ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೇಜ್ರಿವಾಲ್ ಜತೆ ಊಟ ಮಾಡಿದ 200 ಜನ

|
Google Oneindia Kannada News

ಬೆಂಗಳೂರು, ಜ. 11 : 'ಬಡವರು ನೀಡುವ ದುಡ್ಡಲ್ಲಿ ಚುನಾವಣೆ ಎದುರಿಸುತ್ತೇನೆ. ದೆಹಲಿಯಲ್ಲಿ ಮತ್ತೇ ಅಧಿಕಾರ ಹಿಡಿಯುತ್ತೇವೆ' ಎಂಬ ವಿಶ್ವಾಸದ ಮಾತುಗಳನ್ನಾಡಿದವರು ಆಮ್ ಆದ್ಮಿ ಪಕ್ಷವನ್ನು ನಾಯಕ ಅರವಿಂದ್ ಕೇಜ್ರಿವಾಲ್.

ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ದೇಣಿಗೆ ಸಂಗ್ರಹಕ್ಕೆ ಕೇಜ್ರಿವಾಲ್ ಜತೆ ಭೋಜನ' ಕಾರ್ಯಕ್ರಮದಲ್ಲಿ ಮಾತನಾಡಿ, ಆಮ್ ಆದ್ಮಿ ಪಕ್ಷದಿಂದ ಮಾತ್ರ ಬದಲಾವಣೆ ಸಾಧ್ಯ. ಎಂದು ಹೇಳಿದರು. [ಒಂದು ಊಟಕ್ಕೆ 20 ಸಾವಿರ ರೂ.!]

Arvind Kejriwal

ಬಿಜೆಪಿಯವರು ಕೈಗಾರಿಕೋದ್ಯಮಿಗಳ ಹಣ ಬಳಸಿಕೊಂಡು ಅಧಿಕಾರ ಹಿಡಿದಿದ್ದಾರೆ. ಈಗ ಜನರ ಹಿತ ಬಲಿಕೊಟ್ಟು ಅವರಿಗೆ ನೆರವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಆಮ್ ಆದ್ಮಿ ಪಕ್ಷ ಪ್ರತಿಭಟನೆಗೆ ಸೀಮಿತ ಎಂಬ ಟೀಕೆ ಮಾಡಲಾಗುತ್ತಿದೆ. ಸತ್ಯಾಗ್ರಹ ನಮ್ಮ ಜನ್ನ ಸಿದ್ಧ ಹಕ್ಕು. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಸತ್ಯಾಗ್ರಹದ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಸಾಧ್ಯವಾಯಿತು ಎಂಬ ಸಂಗತಿಯನ್ನು ಯಾರೂ ಮರೆಯಬಾರದು ಎಂದು ಹೇಳಿದರು. [3 ಲಕ್ಷ ರು. ಇಟ್ಟು ಕೇಜ್ರಿವಾಲ್ ಜೊತೆ ಊಟ ಮಾಡಿ!]

ಕೇಜ್ರಿವಾಲ್ ಜತೆ 200 ಜನ ಭೋಜನ ಮಾಡಿದರು. ಆಮ್ ಆದ್ಮಿ ಪಕ್ಷ ಪ್ರತಿಯೊಬ್ಬರಿಂದ ತಲಾ 20 ಸಾವಿರ ರೂ. ಸಂಗ್ರಹಿಸಿತು. ಇನ್ನು ಕೇಜ್ರಿವಾಲ್ ಜತೆ ಸೆಲ್ಫೀ ಫೋಟೋ ಕ್ಲಿಕ್ಕಿಸಿಕೊಳ್ಳಲು 500 ರೂ. ನಿಗದಿ ಮಾಡಲಾಗಿತ್ತು.

English summary
Bengaluru: We need development, not anarchy. They are good at dharnas... we are good at running government' Aam Aadmi Party (AAP) leader Arvind Kejriwal said on Sunday at Bengaluru. He attended the party fund raise programme at woodlands hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X