ಬಿಬಿಎಂಪಿ ವ್ಯಾಪ್ತಿ ಮಹಿಳೆಯರಿಗಾಗಿ 50 ಆಯುಷ್ಮತಿ ಚಿಕಿತ್ಸಾಲಯ ಪ್ರಾರಂಭ

ಬೆಂಗಳೂರು, ಮಾರ್ಚ್‌ 28: ಮಹಿಳೆಯರಿಗಾಗಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಆಯುಷ್ಮತಿ ಚಿಕಿತ್ಸಾಲಯಗಳನ್ನು ಎಲ್ಲಾ ಎಂಟು ಬಿಬಿಎಂಪಿ ವಲಯಗಳಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿ ಸಮಾಲೋಚನೆಗಾಗಿ ತಜ್ಞರು ಲಭ್ಯವಿರುತ್ತಾರೆ.

ಬಿಬಿಎಂಪಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾನುವಾರ ಹೊರತುಪಡಿಸಿ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ವಾರದಲ್ಲಿ ಒಂದು ದಿನದಲ್ಲಿ ಒಬ್ಬ ವೈದ್ಯ, ಮೂಳೆ ವೈದ್ಯರು, ಶಸ್ತ್ರಚಿಕಿತ್ಸಕ, ಶಿಶುವೈದ್ಯರು, ಸ್ತ್ರೀರೋಗತಜ್ಞರು ಅಥವಾ ಇಎನ್‌ಟಿ ತಜ್ಞರು/ನೇತ್ರ ತಜ್ಞರು/ಚರ್ಮ ತಜ್ಞರು ಲಭ್ಯವಿರುತ್ತಾರೆ. ಉದಾಹರಣೆಗೆ, ಒಂದು ಕ್ಲಿನಿಕ್‌ನಲ್ಲಿ ಮಂಗಳವಾರ ಶಸ್ತ್ರಚಿಕಿತ್ಸಕ ವೈದ್ಯರು ಮಹಿಳೆಯರಿಗಾಗಿ ಲಭ್ಯವಿರಬಹುದು.

50 Ayushmati Clinics launches for women under BBMP limits

ಚಿಕಿತ್ಸಾಲಯಗಳು ಉಚಿತ ಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧಿ, ಉಲ್ಲೇಖಿತ ಸೇವೆಗಳು ಮತ್ತು ಯೋಗ ಮತ್ತು ಧ್ಯಾನದಂತಹ ಕ್ಷೇಮ ಚಟುವಟಿಕೆಗಳನ್ನು ನೀಡುತ್ತವೆ. ಆಯುಷ್ಮತಿ ಚಿಕಿತ್ಸಾಲಯಗಳು ಹೊಸ ಕಟ್ಟಡಗಳನ್ನು ಬಳಸುವ ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದು ಕೋಣೆಗೆ ಗುಲಾಬಿ ಬಣ್ಣ ಬಳಿದು ಅದನ್ನು ಮರುಬಳಕೆ ಮಾಡಲಾಗುತ್ತದೆ.

ಈ ಚಿಕಿತ್ಸಾಲಯಗಳು ಮಹಿಳಾ ರೋಗಿಗಳಿಗೆ ಗೌಪ್ಯತೆಯನ್ನು ಒದಗಿಸುತ್ತವೆ. ಅಲ್ಲದೆ ಮಕ್ಕಳಿಂದ ಹಿಡಿದು ಹಿರಿಯ ಮಹಿಳೆಯರಿಗೆ ವಿವಿಧ ವಯೋಮಾನದವರಿಗೆ ಎಲ್ಲಾ ಸೇವೆಗಳನ್ನು ಒದಗಿಸುತ್ತವೆ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಡಾ ಬಾಲಸುಂದರ್ ಹೇಳಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯು ನೀಡಿದ ಪಟ್ಟಿಯ ಪ್ರಕಾರ 50 ಕ್ಲಿನಿಕ್‌ಗಳಲ್ಲಿ 10 ಮಾತ್ರ ವಾರದ ಪ್ರತಿ ದಿನ ಒಬ್ಬ ವೈದ್ಯರನ್ನು ಹೊಂದಿರುತ್ತವೆ. ಇತರ ಕ್ಲಿನಿಕ್‌ಗಳು ವಾರದಲ್ಲಿ ನಾಲ್ಕೈದು ದಿನ ಮಾತ್ರ ವೈದ್ಯರನ್ನು ಹೊಂದಿರುತ್ತದೆ ಎಂದು ತಿಳಿಸಲಾಗಿದೆ.

ಪ್ರತಿ ಕ್ಲಿನಿಕ್‌ಗೆ ಕನಿಷ್ಠ ಮೂರರಿಂದ ನಾಲ್ಕು ವೈದ್ಯರು ಇರಬೇಕೆಂಬುದು ಮಾನದಂಡವಾಗಿದ್ದು, ಇನ್ನೂ 10 ದಿನಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಡಾ.ಬಾಲಸುಂದರ್ ಹೇಳಿದರು. ವಾರದ ವಿವಿಧ ದಿನಗಳಲ್ಲಿ ಹಲವಾರು ವೈದ್ಯರು ಅನೇಕ ಕ್ಲಿನಿಕ್‌ಗಳಲ್ಲಿ ಸೇವೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಪ್ರತಿ ರೋಗಿಗೆ ವೈದ್ಯರಿಗೆ 200 ರೂಪಾಯಿ ನೀಡಲಾಗುತ್ತಿದೆ.

50 Ayushmati Clinics launches for women under BBMP limits

ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಲಾಗಿದ್ದು, ಪ್ರತಿ ರೋಗಿಗೆ 200 ರೂಪಾಯಿಗಳ ಸಂಭಾವನೆ ನೀಡಲಾಗುತ್ತದೆ. ಅವರು ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡರಿಂದಲೂ ಕ್ಲಿನಿಕ್‌ಗೆ ಬರುತ್ತಾರೆ. ಪಿಎಚ್‌ಸಿಗಳು ವೈದ್ಯರ ಪಟ್ಟಿಯನ್ನು ಹೊರಗೆ ಪ್ರದರ್ಶಿಸಬೇಕು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಾ.ಬಾಲಸುಂದರ್ ತಿಳಿಸಿದರು.

ಮೂವತ್ತು ಕ್ಲಿನಿಕ್‌ಗಳು ಮೂರು ಪ್ರಮುಖ ಬಿಬಿಎಂಪಿ ವಲಯಗಳಲ್ಲಿ ದಕ್ಷಿಣದಲ್ಲಿ 11, ಪೂರ್ವದಲ್ಲಿ 10 ಮತ್ತು ಪಶ್ಚಿಮದಲ್ಲಿ 9 ಇದ್ದಾವೆ. ಮಹದೇವಪುರ ವಲಯದಲ್ಲಿ ಆರು, ಯಲಹಂಕದಲ್ಲಿ ಐದು, ಆರ್‌ಆರ್‌ನಗರ, ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿಯಲ್ಲಿ ತಲಾ ಮೂರು ತೆರೆಯಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಮೋದನೆಗೊಂಡಿರುವ ಇತರ ಏಳು ಆಯುಷ್ಮತಿ ಚಿಕಿತ್ಸಾಲಯಗಳು ಇನ್ನೊಂದು ವಾರದಲ್ಲಿ ತೆರೆಯಬಹುದು ಎಂದು ಡಾ ಬಾಲಸುಂದರ್ ಹೇಳಿದರು.

ಬೆಂಗಳೂರು ಮಾತ್ರವಲ್ಲದೆ ಮಂಗಳೂರಿನ ಪಡೀಲ್, ಬಿಜೈ, ಬಂದರ್ ಮತ್ತು ಸುರತ್ಕಲ್ ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಹಿಳೆಯರಿಗಾಗಿ ಮೀಸಲಾದ ಹೊಸ ಆಯುಷ್ಮತಿ ಚಿಕಿತ್ಸಾಲಯಗಳನ್ನು ಸೋಮವಾರ ಉದ್ಘಾಟಿಸಲಾಗಿದೆ. ಪಡೀಲ್ ಆರೋಗ್ಯ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೋರೇಟರ್ ರೂಪಶ್ರೀ ಪೂಜಾರಿ ಕ್ಲಿನಿಕ್ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಬಿಜೈ, ಬಂದರು ಮತ್ತು ಸುರತ್ಕಲ್‌ನಲ್ಲಿ ಕ್ಲಿನಿಕ್‌ಗಳನ್ನು ಸ್ಥಳೀಯವಾಗಿ ಪ್ರತಿನಿಧಿಗಳು ಉದ್ಘಾಟಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+