ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಅಗ್ನಿ ಅವಘಡಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಬೇಸಿಗೆಯಲ್ಲಿ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚಾಗುವುದು ಸಾಮಾನ್ಯ. ಇದಕ್ಕಾಗಿ ರಾಜ್ಯ ಸರ್ಕಾರ ಅಗ್ನಿಶಾಮಕ ದಳದ ಬಲವನ್ನು ಇತ್ತೀಚೆಗೆ ಹೆಚ್ಚಿಸಿದೆ. ಅಗ್ನಿಶಾಮಕ ದಳ ಅಗ್ನಿ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪರಿಪಾಲಿಸುವಂತೆ ಆಗಾಗ ಜಾಗೃತಿ ಮೂಡಿಸುತ್ತಿರುತ್ತದೆ.

ಬೆಂಗಳೂರಿನಲ್ಲಿ ಕೂಡ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಆದೇಶವಿದೆ. ಬೆಸ್ಕಾಂ ಕೂಡ ನಾಗರಿಕರಿಗೆ ಅಗ್ನಿ ಸುರಕ್ಷತಾ ಕ್ರಮಗಳು ಹಾಗೂ ಅಗ್ನಿ ಅವಘಡ ನಡೆದಾಗ ತಕ್ಷಣಕ್ಕೆ ಮಾಡಬೇಕಾದ ಕೆಲಸಗಳೇನು ಎಂಬುದರ ಬಗ್ಗೆ ಅರಿವು ಮೂಡಿಸುತ್ತಿರುತ್ತದೆ.

ಆದರೆ, ಫೆಬ್ರವರಿ ತಿಂಗಳೊಂದರಲ್ಲೇ ಬೆಂಗಳೂರಿನಲ್ಲಿ ನಾಲ್ಕು ಪ್ರಮುಖ ಅಗ್ನಿ ಅವಘಡಗಳು ಸಂಭವಿಸಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಅಗ್ನಿ ಅವಘಡಗಳು, ಹಾಗೂ ಅಗ್ನಿ ಅವಘಡಗಳು ನಡೆಯದಂತೆ ಸಾರ್ವಜನಿಕರು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಅಗ್ನಿ ಅವಘಡ; ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯಅಗ್ನಿ ಅವಘಡ; ಬೆಂಗಳೂರಲ್ಲಿ ವಿದ್ಯುತ್ ವ್ಯತ್ಯಯ

ಫೆಬ್ರವರಿ 11 ರಂದು

ಫೆಬ್ರವರಿ 11 ರಂದು

ಫೆಬ್ರವರಿ 11 ರಂದು ಕೋರಮಂಗಲದ 1ನೇ ಬ್ಲಾಕ್‌ನಲ್ಲಿರುವ ಹೋಟೆಲ್‌ ವೊಂದರಲ್ಲಿ ಶಾರ್ಟ್‌ ಸರ್ಕೀಟ್‌ನಿಂದ ನಡೆದ ಅಗ್ನಿ ಅನಾಹುತದ ವೇಳೆ ಸಿಲಿಂಡರ್‌ ಸ್ಫೋಟ ಸಂಭವಿಸಿ ಕೆಲಸ ಮಾಡುತ್ತಿದ್ದ 11 ಜನ ಕಾರ್ಮಿಕರು ಗಾಯಗೊಂಡಿದ್ದರು. ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಗಾಯಾಳುಗಳನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಫೆಬ್ರವರಿ 17 ರಂದು

ಫೆಬ್ರವರಿ 17 ರಂದು

ನಗರದ ಹೃದಯ ಭಾಗವಾದ ಆನಂದ ರಾವ್ ವೃತ್ತದ ಬೆಸ್ಕಾಂ ಟ್ರಾನ್ಸಪಾಮರ್ಮ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಫೆಬ್ರವರಿ 17 ರಂದು ಮಧ್ಯಾಹ್ನ ನಡೆದಿತ್ತು. ಘಟನೆಗೆ ಸ್ಪಷ್ಟ ಕಾರಣ ಏನು ಎಂಬುದು ನಿಖರವಾಗಿ ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕೂಟ್‌ನಿಂದ 20 ಕೆಬಿ ಸಾಮರ್ಥ್ಯದ ಬೃಹತ್ ಟ್ರಾನ್ಸಪಾರ್ಮರ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಬೃಹತ್ ಟ್ರಾನ್ಸಪಾರ್ಮರ್ ಅಗ್ನಿಗಾಹುತಿ ಆಗಿದ್ದರಿಂದ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸ ಆಗಿತ್ತು.

ಮುಂಬೈನ ಜಿಎಸ್‌ಟಿ ಭವನದಲ್ಲಿ ಅಗ್ನಿ ಅವಘಡಮುಂಬೈನ ಜಿಎಸ್‌ಟಿ ಭವನದಲ್ಲಿ ಅಗ್ನಿ ಅವಘಡ

ಫೆಬ್ರವರಿ 25 ರಂದು

ಫೆಬ್ರವರಿ 25 ರಂದು

ಜಯನಗರ ಬಳಿಯ ಸೌತ್ ಎಂಡ್ ಸರ್ಕಲ್ ಮೆಟ್ರೋ ನಿಲ್ದಾಣಕ್ಕೆ ಹೊಂದಿಕೊಂಡು ಇರುವ ಹೋಟೆಲ್ ಒಂದರಲ್ಲಿ ಫೆಬ್ರವರಿ 25 ಬೆಳಿಗ್ಗೆ ಅಗ್ನಿ ಅವಘಡ ನಡೆದಿತ್ತು. ಆರ್ ವಿ ರಸ್ತೆಯಲ್ಲಿರುವ ನ್ಯೂ ಶಾಂತಿ ಸಾಗರ ಹೋಟೆಲ್‌ನ ಎರಡನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ದುರಂತವನ್ನು ತಪ್ಪಿಸಿದರು. ನ್ಯೂ ಶಾಂತಿ ಸಾಗರ ಹೋಟೆಲ್ ಮೆಟ್ರೋ ನಿಲ್ದಾಣಕ್ಕೆ ಹೊಂದಿಕೊಂಡು ಇದೆ. ಒಂದು ವೇಳೆ ಬೆಂಕಿ ಕೆನ್ನಾಲಿಗೆ ಚಾಚಿದ್ದರೇ ಹೆಚ್ಚಿನ ಅವಘಡ ಸಂಭವಿಸುವ ಸನ್ನಿವೇಶ ಇತ್ತು

ಫೆಬ್ರವರಿ 26 ರಂದು

ಫೆಬ್ರವರಿ 26 ರಂದು

ಫೆಬ್ರವರಿ 26 ರಂದು ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಜ್ಯೋತಿ ಕಾಂಪ್ಲೆಕ್ಸ್‌ನಲ್ಲಿರುವ ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಶೋರೂಮ್‌ನಲ್ಲಿ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುತ್ತಿದ್ದ ವೇಳೆ ಓವರ್ ಚಾರ್ಜ್ ಆಗಿ ಘಟನೆ ಸಂಭವಿಸಿತ್ತು.

ವಿದ್ಯುತ್ ಅವಘಡ ಸಂಭವಿಸದಂತೆ ಮಾಡಬೇಕಾದದ್ದು

ವಿದ್ಯುತ್ ಅವಘಡ ಸಂಭವಿಸದಂತೆ ಮಾಡಬೇಕಾದದ್ದು

bescom ವ್ಯಾಪ್ತಿಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ 1912 ಕರೆ ಮಾಡಿ, ಪ್ಲಗ್ ಬಿಂದುವಿನಿಂದ ಸಂಪರ್ಕ ಪಡೆಯಲು ಗುಣಮಟ್ಟದ ಪಿನ್ನನ್ನು ಬಳಸಿ.

ಅನುಮೋದಿತ ಗುಣಮಟ್ಟದ ಮತ್ತು ಐ.ಎಸ್.ಐ. ಗುರುತಿನ ವಯರ್‍ಗಳು/ಸ್ವಿಚ್ ಗಳು/ಕೇಬಲ್‍ಗಳನ್ನೇ ಯಾವಾಗಲೂ ಬಳಸಿ. ಸ್ವಿಚ್ ಆರಿಸಿದ ಬಳಿಕವಷ್ಟೇ ಉಪಯೋಗಿಸಲ್ಪಟ್ಟ ಬಲ್ಬ್‍ಗಳನ್ನು ಬದಲಾಯಿಸಿ. ದೀಪದ ಎಲ್ಲಾ ಹಿಡಿಕೆಗಳು ದೀಪದೊಂದಿಗೇ ಇರಲಿ.

ಎಚ್ಚರಿಕೆ ಕ್ರಮಗಳು

ಎಚ್ಚರಿಕೆ ಕ್ರಮಗಳು

ಬರಿಯ ವಯರುಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಪಡೆಯುವುದನ್ನು ತಪ್ಪಿಸಿ. ಬಟ್ಟೆ ಒಣಗಿಸುವ ಹಗ್ಗ ಕಟ್ಟಲು ದೀಪಗಳ ಕಂಸ ಯಾ ಆವರಣವನ್ನು ಉಪಯೋಗಿಸಬೇಡಿ.

ಸ್ವಿಚ್ ಆನ್ ಇರುವಾಗ ಫ್ಯೂಸ್ ಹೋದ ಬಲ್ಬುಗಳನ್ನು ಬದಲಾಯಿಸುವುದು ಅಪಾಯಕಾರಿ ದೀಪವಿಲ್ಲದೆ ದೀಪದ ಹಿಡಿಕೆಗಳನ್ನಿಡಬೇಡಿ. ಕಳಪೆ ಗುಣಮಟ್ಟದ ವಿದ್ಯುತ್ ಜೋಡಣೆಯನ್ನು ಖರೀದಿಸಬೇಡಿ. ಇಂತಹ ಜೋಡಣೆಗಳಿಂದ ಅಪಘಾತವಾಗುವ ಸಂಭವವಿದೆ.

English summary
4 Major Fire Incidents In Month Of February At Bengaluru. here the details of fire incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X