ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುನಿವರ್ಸಲ್‍ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್‌ನ ಸುಷ್ಮಾಗೆ 4 ಚಿನ್ನದ ಪದಕ

|
Google Oneindia Kannada News

ಬೆಂಗಳೂರು, ಡಿ. 05: ಬೆಂಗಳೂರು ವಿಶ್ವವಿದ್ಯಾಲಯದ 57ನೇ ವಾರ್ಷಿಕ ಘಟಿಕೋತ್ಸವದಲ್ಲಿ ಬಿ.ಎ. ಪದವಿಯಲ್ಲಿ ನಗರದ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್‍ನ ಸುಷ್ಮಾ ಎಚ್.ದೊಡ್ಡಬಿಲ್ಲಾ ಅವರು ನಾಲ್ಕು ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರ ಸಹಿತ 6 ಪದಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ಇದೇ ಸಂಸ್ಥೆಯ ಒಟ್ಟು 9 ವಿದ್ಯಾರ್ಥಿಗಳು ಟಾಪ್‌ 10 ರ‍್ಯಾಂಕ್‌ಗಳ ಪೈಕಿ ವಿವಿಧ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.

Bengaluru Traffic : ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿಸ್ತೃತ ವರದಿBengaluru Traffic : ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿಸ್ತೃತ ವರದಿ

ವಿಷ್ಣುಶಿವ 2ನೇ ರ್‍ಯಾಂಕ್‌, ಮೇಘಾ ಚೌಧರಿ 3ನೇ ರ‍್ಯಾಂಕ್, ಅನೀಸ್ ಫಾತಿಮಾ 4ನೇ ರ‍್ಯಾಂಕ್‌, ಮಹಾಂಕಾಳಿ ವೆಂಕಟ್ ಸ್ವಸ್ತಿಕಾ 6ನೇ ರ‍್ಯಾಂಕ್‌, ಧರ್ಮಶ್ರೀ ಶೆಟ್ಟಿ 7ನೇ ರ‍್ಯಾಂಕ್‌, ಮಾರೇಗೌಡ ಪಲ್ಗುಣ 8ನೇ ರ‍್ಯಾಂಕ್‌ ಹಾಗೂ ಕಾವೇರಿ ಮತ್ತು ಅಭಿಲಾಷ್ ಜಿ.ಆರ್‌. ಅವರು ತಲಾ 10ನೇ ರ‍್ಯಾಂಕ್‌ ಗಳಿಸಿ ಕಿರುನಗೆ ಬೀರಿದ್ದಾರೆ.

 57th Annual Convocation of Bengaluru University

*ಯುಪಿಎಸ್‍ಸಿಗೆ ತಯಾರಿ*

ರಾಣೆಬೆನ್ನೂರಿನ ಸುಷ್ಮಾ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‍ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಈಗಾಗಲೇ ಯುನಿವರ್ಸಲ್ ಕೋಚಿಂಗ್ ಸೆಂಟರ್‌ನಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ. ಇದಕ್ಕೆ ಬುನಾದಿಯಾಗಿ ಅವರು ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಬಿ.ಎ.ವ್ಯಾಸಂಗ ಮಾಡಿದ್ದರು.

"ನನ್ನ ಅಪ್ಪ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರು, ತಾಯಿ ಗೃಹಿಣಿ. ಯುಪಿಎಸ್‍ಸಿ ಪರೀಕ್ಷೆಯ ಸಲುವಾಗಿಯೇ ಯುನಿವರ್ಸಲ್ ಸ್ಕೂಲ್‌ಗೆ ದಾಖಲಾದೆ. ಇಲ್ಲಿನ ಮಾರ್ಗದರ್ಶನ ಅತ್ಯುತ್ತಮವಾಗಿದ್ದುದಕ್ಕೇ ಮೊದಲ ರ‍್ಯಾಂಕ್‌ ಗಳಿಸುವುದು ಸಾಧ್ಯವಾಯಿತು. ಯುಪಿಎಸ್‍ಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸು ಇಟ್ಟುಕೊಂಡಿದ್ದೇನೆ' ಎಂದು ಸುಷ್ಮಾ ಹೇಳಿದ್ದಾರೆ.

ಬೆಂಗಳೂರಿನ ಕೆಂಗೇರಿ ಬಳಿಯಿರುವ ಕೋಲೂರಿನ ಯುನಿವರ್ಸಲ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಟೂಟ್‌ನ ಯುನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್‌ ಬಿ.ಎ. ಬಿ.ಕಾಂ. ಜತೆಯಲ್ಲಿ ಐಎಎಸ್‌, ಕೆಎಎಸ್‌ಗೆ ತರಬೇತಿ ನೀಡುವ ಇಂಟಿಗ್ರೇಟೆಡ್‌ ಕೋಚಿಂಗ್‌ ನೀಡುವ ಸಂಸ್ಥೆಯಾಗಿದೆ.

English summary
Bengaluru University Convocation: 4 Gold medals for Sushma who is studying in Universal School of Administration. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X