ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 8 ಹೆಲಿಪ್ಯಾಡ್ ನಿರ್ಮಿಸಲಿದೆ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ನವೆಂಬರ್ 13 : ಉದ್ಯಾನ ನಗರಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಗಣ್ಯರಿಗೆ ಮತ್ತು ರೋಗಿಗಳಿಗೆ ಸಹಾಯಕವಾಗಲು ನಗರದಲ್ಲಿ 8 ಹೆಲಿಪ್ಯಾಡ್ ನಿರ್ಮಾಣ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಕಮರ್ಷಿಯಲ್ ಸ್ಟ್ರೀಟ್‌ನಲ್ಲೂ ಮಹಿಳೆಯರಿಗೆ ಪಾರ್ಕಿಂಗ್ ಮೀಸಲಾತಿಕಮರ್ಷಿಯಲ್ ಸ್ಟ್ರೀಟ್‌ನಲ್ಲೂ ಮಹಿಳೆಯರಿಗೆ ಪಾರ್ಕಿಂಗ್ ಮೀಸಲಾತಿ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಮೇಯರ್‌ಗಳ ಜೊತೆ ಸಭೆ ನಡೆಸಿದ ಮೇಯರ್ ಸಂಪತ್ ರಾಜ್, ನಗರದ 8 ದಿಕ್ಕುಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

8 helipads planned in Bengaluru city

'ನಗರದ 8 ದಿಕ್ಕಿನಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಸಂಬಂಧ ಮುಂದಿನ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಈ ಹೆಲಿಪ್ಯಾಡ್‌ಗಳಿಗೆ ಪಾಲಿಕೆಯ ಮಾಜಿ ಮೇಯರ್‌ಗಳ ಹೆಸರನ್ನು ಇಡಲಾಗುತ್ತದೆ' ಎಂದು ಹೇಳಿದ್ದಾರೆ.

ಶ್ರವಣಬೆಳಗೊಳದಲ್ಲಿ ಹೆಲಿರೈಡ್ ಸೇವೆ ಆರಂಭ?ಶ್ರವಣಬೆಳಗೊಳದಲ್ಲಿ ಹೆಲಿರೈಡ್ ಸೇವೆ ಆರಂಭ?

'ಹೆಲಿಪ್ಯಾಡ್ ನಿರ್ಮಾಣ ಮಾಡಿದರೆ ಸಂಚಾರ ದಟ್ಟಣೆ ಉಂಟಾದರೆ ತುರ್ತು ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ. ನಗರಕ್ಕೆ ಭೇಟಿ ನೀಡುವ ಗಣ್ಯರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಗಣ್ಯರ ವಾಹನಗಳಿಂದ ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕುವುದು ತಪ್ಪಲಿದೆ' ಎಂದು ಮೇಯರ್ ಹೇಳಿದರು.

ಸುರೇಶ್ ಕುಮಾರ್ ಪ್ರಶ್ನೆ : ಬಿಬಿಎಂಪಿ ನಿರ್ಮಿಸುವ ಹೆಲಿಪ್ಯಾಡ್‌ಗಳಿಗೆ 8 ಮೇಯರ್ ಹೆಸರಿಡುವ ಹೇಳಿಕೆಗೆ ಮಾಜಿ ಸಚಿವ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರವರು 8 ಮಾನ್ಯರು? ಎಂದು ಫೇಸ್‌ ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

English summary
BBMP mayor R.Sampath Raj said said palike have proposal to built eight helipads in Bengaluru city to rescue all those patients trapped in ambulances stuck in the city traffic jams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X