ಬಿಡಿಎಯಲ್ಲಿ 3000 ಕೋಟಿ ಠೇವಣಿ ಹಗರಣ!
ಬೆಂಗಳೂರು, ಮೇ 30 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 3000 ಕೋಟಿ ರೂ.ಗಳ ಹಗರಣವೊಂದು ನಡೆದಿದೆ. ಆದರೆ, ಹಗರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಇದರ ಮೂಲ ಪತ್ತೆ ಹಚ್ಚುವುದು ಸವಾಲಾಗಿದೆ. ಬಿಡಿಎ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದ ಸಾರ್ವಜನಿಕರ ಹಣ ಎಲ್ಲಿ, ಹೇಗೆ ವರ್ಗಾವಣೆಯಾಗಿದೆ ಎಂಬುದು ನಿಗೂಢ.
ರಾಷ್ಟ್ರೀಯ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಸಾರ್ವಜನಿಕರ ಮೂರು ಸಾವಿರ ಕೋಟಿ ರೂ.ಹಣವನ್ನು ಠೇವಣಿ ಇಟ್ಟು, ನಂತರ ಅದನ್ನು ಮ್ಯೂಚುವಲ್ ಫಂಡ್‌ಗೆ ವರ್ಗಾವಣೆ ಮಾಡಿ 10 ಸಾವಿರ ಕೋಟಿ ರೂ. ವಹಿವಾಟು ನಡೆಸಿದ ಹಗರಣವಿದು. [ಬಿಡಿಎಯಲ್ಲಿ ಭೂ ದಾಖಲೆ ತಿದ್ದಿದ ಭೂಪರು]

ಮಹಾಲೆಕ್ಕಪರಿಶೋಧಕ (ಸಿಎಜಿ) ವರದಿಯಲ್ಲಿ ಬಿಡಿಎ ಬಹುಕೋಟಿ ಹಣ ಮ್ಯೂಚುವಲ್ ಫಂಡ್‌ಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಸರ್ಕಾರ ಹಗರಣದ ಗಂಭೀರತೆ ಅರಿತು ಸಿಐಡಿ ತನಿಖೆ ಆದೇಶ ನೀಡಿತ್ತು. 1999ರಿಂದ 2014ರ ವರೆಗೆ ವಿವಿಧ ಬ್ಯಾಂಕ್‌ಗಳಲ್ಲಿ ರೇವಣಿ ಇಟ್ಟ ಹಣದ ಬಗ್ಗೆ ತನಿಖೆ ನಡೆಯುತ್ತಿದೆ. [ಅರ್ಕಾವತಿ ಕರ್ಮಕಾಂಡ : ಕುಮಾರಸ್ವಾಮಿ ಪುಸ್ತಕದಲ್ಲೇನಿದೆ?]
ಅಧಿಕಾರಿಗಳಿಗೆ ಕಮೀಷನ್ : ಠೇವಣಿ ರೂಪದಲ್ಲಿರುವ ಹಣವನ್ನು ನಷ್ಟದಲ್ಲಿರುವ ಮ್ಯೂಚುವಲ್ ಫಂಡ್‌ಗೆ ವರ್ಗಾವಣೆ ಮಾಡಿದರೆ ಅಧಿಕಾರಿಗಳಿಗೆ ಕಮೀಷನ್ ದೊರೆಯಲಿದೆ. ಸರ್ಕಾರಿ ಸಂಸ್ಥೆಯ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅಲ್ಲಿಂದ ಮ್ಯೂಚುವಲ್ ಫಂಡ್‌ಗೆ ವರ್ಗಾವಣೆ ಮಾಡುವ ಕೆಲಸ ಹಿಂದೆಯೂ ನಡೆದಿದೆ. [ಬಹುಕೋಟಿ ಲಾಟರಿ ಹಗರಣದ ತನಿಖೆ ಸಿಬಿಐ ಕೈಗೆ]
ಬ್ಯಾಂಕ್‌ನಿಂದ ಮ್ಯೂಚುವಲ್ ಫಂಡ್‌ಗೆ, ಅಲ್ಲಿಂದ ಪುನಃ ಬ್ಯಾಂಕ್‌ಗೆ ಹೀಗೆ ಹಣದ ವರ್ಗಾವಣೆ ನಡೆದಿದೆ. ಹಗರಣದ ಹಗರಣತ ತನಿಖೆ ನಡೆಸುತ್ತಿರುವ ಸಿಐಡಿಗೆ ಇದನ್ನು ಪತ್ತೆ ಹಚ್ಚುವುದು ಸವಾಲಾಗಿದೆ. 1999ರಿಂದ 2014ರ ತನಕ ಬಿಡಿಎನಲ್ಲಿ ಕೆಲಸ ಮಾಡಿದ ಆಯುಕ್ತರು, ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಿಲಾಗಿದೆ.
ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಂತಹದ್ದೆ 9 ಕೋಟಿ ರೂ.ಗಳ ಹಗರಣ ನಡೆದಿತ್ತು. ಮಂಡ್ಯ ನಗರಾಭಿವೃ ಪ್ರಾಧಿಕಾರದಲ್ಲಿ 16 ಕೋಟಿಯ ಹಗರಣ ನಡೆದಿತ್ತು. ಇವುಗಳನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ.
ಸದ್ಯ, ಬಿಡಿಎಯ ಈ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಲೇ ಇದೆ. ತನಿಖೆ ಪೂರ್ಣಗೊಂಡು ಸರ್ಕಾರಕ್ಕೆ ಯಾವಾಗ ವರದಿ ಸಲ್ಲಿಕೆಯಾಗುತ್ತದೆ. ಇದರಲ್ಲಿ ಭಾಗಿಯಾಗಿರುವವರು ಯಾರು? ಎಂಬುದು ವರದಿ ಬಂದ ಬಳಿಕ ಬಹಿರಂಗವಾಗುವ ಸಾಧ್ಯತೆ ಇದೆ.












Click it and Unblock the Notifications