ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೂ ರಾಷ್ಟ್ರ ಘೋಷಣೆಗೆ ಆಗ್ರಹಿಸಿ ಗೋವಾದಲ್ಲಿ ಅಧಿವೇಶನ ಆರಂಭ

|
Google Oneindia Kannada News

ಬೆಂಗಳೂರು, ಜೂನ್ 14: ಭಾರತದ ಸಂವಿಧಾನಕ್ಕೆ ತಿದ್ದುಪಡಿ ತಂದು, ಜಾತ್ಯತೀತ ರಾಷ್ಟ್ರ ಎಂದಿರುವುದನ್ನು ಹಿಂದೂ ರಾಷ್ಟ್ರ ಎಂದು ಮಾಡಬೇಕು ಎಂಬುದು ಸೇರಿದಂತೆ ವಿವಿಧ ವಿಚಾರಗಳ ಮಂಡನೆಗಾಗಿ ಗೋವಾದ ಪಾಂಡಾದಲ್ಲಿರುವ ರಾಮನಾಥಿ ಆಶ್ರಮದಲ್ಲಿ ಬುಧವಾರದಿಂದ (ಜೂನ್ 14) ಮೂರು ದಿನಗಳ ಅಖಿಲ ಭಾರತೀಯ ಹಿಂದೂ ಅಧಿವೇಶನ ಆರಂಭವಾಗಿದೆ.

ಯುವತಿಯ ಮೈಮೇಲೆ ಪ್ರೇತಾತ್ಮ, ನಿಬ್ಬೆರಗಾಯಿತು ಉಡುಪಿ ದೇವಾಲಯಯುವತಿಯ ಮೈಮೇಲೆ ಪ್ರೇತಾತ್ಮ, ನಿಬ್ಬೆರಗಾಯಿತು ಉಡುಪಿ ದೇವಾಲಯ

ದೇಶ-ವಿದೇಶಗಳ ನೂರೈವತ್ತು ಹಿಂದೂ ಸಂಘಟನೆಗಳ ಸದಸ್ಯರು ಈ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆ, ಚರ್ಚೆ, ಸಂವಾದ ಸೇರಿದ ಹಾಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸನಾತನ ಸಂಸ್ಥೆಯ ಪರಾತ್ಪರ ಗುರು ಡಾ ಜಯಂತ್ ಅಟವಲಿ ಅವರು ಈ ಅಧಿವೇಶನ ಆಯೋಜಿಸಿದ್ದಾರೆ.

3 days all India Hindu convention starts in Goa today

ಕಾಶ್ಮೀರದ ಗಲಭೆ ಬಗ್ಗೆ ಕೂಡ ಮೊದಲ ದಿನ ಚರ್ಚೆಯಾಗಿದೆ. ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದು ದೇಶದ ಹೆಸರು ಬದಲಾಗಬೇಕು ಎಂದು ಕೂಡ ಈ ಅಧಿವೇಶನದ ಮೂಲಕ ಒತ್ತಾಯಿಸಲು ತೀರ್ಮಾನಿಸಲಾಗಿದೆ. ಸಾಧ್ವಿ ಸರಸ್ವತಿ, ಚಾರುದತ್ತ ಪಿಂಗಳೆ ಅವರು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಿದ್ದಾರೆ.

3 days all India Hindu convention starts in Goa today

ಬೆಂಗಳೂರಿನಿಂದ ವಿಶೇಷ ಆಹ್ವಾನಿತರಾಗಿ ಡಾ.ಉಮೇಶ್ ಶರ್ಮ ಗುರೂಜಿ ಭಾಗವಹಿಸಿದ್ದಾರೆ. ಈ ಅಧಿವೇಶನದ ಲೈವ್ ಫೇಸ್ ಬುಕ್ ಪುಟದ ವಿಳಾಸ Fb.com/HinduAdhiveshan

English summary
Urging for various demands three days all India Hindu convention starts in Goa on June 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X