Breaking; ಹಾಸನದಿಂದ 4 ದಿನದ ಮಗು ಬೆಂಗಳೂರಿಗೆ ಬರಲು ಝಿರೋ ಟ್ರಾಫಿಕ್

ನವೆಹಲಿ, ಏಪ್ರಿಲ್ 21; ಹೃದಯ ಸಂಬಂಧಿ ಚಿಕಿತ್ಸೆಗಾಗಿ ಹಾಸನದಿಂದ 4 ದಿನದ ಗಂಡು ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ. ಆಂಬ್ಯುಲೆನ್ಸ್ ಸಾಗಲು ಝಿರೋ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗಿದೆ.

ಹಾಸನದ ವೈದ್ಯಕೀಯ ಆಸ್ಪತ್ರೆಯಿಂದ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ನಾಲ್ಕು ದಿನದ ಮಗುವನ್ನು ಕರೆದುಕೊಂಡು ಬರಲಾಗುತ್ತಿದೆ. ವೈದ್ಯರು, ನರ್ಸ್, ಮಗು ಇರುವ ಆಂಬ್ಯುಲೆನ್ಸ್ ಅನ್ನು ಹಾಸನ ಮೂಲದ ಮಧುಸೂದನ್ ಚಾಲನೆ ಮಾಡುತ್ತಿದ್ದಾರೆ.

ಮಗು ಇರುವ ಆಂಬ್ಯುಲೆನ್ಸ್‌ ಹಾಸನದಿಂದ ಹೊರಟಿದ್ದು, ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಹೃದಯ ಸಂಬಂಧಿ ಕಾಯಿಲೆಯಿಂದ 4 ದಿನದ ಗಂಡು ಮಗು ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.

4 Day Old Boy Ferrying Via Zero Traffic From Hassan to Bengaluru

ಮಂಡ್ಯ ಜಿಲ್ಲೆ ಕಿಕ್ಕೇರಿ ಮೂಲದ ಶ್ವೇತಾ ಮತ್ತು ತ್ರಿವೇದಿ ದಂಪತಿಗಳ ಮಗುವಿಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಗುವಿನ ಹೃದಯದಲ್ಲಿ ಮಾತ್ರ ಸಮಸ್ಯೆ ಇಲ್ಲ. ಕಿಡ್ನಿಯಲ್ಲಿಯೂ ಸಮಸ್ಯೆ ಇದೆ. ಏಪ್ರಿಲ್ 17ರಂದು ಮಗು ಜನಿಸಿದಾಗ ವೈದ್ಯರು ಪರೀಕ್ಷೆ ಮಾಡಿ ಈ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದರು.

ಹಾಸನದಲ್ಲಿ ಮಕ್ಕಳ ತಜ್ಞರು ಇಲ್ಲದ ಕಾರಣ ಗುರುವಾರ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನೋವಾ ಆಂಬ್ಯುಲೆನ್ಸ್‌ನಲ್ಲಿ ಮಗುವನ್ನು ಹಾಸನದಿಂದ ಕರೆತರಲಾಗುತ್ತಿದೆ.

ತುರ್ತು ಸಂದರ್ಭಕ್ಕಾಗಿ ಆಂಬ್ಯುಲೆನ್ಸ್ ಜೊತೆ ಎರಡು ಅಂಬ್ಯುಲೆನ್ಸ್‌ ಸಂಚಾರ ನಡೆಸುತ್ತಿವೆ. ಬುಧವಾರ ಹಾಸನದ ಪೊಲೀಸರಿಗೆ ಪೋಷಕರು ಮನವಿ ಮಾಡಿ, ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡುವಂತೆ ಕೋರಿದ್ದರು.

ಅಂಬ್ಯುಲೆನ್ಸ್‌ ಚಾಲಕ ಮಧುಸೂದನ್ ಈ ಹಿಂದೆ ಹಾಸನದಿಂದ ಮೂರು ಮಕ್ಕಳನ್ನು ಬೆಂಗಳೂರಿರಗೆ 1 ಗಂಟೆ 28 ನಿಮಿಷದಲ್ಲಿ ಕರೆತಂದಿದ್ದರು. ವೆಂಟಿಲೇಟರ್ ಸಹಾಯದಿಂದ ಮಗುವನ್ನು ಕರೆದುಕೊಂಡು ಬರಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+