ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 6 ಕೋಚ್ ರೈಲು; ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 02 : ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುವ ಜನರಿಗೆ ಸಿಹಿ ಸುದ್ದಿ. ಹಸಿರು ಮಾರ್ಗದಲ್ಲಿ ಸೋಮವಾರದಿಂದ 6 ಬೋಗಿಗಳ ರೈಲು ಸಂಚಾರ ಆರಂಭವಾಗಿದೆ.

ನಾಗಸಂದ್ರ-ಯಲಚೇನಹಳ್ಳಿ ನಡುವಿನ ಹಸಿರು ಮಾರ್ಗದಲ್ಲಿ ಡಿಸೆಂಬರ್ 2ರಿಂದ 6 ಬೋಗಿಗಳ ರೈಲುಗಳು ಸಂಚಾರ ನಡೆಸಲಿವೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳು ಆರು ಬೋಗಿಗಳ ರೈಲು ಸಂಚಾರ ನಡೆಲಿದೆ.

ನೇರಳೆ ಮಾರ್ಗದಲ್ಲಿ 6 ಬೋಗಿಗಳ ರೈಲು ಸಂಚಾರ ನಡೆಸುತ್ತಿತ್ತು. ಈಗ ಬಿಎಂಆರ್ ಹಸಿರು ಮಾರ್ಗದಲ್ಲಿಯೂ ಆರು ಬೋಗಿಗಳ ಸಂಚಾರವನ್ನು ಆರಂಭಿಸಿದೆ. ಒಟ್ಟು 53 ಸುತ್ತುಗಳ ಕಾಲ ಆರು ಬೋಗಿಯ ರೈಲು ಸಂಚಾರ ನಡೆಸಲಿದೆ.

6 Coach Namma Metro Train In Green Line Timings

ನಾಗಸಂದ್ರ-ಪೀಣ್ಯ-ಯಲಚೇನಹಳ್ಳಿ: ಬೆಳಗ್ಗೆ 7.50, 8.13, 8.23, 8.50, 9.19, 9.24, 9.52, 10, 10.28 ಮತ್ತು 10.34ಕ್ಕೆ ಹೊರಡಲಿದೆ. ಸಂಜೆ 4.05, 4.40, 4.50, 5.41, 5.46, 5.51, 5.56, 6.30, 6.36, 6.41, 6.46, 7.30, 7.35, 7.40, 8.21, 5.28ಕ್ಕೆ ಸಂಚರಿಸಲಿದೆ.

ಯೆಲಚೇನಹಳ್ಳಿ-ನಾಗಸಂದ್ರ : 8.31, 8.36, 8.41, 9.03, 9.08, 9.14, 9.40, 9.45, 10.11, 10.16 ಬೆಳಗ್ಗೆ ಸಂಚಾರ ನಡೆಸಲಿವೆ. ಸಂಜೆ 3.53, 4.48, 4.53, 4.58, 5.03, 5.36, 5.41, 5.46, 5.52, 6.36, 6.41, 6.46, 6.51, 7.27, 7.32, 7.37, 7.42, 8.21, 8.29, 8.37 ಸಂಚಾರ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+