ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನದ ಗಣಿಯಿಂದ ಕೋವಿಡ್ ಪರಿಹಾರ ನಿಧಿಗೆ 15 ಕೋಟಿ ರೂಪಾಯಿ

|
Google Oneindia Kannada News

ಬೆಂಗಳೂರು, ಎಪ್ರಿಲ್ 24: ಮುಖ್ಯಮಂತ್ರಿಗಳ ಕೋವಿಡ್-19 ರ ಪರಿಹಾರ ನಿಧಿಗೆ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಟ್ಟಿ ಚಿನ್ನದ ಗಣಿ ಕಂಪೆನಿ 5 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಇಂದು ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಹಟ್ಟಿ ಚಿನ್ನದ ಗಣಿ ಕಂಪನಿ ಚೆಕ್‌ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.

ಕೋವಿಡ್-19: 50 ಲಕ್ಷ ರೂಪಾಯಿ ದೇಣಿಗೆ ನೀಡಿದ ಆದಿಚುಂಚನಗಿರಿ ಮಠಕೋವಿಡ್-19: 50 ಲಕ್ಷ ರೂಪಾಯಿ ದೇಣಿಗೆ ನೀಡಿದ ಆದಿಚುಂಚನಗಿರಿ ಮಠ

ಇದೇ ಸಂದರ್ಭದಲ್ಲಿ ಗಣಿ, ಭೂ ವಿಜ್ಞಾನ ಇಲಾಖೆಯ ಇನ್ನೊಂದು ಸಂಸ್ಥೆ, ಮೈಸೂರು ಮಿನರಲ್ಸ್ ಸಂಸ್ಥೆಯ ಪರವಾಗಿ 10 ಕೋಟಿ ರೂ. ಮೊತ್ತ ದ ಚೆಕ್‌ನ್ನು ಸಚಿವ ಸಿ.ಸಿ.ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ಕೋವಿಡ್ -19 ಪರಿಹಾರ ನಿಧಿಗೆ ಹಸ್ತಾಂತರಿಸಿದರು. ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕರಾದ ಸಲ್ಮಾ ಹಾಗೂ ಮಹೇಶ್ವರಾವ್ ಇದ್ದರು.

5 Crore Rupees Donation For CM Corona Relief Fund By Hatti Gold Mines

ಕರ್ನಾಟಕದಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುತ್ತಲೆ ಸಾಗುತ್ತಿದೆ. ಮತ್ತೆ ಇಂದು 18 ಹೊಸ ಪ್ರಕರಣಗಳು ದಾಖಲಾಗಿವೆ. ಸರ್ಕಾರ ಸೋಂಕು ಹರುವುದನ್ನು ತಡೆಗಟ್ಟಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

English summary
5 Crore Rupees Donation For CM Corona Relief Fund By Hatti Gold Mines. amount received by cm yediyurappa at vidhana soudha on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X