ಯಲಹಂಕ ವಾಯುನೆಲೆಯಿಂದ ಗ್ವಾಲಿಯರ್‌ಗೆ 53 ಏರ್‌ಜೆಟ್‌ಗಳ ರವಾನೆ
ಬೆಂಗಳೂರು, ಫೆಬ್ರವರಿ 27: ಯಲಹಂಕದ ವಾಯುನೆಲೆಯಿಂದ 53 ಏರ್‌ಜೆಟ್‌ಗಳು ಗ್ವಾಲಿಯರ್ ಏರ್‌ಫೋರ್ಸ್ ಸ್ಟೇಷನ್‌ಗೆ ರವಾನೆಯಾಗುತ್ತಿದೆ.
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ನಮ್ಮ ಮೆಟ್ರೋ ಸೇರಿದಂತೆ ಅತಿ ಹೆಚ್ಚು ಜನರು ಓಡಾಡುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಭಾರತದ ಓರ್ವ ಪೈಲಟ್ನನ್ನು ಬಂಧಿಸಿದ್ದೇವೆ ಎಂದು ಸುಳ್ಳು ಹೇಳಿತೇ ಪಾಕ್?
ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ವಿಚಾರಣೆ ನಡೆಸಲಾಗುತ್ತದೆ. ಇನ್ನು ಭಾರತದಿಂದ ಪಾಕಿಸ್ತಾನಕ್ಕೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಹಲವು ವಿಮಾನ ನಿಲ್ದಾಣಗಳಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ವೈಮಾನಿಕ ದಾಳಿ ಭೀತಿ, ಪಾಕಿಸ್ತಾನದ ವಿ. ನಿಲ್ದಾಣಗಳು ಬಂದ್
ಭಾರತದ ಮೇಲೆ ಬಾಂಬ್ ದಾಳಿ ಮಾಡಿದ್ದ ಪಾಕಿಸ್ತಾನ ವಿಮಾನವೊಂದನ್ನು ಹೊಡೆದುರುಳಿಸಿದ್ದು, ಪೈಲಟರ್ ಪರಾರಿಯಾಗಿದ್ದಾನೆ, ಆತನ ಹುಡುಕಾಟ ನಡೆಯುತ್ತಿದೆ.