ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಆರ್‌ಸಿಎಲ್‌ಗೆ ಬೋಗಿ ಪೂರೈಕೆಗೆ ಮುಂದಾದ 4 ಕಂಪನಿಗಳು

|
Google Oneindia Kannada News

ಬೆಂಗಳೂರು ಜು.8: ಬೆಂಗಳೂರಿನ ಆರ್. ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ 19 ಕಿ. ಮೀ. ಮೆಟ್ರೋ ಮಾರ್ಗ ಸೇರಿದಂತೆ 'ನಮ್ಮ ಮೆಟ್ರೋ ' ರೈಲು ಯೋಜನೆಯ ಒಟ್ಟು 73 ಕಿ. ಮೀ. ಮಾರ್ಗದ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಈ ವಿವಿಧ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಪೂರೈಕೆಗೆ ಆಹ್ವಾನಿಸಿದ್ದ ಟೆಂಡರ್ ನಲ್ಲಿ ನಾಲ್ಕು ಕಂಪನಿಗಳು ಪಾಲ್ಗೊಂಡಿವೆ.

ಚೀನಾ ಮೂಲದ ಸಿಆರ್‌ಆರ್‌ಸಿ ವೇಳಾಪಟ್ಟಿ ಪ್ರಕಾರ 216 ಬೋಗಿಗಳನ್ನು ಪೂರೈಸಲು ವಿಫಲವಾಗಿತ್ತು. ಅದಾದ ನಂತರ ಕಾಮಗಾರಿಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಏಪ್ರಿಲ್ ನಲ್ಲಿ ಟೆಂಡರ್ ಆಹ್ವಾನಿಸಿತ್ತು. ಇದರಲ್ಲಿ ಪಾಲ್ಗೊಂಡ ನಾಲ್ಕು ಕಂಪನಿಗಳು ಬಿಎಂಆರ್‌ಸಿಎಲ್ ಗೆ ಅಗತ್ಯವಾದ ಮೆಟ್ರೋ ಬೋಗಿಗಳನ್ನು ಒದಗಿಸುವ ಆಸಕ್ತಿ ವ್ಯಕ್ತಪಡಿಸಿವೆ.

ವಿದ್ಯುತ್ ಬಿಲ್ ಪಾವತಿ; ವೈರಲ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬೆಸ್ಕಾಂವಿದ್ಯುತ್ ಬಿಲ್ ಪಾವತಿ; ವೈರಲ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಬೆಸ್ಕಾಂ

2023ರ ವೇಳೆಗೆ ಪೂರ್ಣಗೊಳ್ಳಲಿರುವ ನಗರದ ಆರ್. ವಿ. ರಸ್ತೆ ಯಿಂದ ಬೊಮ್ಮಸಂದ್ರದ ವರೆಗಿನ 19 ಕಿ. ಮೀ. ಮೆಟ್ರೋ ಮಾರ್ಗ ಸೇರಿದಂತೆ ವಿವಿಧೆ ಪೂರೈಕೆ ಆಗಲಿರುವ ರೈಲುಗಳನ್ನು ಬಳಸಿಕೊಳ್ಳಲಾಗುವುದು. ಒಟ್ಟು ಆರು ಕೋಚ್ ಗಳನ್ನು ಒಳಗೊಂಡ 12 ರೈಲುಗಳನ್ನು ಪಡೆಯಲು ಟೆಂಡರ್ ಆಹ್ವಾನಿಸಲಾಗಿತ್ತು.

4 Companies have come forward to supply train coaches to BMRCL

ಮುಂದೆ ಬಂದ ನಾಲ್ಕು ಕಂಪನಿಗಳು; ದೇಶದಾದ್ಯಂತ ವಿವಿಧ ನಗರಗಳಿಗೆ ಮೆಟ್ರೋ ರೈಲುಗಳನ್ನು ಪೂರೈಸುತ್ತಿರುವ ಬಿಎಎಂಎಲ್, ಆಲ್ ಸ್ಟಂ ಟ್ರಾನ್ಸಪೋರ್ಟ್, ಮಿಟ್ರುಬಿಷಿ, ಎಲೆಕ್ಟ್ರಿಕ್ ಹಾಗೂ ಟಿಟಾಗರ್ ವ್ಯಾಗ್ಸನ್ ಲಿಮಿಟೆಡ್ ಕಂಪನಿಗಳು ಬಿಎಂಆರ್‌ಸಿಎಲ್‌ನ ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಮೂಲಕ ರೈಲು ಒದಗಿಸಲು ಮುಂದೆ ಬಂದಿವೆ.

ಬೆಂಗಳೂರಿನ ಮಕ್ಕಳೂ ಆರೋಗ್ಯವಂತರಲ್ಲ: ಯಾಕೆ ಗೊತ್ತಾ? ಬೆಂಗಳೂರಿನ ಮಕ್ಕಳೂ ಆರೋಗ್ಯವಂತರಲ್ಲ: ಯಾಕೆ ಗೊತ್ತಾ?

ಈ ಬಿಡ್ ಗಳ ತಾಂತ್ರಿಕ ಮೌಲ್ಯಮಾಪನ ನಡೆಸಲಾಗುವುದು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ನಗರದ ಬೊಮ್ಮಸಂದ್ರ ಮತ್ತು ಬೊಮ್ಮನಹಳ್ಳಿ ಮೆಟ್ರೋ ಕಾಮಗಾರಿಗಳ ಸಿವಿಲ್ ಕೆಲಸ ಶೇ.90ಕ್ಕೂ ಅಧಿಕ ಕೆಲಸ ಪೂರ್ಣಗೊಂಡಿದೆ. ಆರ್. ವಿ. ರಸ್ತೆ ಮಾರ್ಗದ ಕಾಮಗಾರಿ ಶೇ. 93ರಷ್ಟು ಪೂರ್ಣಗೊಂಡಿದೆ.

4 Companies have come forward to supply train coaches to BMRCL

ಸಂಚಾರ ಕಿರಿಕಿರಿಯಿಂದ ಮುಕ್ತಿ; ಅಲ್ಲದೇ ಇದೇ 2022ರ ವರ್ಷಾಂತ್ಯದ ವೇಳೆಗೆ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ಸಂಪರ್ಕ ಕಲ್ಪಿಸುವ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬರಲಿದೆ. ಅಂದುಕೊಂಡಂತೆ ಆದರೆ ಆದಷ್ಟು ಶೀಘ್ರವೇ ಈ ಮಾರ್ಗದ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಆರಂಭಗೊಳ್ಳಲಿದೆ.

ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ರಸ್ತೆಯಲ್ಲಿ ಮಟ್ರೋ ಕಾಮಗಾರಿಯಿಂದ ಆಗುತ್ತಿದ್ದ ಸಂಚಾರ ದಟ್ಟಣೆ, ವಾಹನ ಸವಾರರು ಅನುಭವಿಸುತ್ತಿದ್ದ ಸಂಚಾರ ಕಿರಿಕಿರಿಗೆ ಮುಕ್ತಿ ಸಿಗಲಿದೆ.

Recommended Video

Jaggesh ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು | *Politics | OneIndia Kannada

English summary
BMRCL invited tender in the month of April, in which involved four Companies are agree to provide metro coaches to BMRCL
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X