ಕರ್ನಾಟಕದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ 60 ಹೊಸ ಲ್ಯಾಬ್!
ಬೆಂಗಳೂರು, ಮೇ.05: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಕರ್ನಾಟಕದಲ್ಲೂ ದಿನೇ ದಿನೆ ಏರಿಕೆಯಾಗುತ್ತಿದೆ. ಕೆಮ್ಮು, ಶೀತ, ಜ್ವರ, ಉಸಿರಾಟ ಸಮಸ್ಯೆ, ಎದೆನೋವು, ತಲೆನೋವು ಹೀಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೊನಾ ವೈರಸ್ ಅಂಟಿಕೊಂಡಿರುವ ಪ್ರಕರಣಗಳು ಹೆಚ್ಚುತ್ತಿವೆ.
ಕೊರೋನಾ ಪರೀಕ್ಷಾ ಲ್ಯಾಬ್ ಸೇರಿದಂತೆ ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಲಾಗುತ್ತಿದೆ. ಈಗ ರಾಜ್ಯದಲ್ಲಿ 29 ಲ್ಯಾಬ್ ಗಳು ಕಾರ್ಯನಿರತವಾಗಿವೆ. ಎಲ್ಲಾ ಖಾಸಗಿ ವೈದ್ಯಕೀಯ, ESIS ವೈದ್ಯಕೀಯ ಕಾಲೇಜುಗಳಲ್ಲಿ #COVID19 ಪರೀಕ್ಷೆಗೆ RT-PCR ಲ್ಯಾಬ್ ಸ್ಥಾಪಿಸಲು ಆದೇಶಿಸಲಾಗಿದ್ದು, 1 ತಿಂಗಳಲ್ಲಿ 60 ಲ್ಯಾಬ್ ಸ್ಥಾಪಿಸುವ ಗುರಿ ಹೊಂದಲಾಗಿದೆ. pic.twitter.com/aB5ZCpudeF
— Dr Sudhakar K (@mla_sudhakar) May 5, 2020
Recommended Video
ರಾಜ್ಯದ 29 ಪ್ರಯೋಗಾಲಯಗಳಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಶರವೇಗದಲ್ಲಿ ಬೆಳೆಯುತ್ತಿರುವ ಸೋಂಕಿತರ ಪರೀಕ್ಷೆಗೆ ಮತ್ತಷ್ಟು ಲ್ಯಾಬ್ ಗಳ ಅವಶ್ಯಕತೆಯಿದೆ.
ಕರ್ನಾಟಕದಲ್ಲಿ ಲ್ಯಾಬ್ ಗಳ ಕೊರತೆ ಮನಗಂಡು ರಾಜ್ಯ ಸರ್ಕಾರವು ಹೊಸದಾಗಿ 60 ವೈದ್ಯಕೀಯ ಪ್ರಯೋಗಾಲಯಗಳನ್ನು ತೆರೆಯಲು ತೀರ್ಮಾನಿಸಿದೆ. ಇದರ ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

RT-PCR ಲ್ಯಾಬ್ ಗಳನ್ನು ತೆರೆಯಲು ಆದೇಶ:
ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಗೆ 29 ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಖಾಸಗಿ ವೈದ್ಯಕೀಯ, ESIS ವೈದ್ಯಕೀಯ ಕಾಲೇಜುಗಳಲ್ಲಿ ಕೊವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಕೊರೊನಾ ಪರೀಕ್ಷೆಗೆ RT-PCR ಲ್ಯಾಬ್ ಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಮುಂದಿನ ಒಂದೇ ತಿಂಗಳಿನಲ್ಲಿ ರಾಜ್ಯದಲ್ಲಿ ಒಟ್ಟು 60 ಹೊಸ ಲ್ಯಾಬ್ ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications