ನ.19ರಂದು ಅಂಕಿತ ಪ್ರಕಾಶನದಿಂದ ಮೂರು ಪುಸ್ತಕ ಬಿಡುಗಡೆ
ಬೆಂಗಳೂರು, ನವೆಂಬರ್ 16: ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿರುವ ಅಂಕಿತ ಪುಸ್ತಕ ಅವರಿಂದ ಇದೇ ತಿಂಗಳ ನವೆಂಬರ್ 19ರ ಭಾನುವಾರದಂದು ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಸು ರುದ್ರಮೂರ್ತಿ ಶಾಸ್ತ್ರಿ ಅವರ ಗೌತಮ ಬುದ್ಧ ಕಾದಂಬರಿ, ಕೆ.ಮುಕುಂದನ್ ಅವರ ಯುರೋಪ್ ಪ್ರವಾಸ ಹಾಗೂ ಅನು ಬೆಳ್ಳೆ ಅವರ ಕುಡ್ಪಲ್ ಭೂತ ಕಾದಂಬರಿ ಬಿಡುಗಡೆ ಆಗಲಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ಚಿಂತಕ ಡಾ.ಜಿ.ಬಿ.ಹರೀಶ್ ಉಪಸ್ಥಿತರಿರುತ್ತಾರೆ. ಇವರ ಜತೆಗೆ ಪುಸ್ತಕಗಳ ಲೇಖಕರು ಸಹ ಹಾಜರಿರುತ್ತಾರೆ. ಸ್ವಲ್ಪ ಮುಂಚಿತವಾಗಿ ಅಂದರೆ ಬೆಳಗ್ಗೆ 9.30ರ ಸುಮಾರಿಗೆ ವಾಡಿಯಾ ಸಭಾಂಗಣದ ಬಳಿ ಇದ್ದರೆ ಉಪಾಹಾರದ ವ್ಯವಸ್ಥೆ ಇರುತ್ತದೆ. ಜತೆಗೆ ನೆಚ್ಚಿನ ಲೇಖಕರ ಜತೆಗೆ ಫೋಟೋ ಕೂಡ ತೆಗೆದುಕೊಳ್ಳಬಹುದು.












Click it and Unblock the Notifications