ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಧ ದಿನ ಮುಷ್ಕರದಿಂದ 'ನಮ್ಮ ಮೆಟ್ರೋ'ಗೆ 30 ಲಕ್ಷ ನಷ್ಟ!

By Sachhidananda Acharya
|
Google Oneindia Kannada News

ಬೆಂಗಳೂರು, ಜುಲೈ 10: ನಮ್ಮ ಮೆಟ್ರೋದ ಸಿಬ್ಬಂದಿಗಳು ಜುಲೈ 7ರ ಶುಕ್ರವಾರ ಏಕಾಏಕಿ ಮುಷ್ಕರ ನಡೆಸಿದ್ದರಿಂದ ನಿಗಮಕ್ಕೆ ಬರೋಬ್ಬರಿ 30 ಲಕ್ಷ ನಷ್ಟವಾಗಿದೆ.

'ಬೆಂಗಳೂರು ಮೆಟ್ರೊ ರೈಲು ನಿಗಮ' (ಬಿಎಂಆರ್‌ಸಿಎಲ್‌)ನ ಸಿಬ್ಬಂದಿಗಳು ನಡೆಸಿದ ಮುಷ್ಕರದಿಂದ 91 ಸಾವಿರ ಪ್ರಯಾಣಿಕರಿಗೆ ತೊಂದರೆಯೂ ಆಗಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್ ತಿಳಿಸಿದ್ದಾರೆ.

ಏಕಾಏಕಿ 'ನಮ್ಮ ಮೆಟ್ರೋ' ಬಂದ್ ನಡೆಯುತ್ತಿರುವುದೇಕೆ?ಏಕಾಏಕಿ 'ನಮ್ಮ ಮೆಟ್ರೋ' ಬಂದ್ ನಡೆಯುತ್ತಿರುವುದೇಕೆ?

30 lakh losses to Namma Metro from half-day strike!

ಜುಲೈ 7ರಂದು ನಮ್ಮ ಮೆಟ್ರೋದ ಸಿಬ್ಬಂದಿಗಳು ಮಧ್ಯಾಹ್ನದವರಗೆ ಮುಷ್ಕರ ನಡೆಸಿದ್ದರು. ನಂತರ ಸಂಧಾನ ನಡೆಸಿದ್ದರಿಂದ ಮುಷ್ಕರವನ್ನು ಹಿಂತೆಗೆದುಕೊಂಡಿದ್ದರು.

ಮುಷ್ಕರದ ಬೆನ್ನಿಗೆ ಜನ ಸಾಮಾನ್ಯರಿಗಾದ ತೊಂದರೆಯನ್ನು ಮನಗಂಡಿದ್ದ ಸರಕಾರ 'ಎಸ್ಮಾ' (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿಗೆ ಮೆಟ್ರೋವನ್ನು ಪರಿಗಣಿಸಿ ಆದೇಶ ಹೊರಡಿಸಿತ್ತು.

ಇನ್ನು ಮುಂದೆ ಮೆಟ್ರೋ ಸಿಬ್ಬಂದಿಗಳು ಮುಷ್ಕರ ನಡೆಸುವಂತಿಲ್ಲಇನ್ನು ಮುಂದೆ ಮೆಟ್ರೋ ಸಿಬ್ಬಂದಿಗಳು ಮುಷ್ಕರ ನಡೆಸುವಂತಿಲ್ಲ

ಇನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಸಂತ ರಾವ್, 'ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ (ಕೆಐಎಸ್‌ಎಫ್‌) ಇನ್ನಷ್ಟು ಸಿಬ್ಬಂದಿಗಳು ನಮ್ಮ ಮೆಟ್ರೋ ಭದ್ರತೆಗಾಗಿ ಬೇಕಾಗಿದ್ದಾರೆ ' ಎಂದು ತಿಳಿಸಿದ್ದಾರೆ.

English summary
The Namma Metro staff had a strike on Friday, July 7, resulting in a loss of Rs 30 lakh to BMRCL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X