೆ ಮುಂಬೈ, ನವದೆಹಲಿ, ಕೋಲ್ಕತ್ತಾ, ಪುಣೆ, ಹೈದ್ರಾಬಾದ್, ಚೆನ್ನೈ, ಗುರಗಾವ್, ಚಂಢೀಘರ್, ಅಹ್ಮದಾಬಾದ್, ಜೈಪುರ್, ಕೊಚ್ಚಿ, ನೋಯ್ಡಾ, ಲಕ್ನೋ, ಇಂದೋರ್, ಸೂರತ್, ಗುವಾಹಟಿ, ನಾಗ್ಪುರ್, ಭೂಪಾಲ್ ನ ಮಹಿಳೆಯರೇ ಅತಿಹೆಚ್ಚು ಎಂದು ತಿಳಿದು ಬಂದಿದೆ.

   ಜನವರಿ ಮೊದಲ ವಾರದಲ್ಲೇ ಶೇ.300ರಷ್ಟು ನೋಂದಣಿ

   ಜನವರಿ ಮೊದಲ ವಾರದಲ್ಲೇ ಶೇ.300ರಷ್ಟು ನೋಂದಣಿ

   2020ರ ಜನವರಿ ಮೊದಲ ವಾರದಲ್ಲಿ ಅತಿಹೆಚ್ಚು ಜನರು ಈ ಡೇಟಿಂಗ್ ಆಪ್ ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ ಎರಡು ಮತ್ತು ಮೂರನೇ ವಾರಕ್ಕೆ ಹೋಲಿಸಿದರೆ ಮೊದಲ ವಾರದಲ್ಲೇ ಶೇ.300ರಷ್ಟು ಜನರು ಈ ಆಪ್ ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

   English summary
   8 Lakh People Registered Those Names In Online Dating App For Extra-Marital Relationship.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X