ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ದಿನ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಿದವರೆಷ್ಟು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 08 : ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಸೋಮವಾರದಿಂದ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ.

Recommended Video

ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಸಿದ್ರಾ? ಹಂಗಾದ್ರೆ.. ಗೋವಿಂದ | Oneindia Kannada

ಮೊದಲ ದಿನ 6 ಗಂಟೆಗಳ ಕಾಲ ಮಾತ್ರ ನಮ್ಮ ಮೆಟ್ರೋ ರೈಲು ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಚಾರ ನಡೆಸಿದೆ. 3,770 ಜನರು ಮಾತ್ರ ಮೊದಲ ದಿನ ಸಂಚಾರ ನಡೆಸಿದ್ದಾರೆ.

5 ತಿಂಗಳ ಬಳಿಕ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ 5 ತಿಂಗಳ ಬಳಿಕ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ

ಬೆಳಗ್ಗೆ 8 ರಿಂದ 11 ಮತ್ತು ಸಂಜೆ 4.30ರಿಂದ 7.30ರ ತನಕ ಮಾತ್ರ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಿದೆ. ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರ ನಡೆಸಿದೆ. ಕಡಿಮೆ ಪ್ರಯಾಣಿಕರು ಮೊದಲ ದಿನ ಸಂಚಾರ ನಡೆಸಿದ್ದಾರೆ.

ಚಿತ್ರಗಳು: ನಮ್ಮ ಮೆಟ್ರೋ ಸಂಚಾರಕ್ಕೆ ಅಂತಿಮ ಹಂತದ ಸಿದ್ಧತೆ ಚಿತ್ರಗಳು: ನಮ್ಮ ಮೆಟ್ರೋ ಸಂಚಾರಕ್ಕೆ ಅಂತಿಮ ಹಂತದ ಸಿದ್ಧತೆ

3770 People Take Namma Metro On First Day Of Service

ಒಂದು ಮೆಟ್ರೋ ರೈಲಿನಲ್ಲಿ 400 ಜನರು ಮಾತ್ರ ಸಂಚಾರ ನಡೆಸಬಹುದು ಎಂದು ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಇದರಿಂದಾಗಿ 36,400 ಜನರು ಮಾತ್ರ ಪ್ರಯಾಣ ಮಾಡಬಹುದಾಗಿದೆ.

7 ದಿನ ಮೆಟ್ರೋ ಕಾರ್ಡ್‌ ಬಳಸಿಲ್ಲ ಎಂದರೆ ಹಣ ಕಡಿತ 7 ದಿನ ಮೆಟ್ರೋ ಕಾರ್ಡ್‌ ಬಳಸಿಲ್ಲ ಎಂದರೆ ಹಣ ಕಡಿತ

ಹಸಿರು ಮಾರ್ಗದ ಸಂಚಾರ: ನಮ್ಮ ಮೆಟ್ರೋದ ಹಸಿರು ಮಾರ್ಗ ನಾಗಸಂದ್ರ-ಯಲಚೇನಹಳ್ಳಿ ನಡುವೆ ಸೆಪ್ಟೆಂಬರ್ 9 ರಿಂದ ರೈಲು ಸಂಚಾರ ಆರಂಭವಾಗಲಿದೆ. ಬೆಳಗ್ಗೆ 8 ರಿಂದ 11 ಮತ್ತು ಸಂಜೆ 4.30ರಿಂದ 7.30ರ ತನಕ ರೈಲು ಸಂಚರಿಸಲಿದೆ.

ಬೆಳಗ್ಗೆ 7 ರಿಂದ 9: ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 11ರಿಂದ ಮೆಟ್ರೋ ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬರಲಿದೆ. ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ಮೆಟ್ರೋ ರೈಲು ಸಂಚರಿಸಲಿದೆ. ಪೀಕ್ ಅವರ್‌ನಲ್ಲಿ 5 ನಿಮಿಷ, ಉಳಿದ ಸಮಯದಲ್ಲಿ 10 ನಿಮಿಷಕ್ಕೊಂದು ರೈಲು ಓಡಲಿದೆ.

English summary
BMRCL resumed Namma Metro service in Bengaluru. On first day with the six-hour service on the purple line 3,770 passengers took train for journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X