₹ 26,000 ಕೋಟಿ ಬೆಂಗಳೂರು ಟನಲ್ ರೋಡ್ ಯೋಜನೆ ಈ ಕಾರಣಕ್ಕೆ ಬೇಡ! Bengaluru Tunnel Road Project
Bengaluru Tunnel Road Project: ಬೆಂಗಳೂರಿನ ಟನಲ್ ರೋಡ್ (ಸುರಂಗ ಮಾರ್ಗ) ಪ್ರಾಜೆಕ್ಟ್ ಜಾರಿ ಮಾಡುವುದಕ್ಕೆ ಕರ್ನಾಟಕ ಸರ್ಕಾರವು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಈ ಯೋಜನೆ ಯಾವ ಕಾರಣಕ್ಕೆ ಜಾರಿಯಾಗುವುದು ಬೇಡ ಎಂದು ತಜ್ಞರು ಕಾರಣ ಸಹಿತ ವಿವರಣೆ ನೀಡುತ್ತಿದ್ದಾರೆ. ಬೆಂಗಳೂರುನಲ್ಲಿ ಈ ಯೋಜನೆಯನ್ನು ಜಾರಿ ಮಾಡುವುದರಿಂದಾಗಿ ಭಾರೀ ಸಮಸ್ಯೆ ಆಗಲಿದೆ ಎನ್ನುವ ವಿಷಯ ಚರ್ಚೆ ಆಗುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಈ ಯೋಜನೆಯನ್ನು ಜಾರಿ ಮಾಡುವುದಕ್ಕೆ ಎಷ್ಟು ಕೋಟಿ ಖರ್ಚಾಗಲಿದೆ ಹಾಗೂ ಯಾವ ಕಾರಣಕ್ಕೆ ಈ ಯೋಜನೆಯನ್ನು ಜಾರಿ ಮಾಡಬಾರದು ಎಂದು ಪವನ್ (Pavan @pav_sri) ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಹಲವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಟನಲ್ ಯೋಜನೆಯನ್ನು ಜಾರಿ ಮಾಡುವುದಕ್ಕೆ ಬರೋಬ್ಬರಿ 26,000 ಕೋಟಿ ರೂ ವೆಚ್ಚವಾಗಲಿದೆ. ಅಲ್ಲದೇ ಈ ಟನಲ್‌ನಲ್ಲಿ ಕೇವಲ ಕಾರುಗಳಿಗೆ ಮಾತ್ರ ಪ್ರವೇಶವಿರುತ್ತದೆ. ಯೋಜನೆಗೆ ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿ [BMLTA Act] ಆಕ್ಟ್ ನ ಸೆಕ್ಷನ್ 19 ಅನುಮೋದನೆ ಇರುವುದಿಲ್ಲ.
ಕರ್ನಾಟಕ ರಾಜ್ಯ ಸಚಿವ ಸಂಪುಟ 26,000 ಕೋಟಿ ರೂ ಟನಲ್ ಯೋಜನೆಗೆ ಬಿ.ಎಂ.ಆರ್.ಸಿ.ಎಲ್ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಗ್ಗಾ ರೆಡ್ಡಿ ಅವರು ನೀಡಿದ ವರದಿಯ ಮೇಲೆ ಅನುಮೋದಿಸಿತ್ತು. ರೆಡ್ಡಿ ಅವರು ನೀಡಿದ ವರದಿ ಎಲ್ಲಿದೆ? ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳು ಹೆಗ್ಗ ರೆಡ್ಡಿ ವರದಿಯನ್ನು ಸಾರ್ವಜನಿಕ ಮಾಡಬೇಕು. ! ಅಷ್ಟಕ್ಕೂ ವರದಿಯನ್ನು ಗೌಪ್ಯವಾಗಿ ಇಡುವ ಔಚಿತ್ಯವೇನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು ಟನಲ್ ರಸ್ತೆಗೆ ಭೂಮಿಯನ್ನು ಕೊರೆಯಬೇಕು. ಇದು ತಾಂತ್ರಿಕವಾಗಿ ಕಾರ್ಯಸಾಧುವೇ ಎಂದು ತಜ್ಞರನ್ನು, ಭೂ ವಿಜ್ಞಾನಿಗಳ ಅಭಿಪ್ರಾಯವನ್ನು ಸರ್ಕಾರ ಪಡೆದಿದೆಯೇ ?
🔸16.75 ಕಿ.ಮೀ. ಇರುವ ಈ ಸುರಂಗ ಮಾರ್ಗಕ್ಕೆ ಒಂದು ಬಾರಿ ಪ್ರಯಾಣ ಮಾಡುವುದಕ್ಕೆ 330 ರೂ ಟೋಲ್ ಕಟ್ಟಬೇಕು
🔸ಈ ಸುರಂಗ ಮಾರ್ಗದ ಪ್ರವೇಶ ಹಾಗೂ ನಿರ್ಗಮನ [ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ ] ಗಳಲ್ಲಿ ಬೃಹತ್ ಟ್ರಾಫಿಕ್ ಜಾಮ್ ಆಗುತ್ತದೆ
🔸ಸದರಿ ಯೋಜನೆಯು ರಾಜ್ಯದ 2.7% ರಷ್ಟು ಜನಸಂಖ್ಯೆಗೆ ಉಪಯುಕ್ತವಾಗುತ್ತದೆ, ಆದರೆ, ಸಾಲದ ಹೊರೆಯನ್ನು 7 ಕೋಟಿ ಕನ್ನಡಿಗರ ಮೇಲೆ ಹೊರೆಸುತ್ತದೆ
🔸ಟನಲ್ ರೋಡ್ ನ Passengers Per Hour Per Direction [PPHPD] ನ ಸಾಮರ್ಥ್ಯ =1,800
🔸ಅದೇ, ಮೆಟ್ರೋ ನ Passengers Per Hour Per Direction [PPHPD] ನ ಸಾಮರ್ಥ್ಯ - 69,000
🔸ಮೆಟ್ರೋ ಪ್ರತಿ ಕಿ.ಮೀ ವೆಚ್ಚ 500 ಕೋಟಿ.
🔸 ಸಬರ್ಬನ್ ರೈಲ್ ಪ್ರತಿ ಕಿ.ಮೀ. ವೆಚ್ಚ 110 ಕೋಟಿ
🔸 ಈ ಯೋಜನೆಗೆ Environmental Impact Assessment ಆಗಿರುವುದಿಲ್ಲ
🔸 ಟನಲ್ ರೋಡ್ ಪ್ರತಿ ಕಿ.ಮೀ ವೆಚ್ಚ 1,000 ಕೋಟಿ
🔸 ಈ ಸುರಂಗ ಮಾರ್ಗವು ಲಾಲ್‌ಬಾಗ್‌ನ 6 ಎಕರೆಯಷ್ಟು ಜಾಗವನ್ನು ಆಹುತಿ ಪಡೆಯಲಿದೆ.
🔸 ಸುರಂಗ ಮಾರ್ಗ ನಿರ್ಮಿಸಲು ಲಾಲ್‌ಬಾಗ್‌ನ ಕಲ್ಲುಗಳನ್ನು ಕೊರೆಯಬೇಕಾಗಿರುವುದರಿಂದ [rock rupture] ಲಾಲ್ ಬಾಗ್ ನ ಕೆರೆಯಿಂದ ನೀರು ಸೋರಿಕೆಯಾಗಿ ಅಕ್ಕ ಪಕ್ಕದಲ್ಲಿರುವ ಕಟ್ಟಡಗಳಿಗೆ ಹಾನಿ ಆಗಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
🔸ಲಾಲ್ ಬಾಗ್ ನಲ್ಲಿರುವ ಕಲ್ಲುಗಳನ್ನು 'ಪಾರಂಪರಿಕ ತಾಣ' [heritage site ] ಎಂದು GSI ಘೋಷಿಸಿದೆ. ಲಾಲ್ ಬಾಗ್ ನಲ್ಲಿರುವ ಕಲ್ಲುಗಳು ಧಾರವಾಡ ಕ್ರಾಟನ್ ನ ಒಂದು ಭಾಗ ಎಂದು ಈಗಾಗಲೇ GSI ಹೇಳಿದೆ. ಸದರಿ rock system ನಿಂದ ಭೂಕಂಪ ಆಗುವುದಿಲ್ಲ. ಒಂದು ವೇಳೆ, ಇಲ್ಲಿ ಸುರಂಗ ಮಾರ್ಗಕ್ಕೆ ಕಲ್ಲುಗಳನ್ನು ಕೊರೆದರೆ ಭೂಕಂಪದ ಆತಂಕವನ್ನು ನಾವು ಎದುರಿಸಬೇಕಾಗುತ್ತದೆ.
ಅಲ್ಲದೇ, ಇದು 'ಸುರಕ್ಷಿತ ಪ್ರದೇಶ' [protected site] ಆಗಿರುವುದರಿಂದ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಇಂದ ಅನುಮತಿ ಪಡೆದೆ ಇಲ್ಲಿ ಕಲ್ಲುಗಳನ್ನು ಕೊರೆಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಎಲ್ಲಾ ಕಾರಣಕ್ಕೆ ಬೆಂಗಳೂರು ಟನಲ್ ರೋಡ್ ಬೇಡ ಎಂದು ಹೇಳಲಾಗಿದೆ.












Click it and Unblock the Notifications