Bengaluru Property: ಬೆಂಗಳೂರಿನ ಈ 20 + ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ: ರಿಯಲ್ ಎಸ್ಟೇಟ್‌ಗೆ ಬೆಸ್ಟ್!
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭೂಮಿಗೆ ಅಕ್ಷರಶಃ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭೂಮಿ ಹಾಗೂ ಪ್ರಾಪರ್ಟಿಗಳ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬೆಂಗಳೂರು ಬಹಳ ಹಿಂದಿನಿಂದಲೂ ಭೂಮಿಗೆ ಒಳ್ಳೆಯ ಬೆಲೆ ಇದೆ. ಇದೀಗ ವಿವಿಧ ಯೋಜನೆಗಳ ಅನುಷ್ಠಾನದ ಕಾರಣಕ್ಕೆ ಭೂಮಿಯ ಬೆಲೆ ಹೆಚ್ಚಳವಾಗಲು ಶುರುವಾಗಿದೆ. ಅಲ್ಲದೇ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನಿರಂತರವಾಗಿ ಹೂಡಿಕೆಯೂ ಸಹ ಹೆಚ್ಚಾಗುತ್ತಿದೆ.
ಬೆಂಗಳೂರಿನ ನಾಲ್ಕೂ ದಿಕ್ಕೂಗಳಲ್ಲೂ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಒಂದೊಂದು ಪ್ರದೇಶದಲ್ಲಿ ಒಂದೊಂದು ಕಾರಣಕ್ಕೆ ಪ್ರಾಪರ್ಟಿ ಬೆಲೆ ಹೆಚ್ಚಳವಾಗುತ್ತಿದೆ. ಯಾವ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿದೆ, ಕಾರಣವೇನು ಹಾಗೂ ಯಾವ ಪ್ರದೇಶದ ಪ್ರಾಪರ್ಟಿಯ ಮೇಲೆ ಹೂಡಿಕೆ ಹೆಚ್ಚಾಗಿದೆ ಎನ್ನುವ ವಿವರ ನೋಡೋಣ. ಈ ಬಗ್ಗೆ Trade Brains Money ವರದಿ ಮಾಡಿದೆ.

1. ಉತ್ತರ ಬೆಂಗಳೂರು - ವಿಮಾನ ನಿಲ್ದಾಣ ಪ್ರಮುಖ ಕಾರಣ
ಉತ್ತರ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ದೇವನಹಳ್ಳಿ, ಬಳ್ಳಾರಿ ರಸ್ತೆ, ಹೆಣ್ಣೂರು, ದೊಡ್ಡಬಳ್ಳಾಪುರ ರಸ್ತೆ, KIADB ಏರೋಸ್ಪೇಸ್ ಪಾರ್ಕ್, ಥಣಿಸಂದ್ರ, ಹೆಬ್ಬಾಳ, ಬಾಗಲೂರು ಹಾಗೂ ಯಲಹಂಕ ಭಾಗದಲ್ಲಿ ಪ್ರಾಪರ್ಟಿಗೆ ಒಳ್ಳೆಯ ಬೆಲೆ ಇದೆ.
ಐಷಾರಾಮಿ ವಸತಿ, ಪ್ಲಾಟ್ ಅಭಿವೃದ್ಧಿಗಳು, ಕೈಗಾರಿಕಾ ಕೇಂದ್ರೀಕರಣ ಕಾರಣಕ್ಕೆ ಈ ಭಾಗದಲ್ಲಿ ಪ್ರಾಪರ್ಟಿಗೆ ಒಳ್ಳೆಯ ಬೇಡಿಕೆ ಇದೆ.
ಸರಾಸರಿ ಆಸ್ತಿ ಬೆಲೆಗಳು (ಪ್ರತಿ ಚದರ ಅಡಿಗೆ): ಹೆಬ್ಬಾಳದಲ್ಲಿ 7500 ರಿಂದ 10,000 ಸಾವಿರ ರೂಪಾಯಿ, ಯಲಹಂಕದಲ್ಲಿ 6000 ಸಾವಿರ ರೂಪಾಯಿಯಿಂದ 8500, ದೇವನಹಳ್ಳಿಯಲ್ಲಿ 4500 ರಿಂದ 6500 ರೂಪಾಯಿ ಹಾಗೂ ಥಣಿಸಂದ್ರದಲ್ಲಿ 11,000 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತಿದೆ.
2. ಪೂರ್ವ ಬೆಂಗಳೂರು - ಐಟಿ ಟೆಕ್ ಬೆಲ್ಟ್ ವಿಸ್ತರಣೆ
ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಾಪರ್ಟಿ ಬೆಲೆ ಇರುವ ಅಥವಾ ಆಕರ್ಷಕ ಬೆಲೆಯನ್ನು ಹೊಂದಿರುವ ಪ್ರದೇಶದಲ್ಲಿ ಬೆಂಗಳೂರು ಪೂರ್ವ ಪ್ರದೇಶವೂ ಸಹ ಸೇರಿದೆ. ವೈಟ್‌ಫೀಲ್ಡ್, ಸರ್ಜಾಪುರ, ವರ್ತೂರು, ಬೂದಿಗೆರೆ ಕ್ರಾಸ್, ಹಳೆಯ ಮದ್ರಾಸ್ ರಸ್ತೆ, ಕೆ.ಆರ್ ಪುರಂ, ಹೊಸಕೋಟೆ, ಹೂಡಿ, ಬೆಳ್ಳಂದೂರು ಪೂರ್ವ ಪ್ರದೇಶಗಳಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ.
ಸರಾಸರಿ ಆಸ್ತಿ ಬೆಲೆಗಳು (ಪ್ರತಿ ಚದರ ಅಡಿಗೆ): ವೈಟ್‌ಫೀಲ್ 7000 ರೂಪಾಯಿಯಿಂದ 9500 ರೂಪಾಯಿ, ಬೆಳ್ಳಂದೂರು ಪೂರ್ವ - 8000 ಸಾವಿರ ರೂಪಾಯಿಯಿಂದ 10,000, ಬೂದಿಗೆರೆ ಕ್ರಾಸ್ 4500 ಸಾವಿರ ರೂಪಾಯಿಯಿಂದ 5800 ರೂಪಾಯಿ, ಹೂಡಿ 6500 ರೂಪಾಯಿಯಿಂದ 8000, ಕೆಆರ್ ಪುರಂ 5000 ಸಾವಿರ ರೂಪಾಯಿಯಿಂದ 7000 ಸಾವಿರ ರೂಪಾಯಿ ಇದೆ.
3. ದಕ್ಷಿಣ ಬೆಂಗಳೂರು- ಉತ್ತಮ ವಸತಿ ಪ್ರದೇಶ
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಚರ್ಚೆ ಸೇರಿದಂತೆ ಹಲವು ಕಾರಣಗಳಿಗೆ ಈ ಪ್ರದೇಶದಲ್ಲೂ ಪ್ರಾಪರ್ಟಿ ಬೆಲೆ ಹೆಚ್ಚಳವಾಗುತ್ತಿದೆ. ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಜೆಪಿ ನಗರ, ಜಯನಗರದ ಹೊರವಲಯಗಳು, ಹೊಸೂರು ರಸ್ತೆಯ ಕೆಲವು ಭಾಗಗಳು, ಎಚ್‌ಎಸ್‌ಆರ್ ಲೇಔಟ್, ಬೇಗೂರು, ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಪ್ರಾಪರ್ಟಿಗೆ ಬಂಗಾರದ ಬೆಲೆ ಇದೆ.
ಸರಾಸರಿ ಆಸ್ತಿ ಬೆಲೆಗಳನ್ನು ನೋಡುವುದಾದರೆ ಪ್ರತಿ ಚದರ ಅಡಿಗೆ ಎಲೆಕ್ಟ್ರಾನಿಕ್ ಸಿಟಿ 5000 ಸಾವಿರ ರೂಪಾಯಿಯಿಂದ ಇದೆ. ಜೆಪಿ ನಗರ 6000 ಸಾವಿರ ರೂಪಾಯಿಂದ 9500 ಸಾವಿರ ರೂಪಾಯಿ, ಎಚ್‌ಎಸ್‌ಆರ್ ಲೇಔಟ್ 6000 ಸಾವಿರದಿಂದ 9500 ಸಾವಿರ ರೂಪಾಯಿ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಯಲ್ಲಿ 7500 ಸಾವಿರ ರೂಪಾಯಿಯಿಂದ 10,500 ಸಾವಿರ ರೂಪಾಯಿ ಇದೆ.
4. ಪಶ್ಚಿಮ ಬೆಂಗಳೂರು - ಕಾರಿಡಾರ್‌ನಿಂದ ಹೆಚ್ಚುತ್ತಿರುವ ಮೌಲ್ಯ
ಕಾರಿಡಾರ್ ಅಭಿವೃದ್ಧಿ, ದೊಡ್ಡ ಪ್ರದೇಶ ಹಾಗೂ ಮೆಟ್ರೋ ವಿಸ್ತರಣೆ ಸೇರಿದಂತೆ ಹಲವು ಕಾರಣಗಳಿಗೆ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ತುಮಕೂರು ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ಕೆಂಗೇರಿಯಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಮುಖ್ಯವಾಗಿ ಈ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಪ್ರಾಪರ್ಟಿಗೆ ಬೂಸ್ಟ್ ನೀಡಿದೆ.
ಸರಾಸರಿ ಆಸ್ತಿ ಬೆಲೆಗಳನ್ನು ನೋಡುವುದಾದರೆ ಪ್ರತಿ ಚದರ ಅಡಿಗೆ ಮಾಗಡಿ ರಸ್ತೆ 9500 ಸಾವಿರ ರೂಪಾಯಿಂದ ಪ್ರಾರಂಭವಾಗುತ್ತಿದೆ. ನಾಗರಬಾವಿ 9812 ರೂಪಾಯಿಯಿಂದ ಕೆಂಗೇರಿ 5800 ರೂಪಾಯಿಯಿಂದ 6600 ರೂಪಾಯಿಯ ವರೆಗೆ ಇದೆ.
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ.












Click it and Unblock the Notifications