• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಗಿಗುಡ್ಡದಲ್ಲಿ 46ನೇ ಹನುಮಜ್ಜಯಂತಿ ಉತ್ಸವ ಆರಂಭ

|

ಬೆಂಗಳೂರಿನ ಜಯನಗರದ 9ನೇ ಬಡಾವಣೆಯಲ್ಲಿರುವ ಪ್ರಸಿದ್ದ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ 46ನೇ ಹನುಮಜ್ಜಯಂತಿ ಉತ್ಸವ ಬುಧವಾರ (ನ 26) ಆರಂಭಗೊಂಡಿದೆ.

ಬುಧವಾರ 26.11.2014 ರಿಂದ ಭಾನುವಾರ 07.12.2014ರ ವರೆಗಿನ ಹನ್ನೆರಡು ದಿನಗಳ ವೈಭವದ ಉತ್ಸವ, ಏಕಾದಶವಾರ ರುದ್ರಾಭಿಷೇಕ, ಅಷ್ಟದ್ರವ್ಯ ನಾಳೀಕೇರ ಮಹಾಗಣಪತಿ ಹೋಮದ ಮೂಲಕ ಆರಂಭಗೊಂಡಿದೆ. (ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ)

ಬುಧವಾರ (ನ 26) ಸಂಜೆ ಕಲಬುರಗಿ ಶ್ರೀಕಣ್ವ ಮಠದ ಪರಮಪೂಜ್ಯ ವಿದ್ಯಾಭಾಸ್ಕರತೀರ್ಥ ಸ್ವಾಮೀಜಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.

ವಿವಿಧ ದಿನಗಳಂದು ನಡೆಯುವ ವಿಶೇಷ ಪೂಜೆ, ಹೋಮ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಇಂತಿದೆ:

27.11.2014 : ಸುಬ್ರಮಣ್ಯ ಶಕ್ತಿಧರ ಹೋಮ, ಸಂಜೆ ಸೋಸಲೆ ಸುರೇಶ್ ಅವರಿಂದ ಹರಿಕಥೆ

28.11.2014 : ಮಹಾಲಕ್ಷ್ಮೀ ಮತ್ತು ಪುರುಷಸೂಕ್ತ ಹೋಮ, ಸಂಜೆ ಸಾಮೂಹಿಕ ಅಷ್ಟಲಕ್ಷ್ಮೀ ಪೂಜೆ

29.11.2014 : ನವಗ್ರಹ ಮತ್ತು ಮೃತ್ಯುಂಜಯ ಹೋಮ, ಸಂಜೆ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ನೃತ್ಯ ರೂಪಕ

30.11.2014 : ಚಂಡಿಕಾಹೋಮ, ಸಂಜೆ ಮ್ಯಾಂಡೋಲಿನ್ ಪ್ರಸಾದ್ ಮತ್ತು ಮುಂಬೈ ಕೃಷ್ಣಮೂರ್ತಿಯವರಿಂದ ಜುಗಲ್ ಬಂದಿ

01.12.2014 : ಸಾಮೂಹಿಕ ಪವಮಾನಹೋಮ, ಸಂಜೆ ಭೂಮಿಕಾ ಮಧುಸೂಧನ್ ಅವರಿಂದ ಸಂಗೀತ

02.12.2014 : ಸಾಮೂಹಿಕ ಲಲಿತಾ ಸಹಸ್ರನಾಮ ಹೋಮ, ಸಂಜೆ ದಿವ್ಯಾ ಗಿರಿಧರ್ ಅವರಿಂದ ಸಂಗೀತ

03.12.2014 : ಸಾಮೂಹಿಕ ಧನ್ವಂತರಿ ಹೋಮ, ಸಂಜೆ ರೂಪಾ ಶ್ರೀಧರ್ ಮತ್ತು ಡಾ. ಮಧುವಂತಿ ಮಂಡ್ಯಮ್ ಅವರಿಂದ ದೇವರ ನಾಮಗಳು

04.12.2014 : ಹನುಮಜ್ಜಯಂತಿ ಆಂಜನೇಯಸ್ವಾಮಿ ಲಕ್ಷಾರ್ಚನೆ, ಸಂಜೆ ಮೈಸೂರು ರಾಮಚಂದ್ರಾಚಾರ್ ಅವರಿಂದ ದಾಸರ ಪದಗಳು

05.12.2014 : ಸಾಮೂಹಿಕ ಚಂಡಿಕಾಹೋಮ, ಸಂಜೆ ಸಾಮೂಹಿಕ ಗಜಗೌರಿ ಪೂಜೆ (ಸಂಜೆ 4.30ಕ್ಕೆ)

06.12.2014 : ಸಾಮೂಹಿಕ ನವಗ್ರಹಹೋಮ, ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ (ಸಂಜೆ 4.30ಕ್ಕೆ)

07.12.2014 : ಶತರುದ್ರಾಭಿಷೇಕ ಮತ್ತು ಮಹಾನೀರಾಜನ, ಸಂಜೆ ಚೆನ್ನೈ ಶ್ರೀನಿವಾಸ್ ಮತ್ತು ತಂಡದವರಿಂದ ಕರ್ನಾಟಕ ಸಂಗೀತ

ಈ ಎಲ್ಲಾ ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ 12.15 ಗಂಟೆಯಿಂದ 1.30ರ ವರೆಗೆ ಎಲ್ಲಾ ಭಕ್ತರಿಗೂ ಮಹಾಪ್ರಸಾದದ (ಅನ್ನಸಂತರ್ಪಣೆ) ವ್ಯವಸ್ಥೆ ಮಾಡಲಾಗಿದೆ ಎಂದು ರಾಗಿಗುಡ್ಡದ ಭಕ್ತಮಂಡಳಿ ಟ್ರಸ್ಟ್ ತಿಳಿಸಿದೆ. (ಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ)

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ರಾಗಿಗುಡ್ಡಶ್ರೀಪ್ರಸನ್ನ ಅಂಜನೇಯಸ್ವಾಮಿ ದೇವಸ್ಥಾನ,

9 ನೇ ಬ್ಲಾಕ್, ಜಯನಗರ,

ಬೆಂಗಳೂರು -560 069

ದೂರವಾಣಿ: (080)2658 0500, 2659 4255

ಇಮೇಲ್ : ragiguddavk2009@gmail.com

ವೆಬ್ : www.ragigudda.org

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
46th Hanumajjayanthi Festival 2014 in Ragigudda Anjaneya Swamy Temple, Jayanagar 9th Block, Bengaluru started from Nov 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more