ಕಂಠೀರಣ ಒಳಾಂಗಣ ಕ್ರೀಡಾಂಗಣ ಕೋವಿಡ್ - 19 ಕೇರ್ ಸೆಂಟರ್
ಬೆಂಗಳೂರು, ಜೂನ್ 21 : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬೆಂಗಳೂರು ನಗರದಲ್ಲಿಯೂ ಸೋಂಕಿತರ ಸಂಖ್ಯೆ 1083ಕ್ಕೇ ಏರಿಕೆಯಾಗಿದೆ.
Recommended Video
ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸೋಂಕಿತರರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳುತ್ತಿದೆ.

ಶ್ರೀ ರವಿಶಂಕರ್ ಆಶ್ರಮ, ಕಂಠೀರವ ಮತ್ತು ಕೋರಮಂಗಲದಲ್ಲಿನ ಒಳಾಂಗಣ ಕ್ರೀಡಾಂಗಣವನ್ನು ಕೋವಿಡ್ - 19 ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಕೊರೊನಾ ವೈರಸ್ ಸೋಂಕು ಹೆಚ್ಚಾದರೆ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಶನಿವಾರ ಒಂದೇ ದಿನ 98 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1083ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಬಿಬಿಎಂಪಿ 319 ಕಂಟೈನ್ಮೆಂಟ್ ಝೋನ್‌ಗಳನ್ನು ಗುರುತಿಸಿದ್ದು, ಇವುಗಳಲ್ಲಿ 279 ಸಕ್ರಿಯ ಝೋನ್‌ಗಳಾಗಿವೆ. ನಗರದಲ್ಲಿ ಇದುವರೆಗೂ 378 ಜನರು ಕೊರನಾ ವೈರಸ್ ಸೋಂಕಿನಿಂದ ಗುಣಮುಖರಾಗದ್ದಾರೆ.
In the wake of the rising Covid19 positive cases and in the view of public interest, Sri Sri Ravishankar Ashram, Kanteerva Indoor Stadium and Koramangala Indoor Stadium to operate as Covid Care Centres for Asymptomatic patients.@CMofKarnataka @BSYBJP @sriramulubjp pic.twitter.com/Pj7M0OSRrr
— PANKAJ KUMAR PANDEY, IAS (@iaspankajpandey) June 20, 2020












Click it and Unblock the Notifications