ಮನೆಗೆ ಜಿರಳೆ, ತಿಗಣೆ ಮದ್ದು: ವಾಸನೆಗೆ ಕಂದಮ್ಮ ಬಲಿ!
ಬೆಂಗಳೂರು, ಆಗಸ್ಟ್02: ಮನೆಯಲ್ಲಿ ಪುಟ್ಟ ಮಕ್ಕಳಿದ್ದರೇ ಬಹಳ ಎಚ್ಚರದಿಂದ ಇರಬೇಕು. ಮಕ್ಕಳು ಬಹಳ ಸೂಕ್ಷ್ಮವಾಗಿರುತ್ತಾರೆ. ಹೆತ್ತವರು ಮಾಡಿದ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿಯಾಗಿರುವ ಘಟನೆ ಬೆಂಗಳೂರಿನ ವಸಂತನಗರದಲ್ಲಿ ನಡೆದಿದೆ. ಮನೆಯಲ್ಲಿ ಜಿರಳೆ ಮತ್ತು ತಿಗಣೆ ಔಷಧ ಹೊಡೆದಿದ್ದು ಪುಟ್ಟ ಕಂದಮ್ಮನ ಉಸಿರಾಟದಲ್ಲಿ ವ್ಯತ್ಯಾಸವಾಗಿದೆ. ಮಗುವಿನ ಉಸಿರಾಟದಲ್ಲಿ ತೀವ್ರ ವ್ಯತ್ಯಾಸ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ಸೇರಿಸಿದರಾದರೂ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿದೆ.
ಆ ಪುಟ್ಟ ಬಾಲಕಿಗೆ ಇನ್ನೂ ಅದೆಷ್ಟು ಕನಸುಗಳಿದ್ದವೋ. ಆದರೆ ಹೆತ್ತವರ ಆ ಸಣ್ಣ ನಿರ್ಲಕ್ಷ್ಯಕ್ಕೆ ಆ ಪುಟ್ಟ ಜೀವ ಇನ್ನೆಂದು ಬಾರದ ಲೋಕಕ್ಕೆ ಹೋಗಿ ಬಿಟ್ಟಿದೆ. ಮೊನ್ನೆ ಮೊನ್ನೆವರೆಗೂ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಗೆ ಹೋಗುತ್ತಿದ್ದ ಆ ಬಾಲಕಿ ಇಂದು ಮಸಣದ ಹಾದಿಯಲಿ ಇನ್ನೆಂದು ಕಾಣದಂತೆ ಮಾಯವಾಗಿದೆ.
ಜಿರಳೆ ಮದ್ದಿನ ಎಫೆಕ್ಟ್ ಗೆ ಪುಟ್ಟ ಬಾಲಕಿ ಬಲಿ!
ಪುಟ್ಟ ಕಂದಮ್ಮನ ಹೆಸರು ಅಹಾನಾ. ವಯಸ್ಸು ಕೇವಲ ಆರು ವರ್ಷ. ಮುದ್ದು ಮುದ್ದಾಗಿರುವ ಈ ಪುಟ್ಟ ಪೋರಿ ಇನ್ನು ನೆನಪು ಮಾತ್ರ. ಮೊನ್ನೆ ಮೊನ್ನೆಯವರೆಗೂ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಶಾಲೆಗೆ ಹೋಗುತ್ತಿದ್ದ ಈ ಪೋರಿ ಇಂದು ಮಸಣದ ಹಾದಿಯಲ್ಲಿ ಕಾಣದಂತೆ ಮಾಯವಾಗಿದೆ. ಹೌದು ಮನೆಗೆ ಸಿಂಪಡಿಸಿದ್ದ ಜಿರಳೆ ಔಷಧಿ ಎಫೆಕ್ಟ್ ನಿಂದ ಅಹಾನ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ.

ಹೆತ್ತವರ ನಿರ್ಲಕ್ಷಕ್ಕೆ ಹೆಣವಾದ ಅಮಾಯಕ ಕಂದಮ್ಮ!
ಕೇರಳ ಮೂಲದ ವಿನೋದ್ ನಾಯರ್ ದಂಪತಿ ಎಂಬುವರ ಮಗಳು ಅಹಾನಾ ಜೊತೆ ವಸಂತನಗರದ ಪ್ರಸಾದ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದಾರೆ. ಮನೆಯಲ್ಲಿ ಜಿರಳೆ ಹಾಗೂ ತಿಗಣೆ ಕಾಟ ಜಾಸ್ತಿ ಆದ್ದರಿಂದ ಒಂದು ವಾರ ಊರಿಗೆ ಹೋಗಿ ಬನ್ನಿ ಮನೆಗೆ ಔಷಧಿ ಹೊಡೆಸ್ತಿನಿ ಅಂತ ಮಾಲೀಕ ತಿಳಿಸಿದ್ದಾರೆ. ಆದರಂತೆ ವಿನೋದ್ ಹೆಂಡತಿ ಮಗಳ ಜೊತೆ ಊರಿಗೆ ಹೋಗಿದ್ದಾರೆ. ಮಾಲೀಕ ಮನೆಗೆಲ್ಲ ಜಿರಳೆ ಔಷಧಿ ಹೊಡೆಸಿ ಬಾಗಿಲು ಬಂದ್ ಮಾಡಿದ್ದಾನೆ. ಆದರೆ, ಎಂಟು ದಿನಕ್ಕೆ ವಾಪಸ್ಸು ಬರುತ್ತೇವೆ ಅಂತ ಹೋದ ವಿನೋದ್ ಹಾಗೂ ಕುಟುಂಬ ನಾಲ್ಕು ದಿನಕ್ಕೆ ಮನೆ ಮಾಲೀಕನಿಗೆ ತಿಳಿಸದೆ ಮನೆಗೆ ಬಂದಿದ್ದಾರೆ. ಈ ವೇಳೆ ಮನೆ ಒಳಗೆ ಹೋಗಿರುವ ಕುಟುಂಬ ಬಾಗಿಲು ಹಾಗೂ ಕಿಟಕಿಗಳನ್ನ ಬಂದ್ ಮಾಡಿಕೊಂಡಿದ್ದಾರೆ. ಇದರಿಂದ ಬಾಲಕಿ ಅಹಾನಾ ಉಸಿರಾಟ ತೊಂದರೆಗೆ ಸಿಲುಕಿದ್ದಾಳೆ. ಕೂಡಲೇ ಬಾಲಕಿಯನ್ನ ಆಸ್ಪತ್ರೆಗೆ ಸಾಗಿಸಿದರು ಬದುಕುಳಿದಿಲ್ಲ. ಅಲ್ಲದೆ ವಿನೋದ್ ಹಾಗೂ ಪತ್ನಿ ಕೂಡ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.

ಈ ದುರ್ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇನ್ನೂ ಬಾಳಿ ಬದುಕಬೇಕಾದ ಆ ಪುಟ್ಟ ಕಂದ ಇಷ್ಟು












Click it and Unblock the Notifications