• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿಂದು 416 ಮಂದಿಗೆ ಕೊರೊನಾ ವೈರಸ್ ಕೇಸ್ ಪತ್ತೆ

|

ಬೆಂಗಳೂರು, ಜೂನ್ 20: ಕರ್ನಾಟಕದಲ್ಲಿ ಇಂದು 416 ಜನರಿಗೆ ಕೊರೊನಾ ವೈರಸ್ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ.

   ಭಾರತೀಯ ಸೇನೆ ಸೇರಿಕೊಳ್ಳಲು ಮುಂದಾದ ನಾಗಸಾಧುಗಳು | NagaSadhus | Oneindia Kannada

   ಇಂದು ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 94 ಕೇಸ್ ಪತ್ತೆಯಾಗಿದೆ. ಬೀದರ್‌ನಲ್ಲಿ 73 ಜನರಿಗೆ ಮಹಾಮಾರಿ ವಕ್ಕರಿಸಿದೆ. ರಾಮನಗರದಲ್ಲಿ 38 ಹಾಗೂ ಬಳ್ಳಾರಿಯಲ್ಲಿ 38 ಮಂದಿಗೆ ಕೊವಿಡ್ ತಗುಲಿದೆ.

   ಕಲಬುರಗಿಯಲ್ಲಿ 34 ಕೇಸ್, ಮೈಸೂರಿನಲ್ಲಿ 22 ಕೇಸ್, ಹಾಸನದಲ್ಲಿ 16 ಕೇಸ್, ರಾಯಚೂರಿನಲ್ಲಿ 15 ಕೇಸ್, ಉಡುಪಿಯಲ್ಲಿ 13 ಕೇಸ್, ಹಾವೇರಿಯಲ್ಲಿ 12 ಕೇಸ್, ವಿಜಯಪುರದಲ್ಲಿ 9 ಕೇಸ್, ಚಿಕ್ಕಮಗಳೂರಿನಲ್ಲಿ 8 ಕೇಸ್, ಧಾರವಾಡ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 5 ಕೇಸ್, ದಕ್ಷಿಣ ಕನ್ನಡ, ಮಂಡ್ಯ, ಉತ್ತರ ಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4 ಪ್ರಕರಣ ವರದಿಯಾಗಿದೆ.

   Breaking: ಭಾರತದಲ್ಲಿ ಮತ್ತೆ 14,516 ಕೊರೊನಾ ಸೋಂಕಿತರು ಪತ್ತೆ

   ಇದುವರೆಗೂ 5391 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 3170 ಜನರು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

   ಇಂದು ಒಂದೇ ದಿನ ಒಂಬತ್ತು ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 132 ಜನರು ಕೊವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.

   English summary
   Karnataka reports 416 news covid 19 cases today. tally rises to 8697 in the state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X