ದೆಹಲಿಯಲ್ಲಿ 41, ಬೆಂಗಳೂರಲ್ಲಿ 27 ವಿಮಾನ ಹಾರಾಟ ವ್ಯತ್ಯಯ
ಬೆಂಗಳೂರು, ಜನವರಿ 06 : ಶೀತಗಾಳಿಯಿಂದಾಗಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರದಲ್ಲಿ ಭಾರೀ ಚಳಿ ಇದೆ. ಮತ್ತೊಂದು ಕಡೆ ದಟ್ಟ ಮಂಜಿನ ಕಾರಣದಿಂದಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ದೆಹಲಿಯಿಂದ ಹೊರಡಬೇಕಾಗಿದ್ದ 41, ಬೆಂಗಳೂರಿನಿಂದ ಹೊರಡಬೇಕಿದ್ದ 27 ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಗಿದೆ. ದೆಹಲಿಯಲ್ಲಿ ದಟ್ಟ ಮಂಜಿನ ಕಾರಣದಿಂದಾಗಿ ವಾಯು ಮಾಲಿನ್ಯದ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ.
ಬೆಂಗಳೂರಿನ ಮೂರು ಪ್ರದೇಶಗಳಲ್ಲಿ ವಾಯು ವಾಲಿನ್ಯ ವಿಪರೀತವಾಗಿದೆ. ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಮತ್ತು ಜಯನಗರ 5ನೇ ಬ್ಲಾಕ್ ಪ್ರದೇಶದಲ್ಲಿ ಉಸಿರಾಡುವ ಗಾಳಿ ವಿಪರೀತವಾಗಿ ಕಲುಷಿತವಾಗಿದೆ.

ಡಿಸೆಂಬರ್ 6ರಂದು ಮಂಜು ಕವಿದಾಗ ವಿಮಾನಗಳ ಹಾರಾಟಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಘೋಷಣೆ ಮಾಡಿತ್ತು. ಆದರೆ, ಮರುದಿನವೇ 362 ವಿಮಾನಗಳ ವಿಳಂಬವಾದವು, 38 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.
ಡಿಸೆಂಬರ್ 25ರಂದು 200 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಪ್ರತಿದಿನ 1300 ವಿಮಾನಗಳು ಆಗಮಿಸುತ್ತವೆ. ಆದರೆ, ಡಿಸೆಂಬರ್ ಮೊದಲ ವಾರದಿಂದಲೇ ಹಾರಾಟ ವಿಳಂಬವಾಗುತ್ತಿದೆ.












Click it and Unblock the Notifications